ನವದೆಹಲಿ: ಮಗುವನ್ನು ಏಕಾಂಗಿಯಾಗಿ ಪೋಷಣೆ ಮಾಡುವ ಪುರುಷ ಸರಕಾರಿ ನೌಕರರಿಗೆ ಇನ್ನು ಮುಂದೆ ಪಿತೃತ್ವ ರಜೆ ಸಿಗಲಿದೆ. ಈ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ
‘ಸಿಂಗಲ್ ಮೇಲ್ ಪೇರೆಂಟ್’ ಆಗಿರುವವರಿಗೆ ಮಾತ್ರ ಈ ಅವಕಾಶ ಸಿಗಲಿದೆ. ಒಂಟಿಯಾಗಿ ಮಕ್ಕಳ ಆರೈಕೆಯನ್ನು ಮಾಡುವ ಪುರುಷರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ಈ ಬಗೆಗಿನ ಆದೇಶವನ್ನು ಕೆಲ ದಿನಗಳ ಹಿಂದೆಯೇ ಹೊರಡಿಸಲಾಗಿದೆ, ಆದರೆ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಇದಲ್ಲದೆ, ನೌಕರನು ಮಕ್ಕಳ ಆರೈಕೆ ರಜೆಯಲ್ಲಿದ್ದರೂ ಸಹ ರಜೆ ಪ್ರಯಾಣ ರಿಯಾಯಿತಿ (ಎಲ್ಟಿಸಿ) ಪಡೆಯಬಹುದು. ಮತ್ತಷ್ಟು ವಿಸ್ತಾರವಾಗಿ, ಮೊದಲ 365 ದಿನಗಳವರೆಗೆ ಮಕ್ಕಳ ಆರೈಕೆ ರಜೆಯ ಶೇಕಡಾ 100 ರಷ್ಟು ರಜೆ ವೇತನ ಪಡೆಯಬಹುದು ಮತ್ತು ನಂತರ 365 ದಿನಗಳವರೆಗೆ 80 ಪ್ರತಿಶತದಷ್ಟು ರಜೆ ವೇತನವಿದೆ ಎಂದು ಪ್ರಕಟಣೆ ತಿಳಿಸಿದೆ.
ದಿವ್ಯಾಂಗ ಮಗುವಿನ ಸಂದರ್ಭದಲ್ಲಿ, ಮಗುವಿನ 22 ವರ್ಷ ವಯಸ್ಸಿನವರೆಗೆ ಮಕ್ಕಳ ಆರೈಕೆ ರಜೆ ಪಡೆಯುವ ವ್ಯವಸ್ಥೆ ತೆಗೆದುಹಾಕಲಾಗಿದೆ. ಅದರ ಬದಲು ಮಕ್ಕಳ ಆರೈಕೆ ರಜೆಯನ್ನು ದಿವ್ಯಾಂಗ ಮಗು ಯಾವುದೇ ವಯಸ್ಸಿನಲ್ಲಿದ್ದರೂ ರಜೆ ಪಡೆಯುವ ವ್ಯವಸ್ಥೆಯನ್ನು ತರಲಾಗಿದೆ.
#IndianExpress #TheHindu: “Male govt employees who are single parents can now take child care leave.”#AmarUjala: एकल अभिभावक के तौर पर सरकारी पुरुष कर्मी भी चाइल्ड केयर लीव ले सकेंगेhttps://t.co/YCufmx8ZNlhttps://t.co/4gYzF5ztTMhttps://t.co/DP3tDq6M95 pic.twitter.com/vMP1lfF4vP
— Dr Jitendra Singh (@DrJitendraSingh) October 27, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.