ಮಂಗಳೂರು : ವಿಕಾಸ್ ಕಾಲೇಜು ಸಮಾಜದ ನೆರವಿಗಾಗಿ, ಸುಧಾರಣೆಗಾಗಿ ಬದ್ಧವಾಗಿದೆ. ಕಳೆದ ವರ್ಷ ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪಡೆಯಲು ನೆರವಾಗಲೆಂದು 40 ಪುಟಗಳ ‘ಸ್ಕೋರ್ ಮೋರ್’ ಎಂಬ ಕೈಪಿಡಿಯನ್ನು ಹೊರತಂದಿತ್ತು. ಈ ಕೈಪಿಡಿಯನ್ನು ಕರ್ನಾಟಕ ರಾಜ್ಯದ ಸುಮಾರು 25,000ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಇದು ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯ ಪಠ್ಯಕ್ರಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಪರಿಷ್ಕೃತ ಎನ್.ಸಿ.ಇ.ಆರ್.ಟಿ ಪಠ್ಯಕ್ರಮವನ್ನು ನಿಭಾಯಿಸಲು ನೆರವಾಗಿದೆ.
ಈ ಪುಸ್ತಕವು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸ್ತರಗಳಿಂದ ಬಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ತುಂಬಾ ಉಪಯುಕ್ತವಾಗಿದೆ. ಈ ಕಿರು ಹೊತ್ತ್ತಗೆಯು ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಪಡೆದುದು ಮಾತ್ರವಲ್ಲದೆ, ಬೇರೆ ಬೇರೆ ಶಾಲೆಯ ಶಿಕ್ಷಕರೂ ಈ ಕೈಪಿಡಿಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ವಿಕಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಕೃಷ್ಣ ಜೆ.ಪಾಲೆಮಾರ್ರವರು ಮಾತನಾಡುತ್ತಾ ಒಂದು ಕಟ್ಟಡ ಬಹಳ ಕಾಲದವರೆಗೆ ಸದೃಢವಾಗಿ ನಿಲ್ಲಬೇಕೆಂದರೆ ಅದು ಯಾವ ನೆಲೆಯ ತಳಪಾಯವನ್ನು ಹೊಂದಿದೆ ಎಂಬುದು ಮುಖ್ಯವಾಗುತ್ತದೆ. ಅದೇ ರೀತಿಯಲ್ಲಿ ಒಬ್ಬ ವಿದ್ಯಾರ್ಥಿ ಒಳ್ಳೆಯ ವೃತ್ತಿಯನ್ನು ಆಯ್ದುಕೊಳ್ಳಬೇಕೆಂದಾದಲ್ಲಿ ಅವನ ಗುರಿ, ಅವನಿಗೆ ಕಲಿಕೆಯಲ್ಲಿ ಸಿಗುವ ಪ್ರೋತ್ಸಾಹ, ದೊರಕುವ ಕಲಿಕಾ ಸಾಮಗ್ರಿ ಯಾವ ನೆಲೆಯದ್ದು ಎಂಬುದು ಮುಖ್ಯವಾಗುತ್ತದೆ. ಇದೆಲ್ಲವೂ ಸಿಕ್ಕಾಗ ಒಬ್ಬ ವಿದ್ಯಾರ್ಥಿ ಸದೃಢ ವ್ಯಕ್ತಿತ್ವದ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯ. ಆ ನೆಲೆಯಲ್ಲಿ ನಾವು ಪೂರಕವಾದ ದಾರಿಗಳನ್ನು ರೂಪಿಸಿಕೊಡಬೇಕು. ಭವ್ಯ ಸಮಾಜದ ಕನಸನ್ನು ನನಸುಗೊಳಿಸಲು ಮುಂದಾಗಬೇಕು ಎಂದರು.
ಅಂತೆಯೇ ಈ ವರ್ಷವೂ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇಡಲು ಕಾಲೇಜು ಸಂಸ್ಥೆ ಉತ್ಸುಕವಾಗಿದೆ. ಈ ಬಾರಿ ‘ಸ್ಕೋರ್ ಈವನ್ ಮೋರ್’ ಎಂಬ ಶೀರ್ಷಿಕೆಯಲ್ಲಿ ಹೊಸ ಕೈಪಿಡಿಯನ್ನು ಪರಿಚಯಿಸುವ ನಿರ್ಣಯ ಕೈಗೊಂಡಿದೆ. ಇದು ಸಿ.ಬಿ.ಎಸ್.ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಪೂರಕವಾಗಬಲ್ಲದು ಎಂಬುದು ಸಂಸ್ಥೆಯ ಆಶಯ.
ವಿದ್ಯಾರ್ಥಿಗಳ ಕೋರಿಕೆಯನ್ನು ಪುರಸ್ಕರಿಸುವ ನೆಲೆಯಲ್ಲಿ ವಿಕಾಸ್ ಎಜುಕೇಶನ್ ಟ್ರಸ್ಟ್ ಈ ಮಾದರಿಯ ಕೈಪಿಡಿಗಳನ್ನು ಹೊರತರುತ್ತಿದೆ. ಇದು ಹತ್ತನೆ ತರಗತಿಯ ಸ್ಟೇಟ್ ಬೋರ್ಡ್ ಮತ್ತು ಸಿ.ಬಿ.ಎಸ್.ಇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾರ್ಗದರ್ಶಿ ಆಗಬಲ್ಲದೆಂಬ ನಿರೀಕ್ಷೆ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.