ನವದೆಹಲಿ: ಡಿಜಿಟಲ್ ಪಾವತಿಗಳಿಗೆ ಮಹತ್ವದ ಉತ್ತೇಜನ ನೀಡುವ ಪ್ರಯತ್ನವಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಇಂದಿನಿಂದ ದಿನದ 24 ಗಂಟೆಯೂ ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ (ಆರ್ಟಿಜಿಎಸ್) ಮೂಲಕ ಹಣ ವರ್ಗಾವಣೆ ಯನ್ನು ಅನುಮತಿಸಿದೆ.
“ಇಂದು ರಾತ್ರಿ 12: 30 ರಿಂದ ಆರ್ಟಿಜಿಎಸ್ ಸೌಲಭ್ಯ 24×7 ಕಾರ್ಯರೂಪಕ್ಕೆ ಬರಲಿದೆ” ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿನ್ನೆ ಘೋಷಿಸಿದ್ದರು. 2020 ರ ಡಿಸೆಂಬರ್ 14 ರಿಂದ ಜಾರಿಗೆ ಬರುವಂತೆ ವರ್ಷದ ಎಲ್ಲಾ ದಿನಗಳಲ್ಲಿ ಆರ್ಟಿಜಿಎಸ್ ದಿನದ 24 ಗಂಟೆಯೂ ಲಭ್ಯವಾಗುವಂತೆ ಮಾಡಲಾಗಿದೆ” ಎಂದು ಆರ್ಬಿಐ ಹೇಳಿದೆ.
ಆರ್ಟಿಜಿಎಸ್ ಗ್ರಾಹಕ ಮತ್ತು ಇಂಟರ್-ಬ್ಯಾಂಕ್ ವಹಿವಾಟುಗಳಿಗೆ ಲಭ್ಯವಿರುತ್ತದೆ. ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಆರ್ಟಿಜಿಎಸ್ ಅನ್ನು ಆರ್ಟಿಜಿಎಸ್ ಸಿಸ್ಟಮ್ ರೆಗ್ಯುಲೇಷನ್ಸ್, 2013 ಮೂಲಕ ನಿಯಂತ್ರಿಸಲಾಗುತ್ತದೆ.
ಸುಗಮ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಇಂಟ್ರಾ-ಡೇ ಲಿಕ್ವಿಡಿಟಿ (ಐಡಿಎಲ್) ಸೌಲಭ್ಯವನ್ನು ಲಭ್ಯಗೊಳಿಸಲಾಗುತದೆ ಎಂದು ಆರ್ಬಿಐ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.