ಟೋಕಿಯೋ: ಜಪಾನ್ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ನಾಯಕರಾಗಿ ಅಲ್ಲಿನ ನಿರ್ಗಮಿತ ಪ್ರಧಾನಿ ಶಿಂಜೋ ಅಬೆ ಅವರ ಬಹುಕಾಲದ ಒಡನಾಡಿ ಯೊಶಿಹಿಡೆ ಸುಗ ಅವರು ಆಯ್ಕೆಯಾಗಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ನಾಯಕತ್ವಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸುಗ ಆಯ್ಕೆಯಾಗಿದ್ದಾರೆ. ಇದೇ ವಾರದಲ್ಲಿ ಜಪಾನ್ ಸಂಸತ್ನಲ್ಲಿ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿವೆ. ಸುಗ ಅವರಿಗೆ ಪ್ರಧಾನಿಯಾಗುವ ಹಾದಿ ಸದ್ಯ ಸುಗಮವಾಗಿದೆ. ಸಂಸತ್ತಿನಲ್ಲಿ ಅವರ ಪಕ್ಷಕ್ಕೆ ಬಹುಮತವೂ ಇದೆ.
ಸುಗ ಅವರಿಗೆ 71 ವರ್ಷವಾಗಿದ್ದು ಅವರು ಅಬೆ ಅವರ ಅಧಿಕಾರಾವಧಿಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿಯಂತಹ ಸ್ಥಾನವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರು ಉತ್ತರ ಪ್ರಾಂತ್ಯದ ಒಗಾಚಿ ಎಂಬಲ್ಲಿನ ನೇರಳೆ ಬೆಳೆಗಾರರ ಕುಟುಂಬದವರಾಗಿದ್ದಾರೆ. ಸದ್ಯ ರೈತನ ಮಗನೊಬ್ಬ ಜಪಾನ್ನ ಪ್ರಧಾನಿಯಾಗುವ ಕಾಲ ಸನ್ನಿಹಿತವಾದಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.