ಬೈಂದೂರು : ಮರವಂತೆಯಲ್ಲಿ ನಿರ್ಮಾಣವಾಗುತ್ತಿರುವ ಮೀನುಗಾರಿಕಾ ಹೊರಬಂದರು ಕಾಮಗಾರಿ ಕುಂಟುತ್ತಸಾಗಿರುವುದನ್ನು ಆಕ್ಷೇಪಿಸಿದ ಶಾಸಕ ಕೆ. ಗೋಪಾಲ ಪೂಜಾರಿ ಅದನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಕಾಮಗಾರಿ ಪ್ರಗತಿ ವೀಕ್ಷಿಸಿ, ಅಧಿಕಾರಿಗಳ ಮತ್ತು ಮೀನುಗಾರ ಪ್ರಮುಖರ ಜತೆ ಚರ್ಚಿಸಿದರು. ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಟಿ. ಎಸ್. ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್ ಗುತ್ತಿಗೆದಾರ ಕಂಪನಿಯ ಪ್ರತಿನಿಧಿ ಶೀನಿವಾಸ್ ಶಾಸಕರಿಗೆ ಈ ವರೆಗಿನ ಪ್ರಗತಿಯ ವಿವರ ನೀಡಿದರು.
ಪಶ್ಚಿಮದ ತಡೆಗೋಡೆ ಕೆಲಸ ಇನ್ನೂ ಆರಂಭವಾಗದಿರುವುದಿಂದ ಮಳೆಗಾಲದಲ್ಲಿ ಕಡಲತಡಿ ಕೊರೆತ ಸಂಭವಿಸುವುದೆಂದು ಮೀನುಗಾರರು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಅಂತಹ ಸಂದರ್ಭದಲ್ಲಿ ಲಭ್ಯವಿರುವ ಟೆಟ್ರಾಪಾಡ್ಗಳನ್ನು ಬಳಸಿ ತೀರಪ್ರದೇಶಕ್ಕೆ ತಾತ್ಕಾಲಿಕ ರಕ್ಷಣೆ ಒದಗಿಸಲಾಗುವುದೆಂದರು.
ತಾಪಂ ಸದಸ್ಯ ಎಸ್. ರಾಜು ಪೂಜಾರಿ, ಬಂದರು ಸಮಿತಿಯ ಅಧ್ಯಕ್ಷ ರಾಮಕೃಷ್ಣ ಖಾರ್ವಿ, ಮೀನುಗಾರ ಪ್ರಮುಖರಾದ ಸೋಮಯ್ಯ ಖಾರ್ವಿ, ಸಂಜೀವ ಖಾರ್ವಿ, ಇತರರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.