ನವದೆಹಲಿ: ಇಡೀ ವಿಶ್ವದಲ್ಲೇ ಶಿಕ್ಷಕ ವೃತ್ತಿಗೆ ಅಪಾರ ಗೌರವವಿದೆ. ಶಿಕ್ಷಕರು ಎಂದ ಕೂಡಲೇ ಎಲ್ಲರೂ ವಿಧೇಯತೆ ತೋರಿಸುತ್ತಾರೆ. ಇದು ಉಗ್ರರಿಗೂ ಕೂಡ ಅನ್ವಯಿಸುತ್ತದೆ ಎಂದರೆ ನೀವು ಒಪ್ಪುತ್ತೀರಾ? ಖಂಡಿತಾ, ಒಪ್ಪಲೇ ಬೇಕು. ಏಕೆಂದರೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಪಟ್ಟ ಇಬ್ಬರು ಭಾರತೀಯರು ತಮ್ಮ ಶಿಕ್ಷಕ ವೃತ್ತಿಯಿಂದಾಗಿ ಪಾರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಲಿಬಿಯಾದಲ್ಲಿ ಭಾರತೀಯ ಮೂಲದ ನಾಲ್ವರು ಶಿಕ್ಷಕರನ್ನು ರಾಕ್ಷಸರಿಗಿಂತಲೂ ಕ್ರೂರಿಗಳು ಎಂದು ಕರೆಯಲ್ಪಡುವ ಇಸಿಸ್ ಉಗ್ರರು ಅಪಹರಣ ಮಾಡಿದ್ದರು. ಇನ್ನು ಇವರು ಅವರ ಕೈಯಿಂದ ಪಾರಾಗುವುದು ಕಷ್ಟಸಾಧ್ಯ ಎಂದೇ ಹೇಳಲಾಗಿತ್ತು. ಆದರೆ ಇದಕ್ಕಿದ್ದಂತೆ ಉಗ್ರರು ಕರ್ನಾಟಕ ಮೂಲದ ಇಬ್ಬರು ಉಗ್ರರನ್ನು ಬಿಡುಗಡೆ ಮಾಡಿದರು.
ತಮ್ಮ ವೃತ್ತಿ ನಮ್ಮನ್ನು ಕಾಪಾಡಿದೆ, ಲಿಬಿಯಾದ ಅಪಾರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಶಿಕ್ಷಕರ ಮೇಲೆ ಅತೀವ ಗೌರವವಿರುವುದಾಗಿ ಅಪಹರಣಕಾರರು ನಮ್ಮ ಬಳಿ ಹೇಳಿಕೊಂಡರು, ಬಳಿಕ ನಮ್ಮನ್ನು ಬಿಡುಗಡೆ ಮಾಡಿದರು ಎಂದು ಬಿಡುಗಡೆಗೊಂಡ ಭಾರತೀಯ ವಿಜಯ್ ಕುಮಾರ್ ಹೇಳಿಕೊಂಡಿದ್ದಾರೆ.
ವಿಜಯ್ ಕುಮಾರ್ ಮತ್ತು ಲಕ್ಷ್ಮೀಕಾಂತ್ ಇಬ್ಬರೂ ಕೋಲಾರ ಮತ್ತು ರಾಯಚೂರು ಜಿಲ್ಲೆಯವರು, ಇವರನ್ನು ಕಳೆದ ಬುಧವಾರ ಮತ್ತಿಬ್ಬರು ಭಾರತೀಯರೊಂದಿಗೆ ಇಸಿಸ್ ಉಗ್ರರು ಲಿಬಿಯಾದ ಸಿರ್ತೆ ಎಂಬಲ್ಲಿ ಅಪಹರಣಗೊಳಿಸಿದರು. ಇವರನ್ನು ಕತ್ತಲ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ.
ಇನ್ನೂ ಇಬ್ಬರು ಭಾರತೀಯರಾದ ಬಲರಾಮ್ ಕಿಶಾನ್ ಮತ್ತು ಟಿ.ಗೋಪಿಕೃಷ್ಣ ಎಂಬುವವರು ಇನ್ನೂ ಉಗ್ರರ ವಶದಲ್ಲೇ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.