ನವದೆಹಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೆ ಒಟ್ಟು 9,700 ಮಹಿಳಾ ದೌರ್ಜನ್ಯ, ಅತ್ಯಾಚಾರ, ಹಲ್ಲೆ ಸೇರಿದಂತೆ ಮಹಿಳಾ ಹಕ್ಕು ಉಲ್ಲಂಘನೆಯ ಪ್ರಕರಣಗಳು ದೇಶದಲ್ಲಿ ದಾಖಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಹಕ್ಕು ಕಲ್ಯಾಣ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳು ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ ದಾಖಲಾಗಿವೆ. ಅತಿ ಹೆಚ್ಚಿನ ಪ್ರಕರಣಗಳು ಉತ್ತರಪ್ರದೇಶದಲ್ಲಿ ನಡೆದಿವೆ ಎಂದು ಅವರು ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಮನೆಯಲ್ಲಿ ದೌರ್ಜನ್ಯ, ಅತ್ಯಾಚಾರ, ಮಹಿಳೆಯ ಮಾನನಷ್ಟ, ವರದಕ್ಷಿಣೆ ಕಿರುಕುಳ, ಆಸ್ತಿ ವಿವಾದ, ಅತ್ಯಾಚಾರ ಇವೆಲ್ಲವೂ ಮಹಿಳಾ ಹಕ್ಕು ಉಲ್ಲಂಘನೆಯಲ್ಲಿ ಬರುತ್ತವೆ. ಉತ್ತರಪ್ರದೇಶವೊಂದರಲ್ಲೇ 6,110 ಪ್ರಕರಣಗಳು ದಾಖಲಾಗಿವೆ, ನಂತರ ದೆಹಲಿಯಲ್ಲಿ 1,179 ಪ್ರಕರಣ, ಹರಿಯಾಣದಲ್ಲಿ 504, ರಾಜಸ್ಥಾನದಲ್ಲಿ 447 ಮತ್ತು ಬಿಹಾರದಲ್ಲಿ 256 ಪ್ರಕರಣಗಳು ದಾಖಲಾಗಿವೆ.
ಕಳೆದ 3 ಹಣಕಾಸು ವರ್ಷದಲ್ಲಿ ಉತ್ತರಪ್ರದೇಶದಲ್ಲಿ ಒಟ್ಟು 44,328 ಪ್ರಕರಣಗಳು ದಾಖಲಾಗಿವೆ. 2012-13ರವರೆಗೆ 16,584, 2013-14ರವರೆಗೆ 22,422, 2014-15ರವರೆಗೆ 32,118, 2015-ಇಂದಿನ ದಿನದವರೆಗೆ 9,786 ಪ್ರಕರಣ ಮಹಿಳಾ ಆಯೋಗದಲ್ಲಿ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ‘ಒನ್ ಸ್ಟಾಪ್’ ಎಂಬ ಸಹಾಯ ಕೇಂದ್ರವನ್ನು 39 ಕಡೆಗಳಲ್ಲಿ ಸ್ಥಾಪಿಸುವುದಾಗಿ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.