ನವದೆಹಲಿ: ಆತ್ಮನಿರ್ಭರ ಭಾರತದ ಅಡಿಯಲ್ಲಿ ಕೇಂದ್ರ ಸರ್ಕಾರ ಸ್ವದೇಶೀ ಆಟಿಕೆ ತಯಾರಿಯಲ್ಲಿಯೂ ಮುಂಚೂಣಿಗೆ ಬರುವ ನಿಟ್ಟಿನಲ್ಲಿ ಚಿಂತನೆ ನಡೆಸಿದೆ. ಭಾರತವನ್ನು ಆಟಿಕೆಗಳ ಪ್ರಮುಖ ತಾಣವನ್ನಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆಟಿಕೆಗಳ ಆಮದು ಮಾಡಿಕೊಳ್ಳುವುದಕ್ಕೆ ಪರವಾನಿಗೆ ಹೊಂದಿರುವುದನ್ನು ಕಡ್ಡಾಯಗೊಳಿಸಲಿದೆ ಎಂದು ಉನ್ನತ ಮೂಲಗಳ ವರದಿಯೊಂದು ತಿಳಿಸಿದೆ.
ವಿದೇಶೀ ಆಟಿಕೆಗಳ ಆಮದಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತು ದೇಶೀಯ ಆಟಿಕೆ ತಯಾರಿಕಾ ಕೈಗಾರಿಕೆಗಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ. 2022 ರ ಮಾರ್ಚ್ ತಿಂಗಳಿನಿಂದ ತೊಡಗಿದಂತೆ ಆಟಿಕೆಗಳ ಆಮದಿಗೆ ಲೈಸನ್ಸ್ ಕಡ್ಡಾಯ ಎಂಬ ಕಾನೂನು ಜಾರಿಯಾಗಲಿದೆ ಎಂದೂ ಮೂಲಗಳು ತಿಳಿಸಿವೆ. ದೇಶೀಯ ಆಟಿಕೆಗಳಿಗೆ ಆದ್ಯತೆ ನೀಡುವುದು ಮತ್ತು ಉತ್ತಮ ಗುಣಮಟ್ಟದ ಆಟಿಕೆಗಳನ್ನು ತಯಾರಿಸಲು ತಯಾರಕರಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಲಿದೆ ಎಂದು ವರದಿಗಳು ತಿಳಿಸಿವೆ.
ಕೈಗಾರಿಕಾ ಕ್ಷೇತ್ರ ಕೆಲ ದಿನಗಳ ಹಿಂದಷ್ಟೇ ಕ್ವಾಲಿಟಿ ಕಂಟ್ರೋಲ್ ಆದೇಶವನ್ನು ಹೊರಡಿಸಿತ್ತು. ಸುಂಕ ರಹಿತ ನಿರ್ಬಂಧ ಜಾರಿಯಲ್ಲಿದ್ದರೂ, ಕ್ವಾಲಿಟಿ ಕಂಟ್ರೋಲ್ ಆದೇಶ ಜಾರಿಗೂ ಮುನ್ನವೇ ಕೇಂದ್ರ ನಿರ್ಬಂಧ ಹೇರಲು ಮುಂದಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ದೇಶೀಯ ಮಟ್ಟದ ಕೈಗಾರಿಕೆಗಳು ಉತ್ತಮ ದರ್ಜೆಯಲ್ಲಿ ಗುರಿ ಸಾಧಿಸುವ ನಿಟ್ಟಿನಲ್ಲಿ, ಜನರೂ ಈ ಸಂಬಂಧ ಸರಿಯಾದ ಅರಿವು ಬೆಳೆಸಿಕೊಳ್ಳುವತ್ತ ಚಿತ್ತ ಹರಿಸುವಂತೆಯೂ ಈ ವರದಿ ತಿಳಿಸಿದೆ. ಹೊಸ ಮಾನದಂಡವನ್ನು ಅಳವಡಿಸಲು ದೇಶೀಯ ಆಟಿಕೆ ತಯಾರಕರಿಗೆ ಜನವರಿ 1 ರ ವರೆಗೂ ಅವಕಾಶ ವಿಸ್ತರಿಸಲಾಗಿತ್ತು ಎಂದೂ ವರದಿ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.