ಜೆರುಸಲೆಮ್: ಭಾರತ ಮತ್ತು ಇಸ್ರೇಲ್ ತಮ್ಮ ಯುದ್ಧ ಸಾಮರ್ಥ್ಯಗಳಿಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (MRSAM) ರಕ್ಷಣಾ ವ್ಯವಸ್ಥೆಯ ಯಶಸ್ವಿ ಪರೀಕ್ಷೆಯನ್ನು ನಡೆಸಿವೆ. ಈ ವ್ಯವಸ್ಥೆಯನ್ನು ಉಭಯ ದೇಶಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಶತ್ರು ವಿಮಾನಗಳಿಂದ ಪ್ರಬಲ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ.
ಟ್ವಿಟ್ ಮಾಡಿರುವ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ), “ಐಎಐ ಮತ್ತು ಡಿಆರ್ಡಿಓ ಕಳೆದ ವಾರ ಭಾರತದ ಪರೀಕ್ಷಾ ವ್ಯಾಪ್ತಿಯಲ್ಲಿ MRSAM ವಾಯು ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. MRSAM ಒಂದು ಸುಧಾರಿತ ಮೈಲಿಗಲ್ಲು ಸಾಧಿಸಬಲ್ಲ ಗಾಳಿ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದ್ದು, ಇದು ವಿವಿಧ ವೈಮಾನಿಕ ವೇದಿಕೆಗಳ ವಿರುದ್ಧ ಅಂತಿಮ ರಕ್ಷಣೆ ನೀಡುತ್ತದೆ” ಎಂದಿದೆ.
ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿದ್ದು, ಕಳೆದ ವಾರ ಪರೀಕ್ಷೆಯನ್ನು ಭಾರತೀಯ ಸೌಲಭ್ಯವೊಂದರಲ್ಲಿ ನಡೆಸಲಾಯಿತು ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಎಲ್ಲಾ ಅಂಶಗಳನ್ನು ಮೌಲ್ಯೀಕರಿಸಲಾಗಿದೆ ಎಂದಿದೆ.
ಈ ಕ್ಷಿಪಣಿಯನ್ನು ಐಎಐ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಜಂಟಿಯಾಗಿ ಅಭಿವೃದ್ಧಿಪಡಿಸಿವೆ, MRSAM ಅನ್ನು ಭಾರತೀಯ ಸೇನೆಯ ಮೂರು ವಿಭಾಗಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಬಳಸುತ್ತಿವೆ. ಇಸ್ರೇಲ್ ಮತ್ತು ಭಾರತದ ಇತರ ರಕ್ಷಣಾ ಕಂಪನಿಗಳ ಸಹಭಾಗಿತ್ವದಲ್ಲಿ ಇದನ್ನು ನಿರ್ಮಿಸಲಾಗಿದೆ.
🔊 on
IAI and @DRDO_India successfully test launch the MRSAM air defense system last week at a test range in India 💪
The MRSAM is an advanced path breaking air and missile defense system that provides ultimate protection against a variety of aerial platforms. pic.twitter.com/Wk4vWPWeQ9
— Israel Aerospace Industries (@ILAerospaceIAI) January 5, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.