ನವದೆಹಲಿ: ದೇಶದಲ್ಲಿ ಕೋವಿಡ್ -19ನಿಂದ ಚೇತರಿಸಿಕೊಂಡ ಪ್ರಕರಣಗಳು 72 ಲಕ್ಷ ದಾಟಿದ್ದು, ಚೇತರಿಕೆ ಪ್ರಮಾಣ ಶೇಕಡಾ 90.62 ರಷ್ಟಿದೆ.
ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಪ್ರಕರಣಗಳು ವಿಶ್ವದಲ್ಲೇ ಅತಿ ಕಡಿಮೆ ಆಗಿದ್ದು, 5,7, 58 ರಷ್ಟಿದೆ. ಆದರೆ ಜಾಗತಿಕ ಸರಾಸರಿ 5, 504 ಇದೆ ಎಂದಿದ್ದಾರೆ.
ಪ್ರತಿ ಮಿಲಿಯನ್ ಜನಸಂಖ್ಯೆಗೆ ಭಾರತದ ಸಾವುಗಳು ವಿಶ್ವದಲ್ಲೇ ಅತ್ಯಂತ ಕಡಿಮೆ, ಒಂದು ಮಿಲಿಯನ್ ಜನಸಂಖ್ಯೆಗೆ 86 ಸಾವುಗಳು ಇದೆ. ರಾಷ್ಟ್ರೀಯ ಚೇತರಿಕೆ ದರ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ನಿನ್ನೆ ಮತ್ತಷ್ಟು ಹೆಚ್ಚಳವಾಗಿ ಶೇಕಡಾ 90.62 ಕ್ಕೆ ಏರಿದೆ ಎಂದು ಅವರು ಹೇಳಿದ್ದಾರೆ.
13 ದಿನಗಳಲ್ಲಿ ಚೇತರಿಕೆ 60 ಲಕ್ಷದಿಂದ 70 ಲಕ್ಷಕ್ಕೆ ಏರಿದೆ ಮತ್ತು ಈಗ 72 ಲಕ್ಷ ದಾಟಿದೆ ಎಂಬುದು ತೃಪ್ತಿದಾಯಕ ಸಂಕೇತವಾಗಿದೆ ಎಂದು ಆರೋಗ್ಯ ಕಾರ್ಯದರ್ಶಿ ಒತ್ತಿ ಹೇಳಿದರು. ದೇಶದಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ನಿರಂತರವಾಗಿ ಇಳಿಕೆಯಾಗುತ್ತಿದೆ ಮತ್ತು ಶೇಕಡಾ 1.50 ರಷ್ಟಿದೆ ಎಂದು ಅವರು ಹೇಳಿದರು. ಕಳೆದ ಐದು ವಾರಗಳಿಂದ, ಕೋವಿಡ್-19 ನಿಂದ ವರದಿಯಾದ ದೈನಂದಿನ ಹೊಸ ಸಾವುಗಳ ಸರಾಸರಿ ಕುಸಿತ ಕಂಡುಬಂದಿದೆ ಎಂದು ಭೂಷಣ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.