ನವದೆಹಲಿ: ಪಾಕಿಸ್ಥಾನದ ಐಎಸ್ಐನ ಮಾಜಿ ಡೈರೆಕ್ಟರ್ ಜನರಲ್ ಹಮೀದ್ ಗುಲ್ ಅವರದ್ದು ಎಂದು ಹೇಳಲಾದ ಟ್ವಿಟರ್ ಅಕೌಂಟ್ನಿಂದ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮಾ ಮತ್ತು ನಾಗಸಾಕಿಯಾಗಿ ಪರಿವರ್ತನೆಗೊಳಿಸುವ ಬೆದರಿಕೆ ಟ್ವಿಟ್ ಹಾಕಲಾಗಿದೆ.
‘ಭಾರತ ತನ್ನ ರೀತಿಯನ್ನುಸರಿಪಡಿಸಿಕೊಳ್ಳಬೇಕು, ಇಲ್ಲದೇ ಹೋದರೆ ದೆಹಲಿ ಮತ್ತು ಮುಂಬಯಿಯನ್ನು ಹಿರೋಶಿಮ ಮತ್ತು ನಾಗಸಾಕಿ ಮಾಡಲು ನಾವು ಹಿಂಜರಿಯುವುದಿಲ್ಲ’ ಎಂದು ಟ್ವಿಟರ್ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಹಿರೋಶಿಮದ ಮೇಲೆ ಅಮೆರಿಕ ಅಣುಬಾಂಬ್ ಹಾಕಿದ 70ನೇ ವರ್ಷವನ್ನು ಇಂದು ನೆನಪು ಮಾಡಿಕೊಳ್ಳಲಾಗುತ್ತಿದೆ. ಇದೇ ದಿನ ಪಾಕ್ ಮಾಜಿ ಜನರಲ್ ಹೆಸರಿನಲ್ಲಿ ಈ ಟ್ವಿಟ್ ಬಂದಿದೆ.
ಈ ಹಿಂದೆಯೂ ಹಲವಾರು ಬಾರಿ ಗುಲ್ ಭಾರತಕ್ಕೆ ಎಚ್ಚರಿಕೆ ನೀಡಿದೆ, ಕಾಶ್ಮೀರಿಗರನ್ನು ಭಾರತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ, ಪಾಕ್ನ ಆಂತರಿಕ ವಿಚಾರಕ್ಕೆ ತಲೆ ಹಾಕುತ್ತಿದೆ ಎಂದೆಲ್ಲಾ ಕಿಡಿಕಾರಿದ್ದರು.
ಆದರೀಗ ಭಾರತದ ಮಹಾನಗರಗಳನ್ನು ಹಿರೋಶಿಮಾ, ನಾಗಸಾಕಿಯಾಗಿ ಪರಿವರ್ತಿಸುವ ಬೆದರಿಕೆ ಹಾಕಿದ್ದಾನೆ. ಆದರೆ ಈ ಟ್ವಟಿರ್ ಅಕೌಂಟ್ನ ನಿಖರತೆಯ ಬಗ್ಗೆ ಇನ್ನೂ ಸ್ಪಷ್ಟನೆ ದೊರೆತಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.