ನವದೆಹಲಿ: ಈಶಾನ್ಯ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕಳೆದ ಎರಡು ತಿಂಗಳಲ್ಲಿ ಒಟ್ಟು 45 ಮಯನ್ಮಾರ್ ರೊಹಿಂಗ್ಯಾಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಈಶಾನ್ಯ ಗಡಿನಾಡು ರೈಲ್ವೆಯ (ಎನ್ಎಫ್ಆರ್) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುಭಾನನ್ ಚಂದಾ ಈ ಬಗ್ಗೆ ಮಾತನಾಡಿ, ನವದೆಹಲಿಗೆ ಹೊರಟ ರಾಜಧಾನಿ ವಿಶೇಷ ರೈಲಿನಲ್ಲಿದ್ದ ಐದು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ 10 ರೋಹಿಂಗ್ಯಾಗಳನ್ನು ಬುಧವಾರ ಬಂಧಿಸಲಾಗಿದೆ. ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ನಿಲ್ದಾಣದಿಂದ ರೈಲ್ವೆ ಭದ್ರತಾ ಸಿಬ್ಬಂದಿಗಳು ಇವರನ್ನು ಕೂಡಲೇ ರೈಲಿನಿಂದ ಇಳಿಸಿದರು ಎಂದಿದ್ದಾರೆ.
ವಿಚಾರಣೆಯ ವೇಳೆ ಅವರು ರೋಹಿಂಗ್ಯಾ ಸಮುದಾಯಕ್ಕೆ ಸೇರಿದವರು ಎಂಬುದನ್ನು ಬಹಿರಂಗಪಡಿಸಿದರು ಮತ್ತು ತ್ರಿಪುರದ ಅಗರ್ತಲಾ ನಿಲ್ದಾಣದಿಂದ ಇವರು ರೈಲು ಹತ್ತಿದರು ಎಂದು ಚಂದಾ ಹೇಳಿದ್ದಾರೆ.
“ವಿದೇಶಿ ಪ್ರಜೆಗಳು ಜನವರಿ 10 ರಂದು ಬಾಂಗ್ಲಾದೇಶದ ಕೊಮಿಲ್ಲಾದಿಂದ ಭಾರತದ ತ್ರಿಪುರಕ್ಕೆ ತೆರಳಿ ಏಜೆಂಟರ ಸಹಾಯದಿಂದ ಅಗರ್ತಲಾದಿಂದ ರೈಲು ಹತ್ತಿದರು. ಅವರು ಬಾಂಗ್ಲಾದೇಶದ ಕಾಕ್ಸ್ ಬಜಾರ್ನಲ್ಲಿರುವ ಕುಟುಪಲೋಂಗ್ ನಿರಾಶ್ರಿತರ ಶಿಬಿರದಿಂದ ಬಂದಿದ್ದರು” ಎಂದು ಅವರು ಹೇಳಿದ್ದಾರೆ.
ಬಂಧಿತರೆಲ್ಲರನ್ನೂ ನ್ಯೂ ಜಲ್ಪೈಗುರಿಯಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸರಿಗೆ (ಜಿಆರ್ಪಿ) ಹಸ್ತಾಂತರಿಸಲಾಯಿತು. ಅಸ್ಸಾಂ ಪೊಲೀಸರು, ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮತ್ತು ಜಿಆರ್ಪಿ ಸೈನಿಕರು ಕಳೆದ ಎರಡು ತಿಂಗಳ ಅವಧಿಯಲ್ಲಿ ಮಕ್ಕಳು ಮತ್ತು ಮಹಿಳೆ ಸೇರಿದಂತೆ ಇನ್ನೂ 35 ರೋಹಿಂಗ್ಯಾಗಳನ್ನು ಪ್ರತ್ಯೇಕ ಘಟನೆಗಳಲ್ಲಿ ಬಂಧಿಸಿದ್ದಾರೆ. ಅವರು ಈಗ ಜೈಲಿನಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.