ನವದೆಹಲಿ: ಭಾರತವು ಬುಧವಾರ 400 ಕಿಲೋಮೀಟರ್ ದೂರದಲ್ಲಿರುವ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ವಿಸ್ತೃತ ಶ್ರೇಣಿಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಡಿಆರ್ಡಿಒದ ಪಿಜೆ -10 ಕಾರ್ಯಕ್ರಮದಡಿ ಈ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಮೇಡ್-ಇನ್-ಇಂಡಿಯಾ ಬೂಸ್ಟರ್ ಬಳಕೆಯನ್ನು ಇದರಲ್ಲಿ ಮಾಡಲಾಗಿದೆ.
ಈಗಾಗಲೇ ತನ್ನ ವಿಸ್ತೃತ ಶ್ರೇಣಿಯ ಕಾರ್ಯಕ್ರಮದಡಿಯಲ್ಲಿ, ಡಿಆರ್ಡಿಓ 500 ಕಿಲೋಮೀಟರ್ ವ್ಯಾಪ್ತಿಯ ಕ್ಷಿಪಣಿಗಳನ್ನು ಪರೀಕ್ಷಿಸಲು ಸಿದ್ಧವಾಗುತ್ತಿದೆ. ಇದಕ್ಕಾಗಿ, ರ್ಯಾಮ್ಜೆಟ್ ಎಂಜಿನ್ ಮತ್ತು ಇಂಧನ ಇಂಜೆಕ್ಷನ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಇದರಿಂದಾಗಿ ಕ್ಷಿಪಣಿಯು ಅದರ ಆರಂಭಿಕ 300 ಕಿಲೋಮೀಟರ್ ವ್ಯಾಪ್ತಿಗಿಂತ ಹೆಚ್ಚು ದೂರಕ್ಕೆ ಹಾರಬಲ್ಲ ಸಾಮರ್ಥ್ಯವನ್ನು ಹೊಂದಲಿದೆ. ಈ ಬದಲಾವಣೆಗಳು ಇಂಧನ ಇಂಜೆಕ್ಷನ್ ವ್ಯವಸ್ಥೆಯ ಭಾಗವನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಸಾಫ್ಟ್ವೇರ್ ಬದಲಾವಣೆಗಳನ್ನು ಒಳಗೊಂಡಿವೆ.
ಕಡಿಮೆ ಗಾಳಿಯ ಘರ್ಷಣೆಯ ಲಾಭವನ್ನು ಪಡೆದುಕೊಳ್ಳುವ ಮೂಲಕ ಡಿಆರ್ಡಿಒ ತನ್ನ ವ್ಯಾಪ್ತಿಯನ್ನು ಹೆಚ್ಚಿಸಲು ಹೆಚ್ಚಿನ ಎತ್ತರದಲ್ಲಿ ಹಾರಲು ಕ್ಷಿಪಣಿಯನ್ನು ಪರೀಕ್ಷಿಸುತ್ತಿದೆ.
ಕ್ಷಿಪಣಿಯ ಶ್ರೇಣಿ, ವೇಗ ಮತ್ತು ರಹಸ್ಯ ಸಾಮರ್ಥ್ಯಗಳಿಗೆ ಸಂಬಂಧಿಸಿದಂತೆ ಬದಲಾವಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಬ್ರಹ್ಮೋಸ್ಗೆ ಬದಲಾವಣೆಗಳನ್ನು ಮಾಡಲಿದ್ದೇವೆ ಎಂದು ಡಿಆರ್ಡಿಒ ಹೇಳಿದೆ.
India successfully test-fires the extended range BrahMos supersonic cruise missile which can hit targets at over 400 km range.
Test carried out under PJ-10 project of Defence Research and Development Organisation under which the missile was launched with an indigenous booster.
— ANI (@ANI) September 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.