ನವದೆಹಲಿ: ಭಾರತ ಕೇವಲ ತನ್ನ ಭೂಭಾಗದಲ್ಲಿ ನಿಂತು ಯುದ್ಧ ಮಾಡಲು ಮಾತ್ರವಲ್ಲದೇ, ವಿದೇಶಿ ಮಣ್ಣಿನಲ್ಲಿ ನಿಂತು ಕೂಡ ಯುದ್ಧ ಮಾಡಲು ಶಕ್ತವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಹೇಳಿದ್ದಾರೆ.
ಭಾರತ ಯಾವತ್ತೂ ಕೂಡ ಮೊದಲನೆಯದಾಗಿ ಯುದ್ಧವನ್ನು ಮಾಡಿಲ್ಲವಾದರೂ, ಭದ್ರತಾ ಬೆದರಿಕೆಗಳನ್ನು ಎದುರಿಸಲು ನಾವು ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಹೊಸ ಕಾರ್ಯತಾಂತ್ರಿಕ ಚಿಂತನೆ ನಡೆಯುತ್ತಿದೆ ಎಂದಿದ್ದಾರೆ.
ಹೊಸ ಭಾರತದ ಸಿದ್ಧಾಂತವನ್ನು ಸಂಕ್ಷಿಪ್ತವಾಗಿ ವಿವರಿಸಿದ ಅವರು, ಬೆದರಿಕೆ ಯಾವ ಸ್ಥಳದಲ್ಲಿ ಹುಟ್ಟಿದೆಯೋ ಅದೇ ಸ್ಥಳಕ್ಕೆ ಯುದ್ಧವನ್ನು ಭಾರತ ಕೊಂಡೊಯ್ಯಲಿದೆ ಎಂದಿದ್ದಾರೆ.
ಚೀನಾ ಮತ್ತು ಭಾರತದ ನಡುವೆ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿರುವ ಈ ಸಂದರ್ಭದಲ್ಲಿ ಅಜಿತ್ ದೋವಲ್ ಅವರ ಈ ಹೇಳಿಕೆಯು ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ.
ಭಾರತದ ಸಾರ್ವಭೌಮತೆಗೆ ಬೆದರಿಕೆಯನ್ನು ಉಂಟು ಮಾಡುವ ರಾಷ್ಟ್ರಗಳ ವಿರುದ್ಧ ಭಾರತ ಮೊದಲನೇಯದಾಗಿ ಯುದ್ಧವನ್ನು ಸಾರುವ ಸಾಧ್ಯತೆಯನ್ನು ಕೂಡ ಅವರ ಮಾತುಗಳು ಸೂಚಿಸುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.