ಕೋವಿಡ್ -19 ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುತ್ತಿರುವ ಭಾರತ ಪ್ರಸ್ತುತ ಹೊಸ ಉದಯದತ್ತ ಹೆಜ್ಜೆ ಹಾಕುತ್ತಿದೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಕೈಗೊಂಡ ಹಲವಾರು ದೂರದೃಷ್ಟಿಯ ಕ್ರಮಗಳು ಮತ್ತು ಜಾರಿಗೆ ತಂದ ಸುಧಾರಣಾ ಕ್ರಮಗಳು 2021 ರಲ್ಲಿ ತಳಮಟ್ಟದ ಸ್ಪಷ್ಟವಾದ ಪ್ರಗತಿಯನ್ನು ಮೂಡಿಸುವುದನ್ನು ನಾವು ಕಾಣಬಹುದು. ಅವುಗಳಲ್ಲಿ ಒಂದು ದೇಶೀಯ ಬೇಡಿಕೆಯನ್ನು ಪೂರೈಸಲು ಜಾಗತಿಕ ಆಟಿಕೆ ತಾಣವಾಗುವತ್ತ ಮತ್ತು $ 90 ಬಿಲಿಯನ್ ಅಂದಾಜು ಮೊತ್ತದ ಮಾರುಕಟ್ಟೆಯನ್ನು ಪ್ರವೇಶಿಸಲು ಇಟ್ಟ ದಿಟ್ಟ ಹೆಜ್ಜೆ.
ಭಾರತದ ಜನಸಂಖ್ಯೆಯ 26% ರಷ್ಟು ಮಂದಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುವುದರಿಂದ, ದೇಶೀಯ ಆಟಿಕೆ ಮಾರುಕಟ್ಟೆ 2019 ರಲ್ಲಿ $ 1.75 ಬಿಲಿಯನ್ನಿಂದ 2024 ರ ವೇಳೆಗೆ $3.3 ಬಿಲಿಯನ್ಗೆ ಬೆಳೆಯಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಹೊಸ ಶಿಕ್ಷಣ ನೀತಿಯು ಶಾಲೆಗಳಲ್ಲಿ ವೃತ್ತಿಪರ ಶಿಕ್ಷಣ ಮತ್ತು ಸೈಕೋ-ಮೋಟಾರ್ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿರುವುದು ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಭಾರತವನ್ನು ಉತ್ಪಾದನಾ ತಾಣವಾಗಿ ಪ್ರೋತ್ಸಾಹಿಸುತ್ತದೆ ಮತ್ತು ಪೂರೈಕೆ ಸರಪಳಿಗಳನ್ನು ಮರುಹೊಂದಿಸುತ್ತದೆ.
ಆತ್ಮನಿರ್ಭರ ಭಾರತ ಯೋಜನೆಯಡಿ “ವೋಕಲ್ ಫಾರ್ ಲೋಕಲ್” ಮತ್ತು “ಮೇಕ್ ಇನ್ ಇಂಡಿಯಾ” ಅನ್ನು ಉತ್ತೇಜಿಸುವ ಮೂಲಕ ದೇಶೀಯ ಆಟಿಕೆ ಉದ್ಯಮದಲ್ಲಿ ಪರಿವರ್ತಕ ಬದಲಾವಣೆಗಳನ್ನು ತರಲು ಒತ್ತು ನೀಡಿದ್ದರಿಂದ ಭಾರತೀಯ ಆಟಿಕೆಗಳ ಜಾಗತಿಕರಣಕ್ಕೆ ಹೆಚ್ಚು ಅಗತ್ಯವಿರುವ ಸರ್ಕಾರದ ಉತ್ತೇಜನ ಸ್ಪಷ್ಟವಾಗಿದೆ. ಕಾರ್ಮಿಕರ ಹೆಚ್ಚಿನ ಅಗತ್ಯವಿರುವ ಉದ್ಯಮವು ಚೀನಾ ವಿರುದ್ಧ ಪರಿಣಾಮಕಾರಿಯಾಗಿ ಸ್ಪರ್ಧಿಸಲು ಭಾರತಕ್ಕೆ ಸಹಾಯ ಮಾಡಬಲ್ಲದು ಮತ್ತು ಎಂಎಸ್ಎಂಇ ವಲಯವನ್ನು ಬೆಂಬಲಿಸುವ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ನೆರವಾಗಬಲ್ಲದು. ಆಮದು ಮಾಡಿದ ಆಟಿಕೆಗಳ ಮೇಲಿನ ಸುಂಕವನ್ನು ಹೆಚ್ಚಿಸುವುದು, ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿರುವ ಗುಣಮಟ್ಟದ ನಿಯಂತ್ರಣ ಆದೇಶವನ್ನು ನೀಡುವುದು ಮತ್ತು ಅಗತ್ಯಕ್ಕಾಗಿ 14 ಕೇಂದ್ರ ಸಚಿವಾಲಯಗಳನ್ನು ಒಳಗೊಳ್ಳುವ ಗುರಿ ಹೊಂದಿರುವ ಉದ್ಯಮಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ರೂಪಿಸುವುದು ಸೇರಿದಂತೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ದೇಶಾದ್ಯಂತ 13 ಟಾಯ್ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸಿ ಆಯಾ ಪ್ರದೇಶಗಳ ಆರ್ಥಿಕತೆಗೆ ಪ್ರಮುಖ ಉತ್ತೇಜನವನ್ನು ನೀಡುತ್ತಿದೆ. ದೇಶೀಯ ಆಟಿಕೆ ತಯಾರಿಕೆಯನ್ನು ಉತ್ತೇಜಿಸುವ ಉಪಕ್ರಮದ ಭಾಗವಾಗಿ ಕೇಂದ್ರವು ರಾಷ್ಟ್ರೀಯ ಆಟಿಕೆ ಮೇಳವನ್ನು ಯೋಜಿಸುತ್ತಿದೆ.
ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಟಿಕೆ ತಯಾರಿಸುವ ಪ್ರಮುಖ ಕಂಪನಿಗಳಿಗೆ ಅನುಕೂಲವಾಗುವಂತೆ ಅನೇಕ ರಾಜ್ಯ ಸರ್ಕಾರಗಳು ಈಗಾಗಲೇ ಕಾರ್ಯೋನ್ಮುಖಗೊಂಡಿವೆ. ಕೊಪ್ಪಳದಲ್ಲಿ ದೇಶದ ಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ 400 ಎಕರೆ ಎಸ್ಇಝಡ್ ಭೂಮಿಯಲ್ಲಿ ಬರಲಿದೆ, ಇದನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ. ಈ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ ರೂ.5,000 ಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುತ್ತದೆ ಮತ್ತು 40,000 ಉದ್ಯೋಗಗಳನ್ನು ಗಳಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ ಉತ್ತರ ಪ್ರದೇಶ ಸರ್ಕಾರ ಗ್ರೇಟರ್ ನೋಯ್ಡಾದಲ್ಲಿ ಉದ್ದೇಶಿತ 100 ಎಕರೆ ಆಟಿಕೆ ಉತ್ಪಾದನಾ ಕೇಂದ್ರದಲ್ಲಿ ರೂ. 3,000 ಕೋಟಿ ಹೂಡಿಕೆ ನಿರೀಕ್ಷಿಸುತ್ತಿದೆ.
ಯುಎಸ್, ಕೆನಡಾ, ಯುರೋಪ್, ಜಪಾನ್ನಾದ್ಯಂತ ಜಾಗತಿಕ ಆಟಿಕೆ ತಯಾರಕರಿಗೆ ಗುಜರಾತ್ ಪತ್ರ ಬರೆದಿದ್ದು, ರಾಜ್ಯದಲ್ಲಿ ಉದ್ಯಮವನ್ನು ಸ್ಥಾಪಿಸಿದರೆ ಸಾಧ್ಯವಾದಷ್ಟು ಉತ್ತಮ ಸಹಾಯವನ್ನು ಮಾಡುವುದಾಗಿ ಹೇಳಿದೆ. ದೇಶದ 32.6% ಆಟಿಕೆ ರಫ್ತಿಗೆ ಕೊಡುಗೆ ನೀಡುವ ಮಹಾರಾಷ್ಟ್ರವು ಖಲಾಪುರ, ಶಹಾಪುರ, ನಾಸಿಕ್, ಮಾಲೆಗಾಂವ್, ಸೋಲಾಪುರ, ಇತರ ಸ್ಥಳಗಳಲ್ಲಿ ಕ್ಲಸ್ಟರ್ಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ಪಶ್ಚಿಮ ಬಂಗಾಳ ಎಕ್ಸಿಮ್ ಅಸೋಸಿಯೇಷನ್ ರಾಜ್ಯದಲ್ಲಿ ಆಟಿಕೆ ಉದ್ಯಾನವನ ಸ್ಥಾಪಿಸಲು ರಾಜ್ಯ ಸರ್ಕಾರದಿಂದ ಭೂಮಿಯನ್ನು ಕೋರಿದೆ.
ರಫ್ತು ಸಬ್ಸಿಡಿಗಳು, ಸಿಂಗಲ್ ವಿಂಡೋ ಕ್ಲಿಯರೆನ್ಸ್, ಹಣಕಾಸಿನ ಪ್ರೋತ್ಸಾಹ, ತಂತ್ರಜ್ಞಾನದ ಉನ್ನತೀಕರಣ ರೂಪದಲ್ಲಿ ಕೇಂದ್ರದ ಬೆಂಬಲವು ದೇಶೀಯ ಆಟಿಕೆ ಉತ್ಪಾದನೆ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಎಐ (ಕೃತಕ ಬುದ್ಧಿಮತ್ತೆ) ಮತ್ತು ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್)-ಶಕ್ತಗೊಂಡ ಆಟಿಕೆಗಳ ತಯಾರಿಕೆಯೊಂದಿಗೆ ತಂತ್ರಜ್ಞಾನದತ್ತ ವೇಗವಾಗಿ ಚಲಿಸುತ್ತಿರುವ ಆಟಿಕೆ ಉದ್ಯಮದ ವಿಕಾಸದ ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡಲು ದೇಶದಲ್ಲಿ 4-5 ಲಕ್ಷ ಕುಶಲಕರ್ಮಿಗಳನ್ನು ಮರು-ಕೌಶಲ್ಯ ಮಾಡುವುದು ಮತ್ತೊಂದು ಪ್ರಮುಖ ಅಂಶವಾಗಿದೆ.
ಹೆಚ್ಚು ತೊಡಗಿಸಿಕೊಳ್ಳುವಿಕೆ, ಕೌಶಲ್ಯ ವೈವಿಧ್ಯೀಕರಣ ಮತ್ತು ಉದ್ಯಮಶೀಲತೆಯ ಉತ್ಸಾಹದಿಂದ ಭಾರತೀಯ ಆಟಿಕೆ ಉದ್ಯಮದ ಪುನರುಜ್ಜೀವನವು ಸನ್ನಿಹಿತವಾಗಿದೆ. Aequs, Funskooನಂತಹ ಕಂಪನಿಗಳು ಈಗಾಗಲೇ ದೇಶದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರಿಸಿವೆ ಮತ್ತು ಯೋಜಿಸಿದಂತೆ ಕೆಲಸಗಳು ನಡೆದರೆ, ದೇಶದಲ್ಲಿ ಇನ್ನೂ ಅನೇಕ ಜಾಗತಿಕ ಮಳಿಗೆಗಳು ಸ್ಥಾಪನೆಯಾಗುವುದನ್ನು ನಾವು ನೋಡುತ್ತೇವೆ ಮತ್ತು ದೇಶದ ಯುವಕರಿಗೆ ದೊಡ್ಡ ಉದ್ಯೋಗಾವಕಾಶಗಳಳು ಸೃಷ್ಟಿಸುಯಾಗುತ್ತವೆ ಎಂಬುದರಲ್ಲಿ ಅನುಮಾನವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.