ನವದೆಹಲಿ: ಕಳೆದ ಹಲವಾರು ವರ್ಷಗಳಿಂದ ಬಳಕೆಯಲ್ಲಿ ತೀವ್ರ ಕುಸಿತವನ್ನು ಎದುರಿಸುತ್ತಿರುವ ಯಾಹೂ ಸಂಸ್ಥೆ ಡಿಸೆಂಬರ್ 15 ರಿಂದ ಯಾಹೂ ಗ್ರೂಪ್ಸ್ ಅನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ.
2017 ರಲ್ಲಿ ಯಾಹೂವನ್ನು ಖರೀದಿಸಿದ ವೆರಿಝೋನ್, ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದೆ.
“ಕಳೆದ ಹಲವಾರು ವರ್ಷಗಳಿಂದ ಯಾಹೂ ಗ್ರೂಪ್ಸ್ ಬಳಕೆಯಲ್ಲಿ ಸ್ಥಿರ ಕುಸಿತವನ್ನು ಕಂಡಿದೆ. ಇದೇ ಅವಧಿಯಲ್ಲಿ, ಗ್ರಾಹಕರು ನಮ್ಮ ಮೇಲೆ ಅಭೂತಪೂರ್ವ ವಿಶ್ವಾಸವಿರಿಸಿದ್ದನ್ನೂ ನಾವು ಕಂಡಿದ್ದೇವೆ ” ಎಂದು ಕಂಪನಿಯು ತಿಳಿಸಿದೆ.
“ಸ್ಥಗಿತದ ನಿರ್ಧಾರ ಎಂದಿಗೂ ಸುಲಭವಾಗಿರಲಿಲ್ಲ, ವ್ಯವಹಾರದ ಇತರ ಕ್ಷೇತ್ರಗಳತ್ತ ನಾವು ನಮ್ಮ ಗಮನವನ್ನು ಹೆಚ್ಚಿಸಿಕೊಳ್ಳುತ್ತಿರುವುದರಿಂದ ನಮ್ಮ ದೀರ್ಘಕಾಲೀನ ಕಾರ್ಯತಂತ್ರಕ್ಕೆ ಹೊಂದಿಕೆಯಾಗದ ಉತ್ಪನ್ನಗಳ ಬಗ್ಗೆ ನಾವು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದಿದೆ.
ಯಾಹೂ ಗ್ರೂಪ್ಸ್ ಸೇವೆಯನ್ನು 2001 ರಲ್ಲಿ ಪ್ರಾರಂಭಿಸಲಾಯಿತು. ಆದರೆ ಇದಕ್ಕೆ ರೆಡ್ಡಿಟ್, ಗೂಗಲ್ ಗ್ರೂಪ್ಸ್ ಮತ್ತು ಫೇಸ್ಬುಕ್ ಗ್ರೂಪ್ಗಳಂತಹ ಹೊಸ ಪ್ಲಾಟ್ಫಾರ್ಮ್ಗಳ ವಿರುದ್ಧ ಸೆಣಸಾಡಲು ಸಾಧ್ಯವಾಗಲಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.