ನವದೆಹಲಿ: ದೀಪಾವಳಿ ಹಬ್ಬ ಆಗಮಿಸಿದೆ. ಯುಕೆ ಚಾನ್ಸೆಲರ್ ಆಫ್ ಎಕ್ಸ್ಚೆಕರ್ ರಿಷಿ ಸುನಕ್ ಅವರು ಲಂಡನ್ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ದೀಪಗಳನ್ನು ಬೆಳಗಿಸಿದ್ದಾರೆ. ಭಾರತೀಯ ಮೂಲದ ಇವರು, ಡೌನಿಂಗ್ ಸ್ಟ್ರೀಟ್ ನಂಬರ್ 11 ನಲ್ಲಿ ಮಣ್ಣಿನ ಹಣತೆಯಲ್ಲಿ ದೀಪ ಬೆಳಗಿಸಿದ್ದಾರೆ. ಡೌನಿಂಗ್ ಸ್ಟ್ರೀಟ್ನಲ್ಲಿ ದೀಪ ಬೆಳಗಿಸುತ್ತಿರುವುದು ಇತಿಹಾಸದಲ್ಲೇ ಮೊದಲು ಎಂದು ಹೇಳಲಾಗಿದೆ.
ತಮ್ಮ ಅಧಿಕೃತ ನಿವಾಸದ ಹೊರಗೆ ಅವರು ಮಣ್ಣಿನ ದೀಪಗಳನ್ನು ಬೆಳಗಿಸಿಸುತ್ತಿರುವುದರ 50 ಸೆಕೆಂಡುಗಳ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ಇಂಡಿಯನ್ಸ್ ಇನ್ ಲಂಡನ್ ಗ್ರೂಪ್ ಹಂಚಿಕೊಂಡಿದೆ. ಮತ್ತು ಇದು ಅತ್ಯಂತ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದೆ.
“ಚಾನ್ಸೆಲರ್ ಆಫ್ ಎಕ್ಸ್ಚೆಕರ್ ಗೌರವಾನ್ವಿತ ರಿಷಿ ಸುನಕ್ ಅವರು ಬ್ರಿಟಿಷ್ ಇತಿಹಾಸದಲ್ಲೇ ಮೊದಲ ಬಾರಿಗೆ 11 ಡೌನಿಂಗ್ ಸ್ಟ್ರೀಟ್ನಲ್ಲಿ ದೀಪಾವಳಿಯ ದೀಪ ಹಚ್ಚಿದ್ದಾರೆ. ಬ್ರಿಟಿಷ್ ಹಿಂದೂಗಳು ಮತ್ತು ಬ್ರಿಟಿಷ್ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣ. ಇದು ಸಂಭ್ರಮದ ದೀಪಾವಳಿಯಾಗಿದ್ದ ಎಲ್ಲರೂ ಸಂಭ್ರಮಿಸೋಣ” ಎಂದು ಇಂಡಿಯನ್ಸ್ ಇನ್ ಲಂಡನ್ ಗ್ರೂಪ್ ಟ್ವಿಟ್ ಮಾಡಿದೆ.
ರಿಷಿ ಸುನಕ್ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯನಾಗಿದ್ದು, ಲಂಡನ್ನ ಹಣಕಾಸು ಮಂತ್ರಿ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದವರಾಗಿದ್ದಾರೆ.
Chancellor of Exchequer Rt. Honourable @RishiSunak for the 1st time in British History Lit Diwali Diya at 11 Downing Street .
Proud moment for #BritishHindus and #BritishIndians
It’s Happy Diwali Indeed Let the festivities begin 🪔 ! #FestivalofLights #Diwali pic.twitter.com/4Qx8PNrrMJ— Indians in London Group (@IIL2004) November 13, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.