ಪುತ್ತೂರು : ಇತ್ತೀಚೆಗೆ ನಿಧನರಾದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪುತ್ತೂರಿನ ಭಾವನಾ ಕಲಾ ಆರ್ಟ್ಸ್ ಮರಳು ಕಲಾಕೃತಿ ರಚನೆಯ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಿದೆ.
ಭಾನುವಾರ ಮಂಗಳೂರಿನ ತಣ್ಣೀರುಬಾವಿ ನದಿ ಕಿನಾರೆಯಲ್ಲಿ ಕಲಾಂ ಅವರ ಬೃಹತ್ ಮರಳುಶಿಲ್ಪವನ್ನು ಭಾವನಾ ಕಲಾ ಆರ್ಟ್ಸ್ನ ವಿಘ್ನೇಶ್ ವಿಶ್ವಕರ್ಮ ರವರ ನೇತೃತ್ವದಲ್ಲಿ ರಚಿಸಲಾಯಿತು.
ಕಲಾಂಜೀಗೊಂದು ಕಲಾಸಲಾಂ ಎಂಬ ಅಡಿಬರಹವನ್ನೂ ಕಲಾಕೃತಿಯ ಕೆಳಗೆ ನೀಡಲಾಗಿದ್ದು ಎಲ್ಲರ ಗಮನಸೆಳೆಯಿತು. ಕಡಲಕಿನಾರೆಗೆ ವೀಕ್ಷಣೆಗೆ ಬಂದ ಪ್ರವಾಸಿಗರೂ ಕಲಾಂ ಕಲಾಕೃತಿಗೆ ನಮಿಸಿ ಶ್ರದ್ದಾಂಜಲಿ ಅರ್ಪಿಸಿದರಲ್ಲದೆ, ಭಾವನಾ ಆರ್ಟ್ಸ್ನ ಕಲಾಪ್ರೇಮವನ್ನೂ- ಕಲಾಂ ಪ್ರೇಮವನ್ನೂ ಶ್ಲಾಘಿಸಿದರು.
ಭಾವನಾ ಆರ್ಟ್ಸ್ನ ದಿನೇಶ್ ವಿಶ್ವಕರ್ಮ, ಸವ್ಯರಾಜ್, ಗಣೇಶ್ ಕೋರಿಯರ್, ಭಾಸ್ಕರ್ ಕೆಲಿಂಜ, ವಿಶಾಲ್, ಮಿಥುನ್ ರಾಜ್, ವಸಂತ, ಜಗದೀಶ್ ಮಾಮೇಶ್ವರ, ಅನುಸೂಯ, ವನಿತಾ ವಿಘ್ನೇಶ್, ಮಾ.ವಿನಿಲ್,ಯಶಸ್, ವಿಶಸ್, ಜ್ಞಾನೇಶ್ ವಿಶ್ವಕರ್ಮ ಮೊದಲಾದವರು ಮರಳು ಶಿಲ್ಪ ರಚನೆಯಲ್ಲಿ ತೊಡಗಿಸಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.