ಪಾಲ್ತಾಡಿ : ಗ್ರಾಮೀಣ ಭಾಗದ ಬೆಳವಣಿಗೆಯಲ್ಲಿ ಸ್ವಾವಲಂಬನೆ ಮಮಹತ್ವದ ಪಾತ್ರ ವಹಿಸುತ್ತದೆ. ಸ್ವಾವಲಂಬನೆ ಜೀವನದಿಂದ ಗ್ರಾಮವಿಕಾಸ ಸಾಧ್ಯ. ಯುವಜನತೆ ತಮ್ಮ ಗ್ರಾಮದಲ್ಲೇ ಉಳಿದು ಕೃಷಿ ಕಾರ್ಯದಲ್ಲಿ ತೊಡಗಿಕೊಂಡರೆ ಅಭಿವೃದ್ದಿ ಸಾಧ್ಯ, ನಗರೀಕರಣದ ವ್ಯಾಮೋಹ ಮೇಲ್ನೋಟಕ್ಕೆ ಸುಂದರ ಎಂದು ಕಂಡರೂ ಅದರ ಒಳಹೂರಣ ಭಯಾನಕ. ಗ್ರಾಮೀಣ ಭಾಗದಲ್ಲಿ ಮಾತ್ರ ಈಗ ಕೃಷಿ ಸಂಸ್ಕೃತಿ ಉಳಿದುಕೊಂಡಿದೆ. ಹೈನುಗಾರಿಕೆಯಲ್ಲಿ ದೇಶಿಯ ತಳಿಯ ಉಳಿಸಲು, ಬೆಳೆಸಲು ಆಸಕ್ತಿ ವಹಿಸಬೇಕು. ದೇಶಿಯ ತಳಿಯ ಆಕಳ ಮೂತ್ರ, ಸಗಣಿಗೆ , ಹಾಲಿಗೆ ರೋಗನಿವಾರಕ ಶಕ್ತಿ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಮಂಗೇಶ್ ಬೆಂಡೆ ಹೇಳಿದರು.
ಅವರು ಪಾಲ್ತಾಡಿ ಗ್ರಾಮದ ಮಂಜುನಾಥ ನಗರದಲ್ಲಿ ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಕಾರ್ಯಚಟುವಟಿಕೆಗಳ ಅವಲೋಕನ ಮತ್ತು ಗ್ರಾಮ ಭೇಟಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರ ಬೈಠಕ್ನಲ್ಲಿ ಮಾತನಾಡಿದರು.
ಸಮಾಜ ಹಿಂದುಳಿಯಲು ಅಸ್ಪೃಶ್ಯತೆ ದೊಡ್ಡ ಕಾರಣ, ಅಸ್ಪೃಶ್ಯತೆ ತೊಲಗಿಸಿ ಸಾಮರಸ್ಯ ಮೂಡಲು ಸಂಘದ ಕಾರ್ಯಕತರು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬನ ಹೃದಯದಲ್ಲೂ ನಾವೆಲ್ಲ ಒಂದು ಎಂಬ ಭಾವನೆ ಮೂಡಿದಾಗ ಸಾಮರಸ್ಯ ವೃದ್ದಿ ಸಾಧ್ಯ, ಗ್ರಾಮವಿಕಾಸ ಸಮಿತಿಯನ್ನು ರಾಜ್ಯಾದ್ಯಂತ ಜಾರಿಗೊಲಿಸಲು ಯೋಜಿಸಲಾಗಿದ್ದು, ಪರಿಸರ ,ಜಲ ಸಂರಕ್ಷಣೆಯ ಕುರಿತು ಕಾರ್ಯ ಮಾಡಲಾಗುವುದು. ಈಗಾಗಲೇ ದಕ್ಷಿಣ ಕನ್ನಡದ ಇಡ್ಕಿದು , ಪಾಲ್ತಾಡಿ ಗ್ರಾಮಗಳು ಹಲವು ಯೋಜನೆಗಳನ್ನು ಅನುಷ್ಟಾನಗೊಳಿಸಿ ಗುರುತಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಕ್ಷೇತ್ರಿಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ,ಸುಬ್ರಹಣ್ಯ ಭಟ್ ಭರಣಿಕೆರೆ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸುಧಾಕರ ರೈ ಕುಂಜಾಡಿ , ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಬಿ.ಕೆ.ರಮೇಶ್ ಉಪಸ್ಥಿತರಿದ್ದರು.
ಈ ಸಂದರ್ಭ ಸಾವಯವ ಕೃಷಿ ತೋಟಕ್ಕೆ ಭೇಟಿ ನೀಡಿ ಕೃಷಿಕಾರ್ಯವನ್ನು ಪರಿಶೀಲಿಸಿದರು. ಅಲ್ಲದೇ ಕಾನಾವು ಕೆರೆ ವೀಕ್ಷಿಸಿ ಜಲಸಂರಕ್ಷಣೆಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದರು .
ಕಾರ್ಯಕ್ರಮದಲ್ಲಿ ಗ್ರಾಮವಿಕಾಸ ಮಂಗಳೂರು ವಿಭಾಗ ಪ್ರಮುಖ್ ಪ್ರವೀಣ್ ಸರಳಾಯ ,ಸುಬ್ರಾಯ ನಂದೋಡಿ,ವಿಭಾಗ ಪ್ರಚಾರಕ್ ಚಂದ್ರಬಾಬು, ಸೇವಾ ಪ್ರಮಖ್ ಸುಧಾಕರ್ , ವಿಭಾಗ ಪ್ರಮುಖರಾದ ಕಮಲಾಕ್ಷ ವಿಟ್ಲ ,ಸುಬಾಶ್ಚಂದ್ರ ಕಳಂಜ , ವೆಂಕಟ್ರಮಣ ಹೊಳ್ಳ , ನ.ಸೀತಾರಾಮ, ನಾರಾಯಣ ಭಂಡಾರಿ, ತಾಲೂಕು ಕಾರ್ಯವಾಹ ನವೀನ್ ಪ್ರಸಾದ್ ಕೈಕಾರ,ಪಾಲ್ತಾಢಿ ಗ್ರಾಮ ವಿಕಾಸ ಸಲಹೆಗಾರ ಗಣೇಶ್ ಶೆಟ್ಟಿ ಕುಂಜಾಡಿ, ಕಾರ್ಯದರ್ಶಿ ಬಾಳಪ್ಪ ಪೂಜಾರಿ,ಸಂಯೋಜಕ ಪ್ರವೀಣ್ ಕುಮಾರ್ , ಮಹಿಳಾ ಪ್ರಮುಖ ಇಂದಿರಾ ಬಿ.ಕೆ, ಸುಂದರಿ , ಕುಸುಮಾ , ಸಹಕಾರಿ ಪ್ರಮಖ್ ವಸಂತ ಕುಮಾರ್, ಸಂಸ್ಕಾರ ಪ್ರಮುಖ್ ಈಶ್ವರ ಬಿ.ಎಸ್, ಮುಖ್ಯ ಶಿಕ್ಷಕ ಉದಯ ಬಿ.ಆರ್ ,ಲತೇಶ್ , ಗೋಸೇವಾ ಪ್ರಮುಖ್ ಅನ್ನಪೂರ್ಣಪ್ರಸಾದ್ ರೈ ಬೈಲಾಡಿ, ವಿಠಲ ಶೆಟ್ಟಿ ಬಂಬಿಲ . ಶ್ರಮ ಸೇವಾ ಪ್ರಮುಖ ಸತೀಶ್ ಅಂಗಡಿಮೂಲೆ, ಹೊನ್ನಪ್ಪ ಗೌಡ , ರವಿಕುಮಾರ್ , ಪುಣ್ಚಪ್ಪಾಡಿ ಗ್ರಾಮವಿಕಾಸ ಅಧ್ಯಕ್ಷ ಶೀನಪ್ಪ ಶೆಟ್ಟಿ ಮೊದಲಾದವರು ತಮ್ಮ ವಿಭಾಗದ ಮಾಹಿತಿ ನೀಡಿದರು. ಸೇವಾ ಪ್ರಮುಖ್ ಅಚ್ಚುತ ಸುಳ್ಯಪದವು ಸ್ವಾಗತಿಸಿ,ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.