ಉಡುಪಿ : ಓಂಕಾರಕ್ಕೆ ಪೇಟೆಂಟ್ ಪಡೆಯಲು ಜರ್ಮನಿ ಪ್ರಯತ್ನಿಸುತ್ತಿದೆ. ಭಾರತವು ಜರ್ಮನಿಗೆ ಪೆಟೇಂಟ್ ನೀಡುವುದನ್ನು ತಪ್ಪಿಸಲು ಪ್ರಬಲವಾದವನ್ನು ಮುಂದಿಡಬೇಕಾಗಿದೆ. ಭಾರತ ಮೌಲ್ಯಯುತ ಶಿಕ್ಷಣದ ಅಗತ್ಯವೂ ಇದೆ ಎಂದು ಧಾರವಾಡದ ಬಹುಶಾಸ್ತ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಪಿ.ಆರ್. ಪಂಚಮುಖೀ ಅವರು ತಿಳಿಸಿದ್ದಾರೆ
ನಗರದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಉಪನ್ಯಾನ ನೀಡುತ್ತಾ ಮಾತನಾಡಿನ ಅವರು, ಮೆಕಾಲೆ ಶಿಕ್ಷಣದಿಂದ ಭಾರತೀಯ ಸಂಸ್ಕೃತಿಯ ಮೌಲ್ಯಗಳು ಹಾಳಾಗಿವೆ. ಭಾರತದ ಪ್ರಾಚೀನ ಶಿಕ್ಷಣ ಮತ್ತೆ ಅನುಷ್ಠಾನಕ್ಕೆ ಬರಬೇಕು ಪ್ರಾಚೀನ ಶಿಕ್ಷಣದಲ್ಲಿ ಮೇಲು ಕೀಳುಗಳಿರಲಿಲ್ಲ. ಅಲ್ಲದೇ ಜನಾಂಗೀಯ ಶಿಕ್ಷಣ ಪದ್ಧತಿಯನ್ನು ಕೂಡ ಹೊಂದಿಲ್ಲ. ಅಲ್ಲದೆ ಸ್ತ್ರೀ – ಪುರುಷರಿಬ್ಬರೂ ಕೂಡ ಉನ್ನತ ಶಿಕ್ಷಣ ಪಡೆದಿದ್ದರೂ ಅವರಲ್ಲಿ ಭೇದವಿರುತ್ತಿರಲಿಲ್ಲ. ಅರ್ಹತೆ ಇರುವವರು ಮೇಲು ಕೀಳು ಎಂಬುದ ಮರೆತು ಬೋಧಿಸಿದ ಉಲ್ಲೇಖಗಳೂ ಇವೆ. ಆದರೆ ಬ್ರಿಟಿಷರು ನಮ್ಮ ಪ್ರಾಚೀನ ಪಾರಂಪರಿಕ ಮೌಲ್ಯಯುತ ಶಿಕ್ಷಣವನ್ನು ಹೀಯಾಳಿಸಿದರು. ಇದರ ಪರಿಣಾಮ ಇಂದು ಮೌಲ್ಯಾಧಾರಿತ ಶಿಕ್ಷಣ ಇಲ್ಲವಾಗುತ್ತಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.