ನವದೆಹಲಿ: ಇಂದಿನಿಂದ PUBG ಮೊಬೈಲ್ ಮತ್ತು PUBG ಮೊಬೈಲ್ ಲೈಟ್ ಭಾರತದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಭಾರತದಲ್ಲಿನ ಎಲ್ಲಾ ಎಸೆಸ್ ಮತ್ತು ಸರ್ವರ್ಗಳನ್ನು ಸ್ಥಗಿತಗೊಳಿಸುವುದಾಗಿ ಕಂಪನಿಯು ಫೇಸ್ಬುಕ್ ಮೂಲಕ ಘೋಷಣೆ ಮಾಡಿದೆ. ಗೇಮ್ನ ಕಮ್ಯೂನಿಟಿ ಫೋರಂನಲ್ಲೂ ಇದನ್ನು ಘೋಷಣೆ ಮಾಡಲಾಗಿದೆ.
ದೇಶದ ಭದ್ರತಾ ದೃಷ್ಟಿಯಿಂದ ಚೀನಾದ ಅಪ್ಲಿಕೇಶನ್ಗಳನ್ನು ಭಾರತ ಸರ್ಕಾರ ನಿಷೇಧಿಸಿದೆ. ಈ ವೇಳೆ ಪಬ್ಜಿ ಗೇಮಿಂಗ್ ಅಪ್ಲಿಕೇಶನ್ ಅನ್ನು ಕೂಡ ನಿಷೇಧಿಸಲಾಗಿತ್ತು. ಪಬ್ಜೀ ಜೊತೆಗೆ, ಇತರ 117 ಆ್ಯಪ್ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ.
“ಆತ್ಮೀಯ ಅಭಿಮಾನಿಗಳೇ, ಸೆಪ್ಟೆಂಬರ್ 2, 2020ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮಧ್ಯಂತರ ಆದೇಶದ ಅನುಸಾರ, ಟೆನ್ಸೆಂಟ್ ಗೇಮ್ಸ್ ಭಾರತದಲ್ಲಿ PUBGಯ ಎಲ್ಲಾ ಸೇವೆ ಮತ್ತು ಪ್ರವೇಶವನ್ನು ಕೊನೆಗೊಳಿಸುತ್ತದೆ. ಭಾರತದಲ್ಲಿ ಪಬ್ಜಿ ಮೊಬೈಲ್ ಪ್ರಕಟಿಸುವ ಹಕ್ಕುಗಳನ್ನು ಪಬ್ಜಿ ಬೌದ್ಧಿಕ ಆಸ್ತಿಯ ಮಾಲೀಕರಿಗೆ ಹಿಂತಿರುಗಿಸಲಾಗುತ್ತದೆ” ಎಂದು ಕಂಪನಿ ತಿಳಿಸಿದೆ.
ನಿಷೇಧದ ಬಳಿಕ ಇದುವರೆಗೆ ಬಳಕೆದಾರರು ಭಾರತೀಯ ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಐಒಎಸ್ ಆ್ಯಪ್ ಸ್ಟೋರ್ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಸಾಧ್ಯವಾಗದಿದ್ದರೂ, ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡವರಿಗೆ ಆಟವಾಡಲು ಕೆಲವು ಸಂದರ್ಭದಲ್ಲಿ ಸಾಧ್ಯವಾಗುತ್ತಿತ್ತು. ಈಗ PUBG India ಸರ್ವರ್ಗಳು ಸ್ಥಗಿತಗೊಂಡಿರುವುದರಿಂದ, ಬಳಕೆದಾರರು ಭಾರತದಲ್ಲಿ ಗೇಮಿಂಗ್ ಆಡಲು ಕಷ್ಟವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.