ನವದೆಹಲಿ: ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾವೈರಸ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂತಹ ಕಠಿಣ ಪರಿಸ್ಥಿಯಲ್ಲೂ ನಮ್ಮ ಕೊರೋನಾ ಯೋಧರು ಸಂಯಮ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಇಂದು ಗೂಗಲ್ ಡೂಡಲ್ ಮೂಲಕ ಧನ್ಯವಾದಗಳನ್ನು ಅರ್ಪಣೆ ಮಾಡಿದೆ.
ಸಾಮಾಜಿಕ ಅಂತರ ಮತ್ತು ಕೊರೋನಾ ನಿರ್ಬಂಧಗಳ ನಡುವೆಯೂ ಜನರ ಜೀವನಕ್ಕೆ ಅತೀ ಮುಖ್ಯವಾದ ಸರಕುಗಳನ್ನು ಪೂರೈಸಲು ಕಾರ್ಯನಿರ್ವಹಿಸುತ್ತಿರುವ ಜನರನ್ನು ಚಿತ್ರಿಸಲು ಡೂಡಲ್ನಲ್ಲಿನ ಗೂಗಲ್ ಪದವನ್ನು ಬಳಸಲಾಗಿದೆ. Google ಪದದ ಮಧ್ಯದ ಎರಡು 0 ಪದಗಳನ್ನು ಡೂಡಲೈಸ್ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದವರು, ನರ್ಸ್ಗಳು, ವೈದ್ಯರು, ಸರ್ಕಾರಿ ಅಧಿಕಾರಿಗಳು, ವಕೀಲರು, ರೈತರು, ಸ್ವಚ್ಛತಾ ಕಾರ್ಮಿಕರು, ಬಾಣಸಿಗರು ಮತ್ತು ಸಾರಿಗೆ ಸಿಬ್ಬಂದಿಗಳಿಗೆ ಗೂಗಲ್ ಡೂಡಲ್ ಮೂಲಕ ಧನ್ಯವಾದಗಳನ್ನು ಅರ್ಪಣೆ ಮಾಡಿದೆ. ಗೂಗಲ್ ಪದದ ನಡುವೆ ದೊಡ್ಡ ಹೃದಯದ ಚಿಹ್ನೆಯನ್ನು ಚಿತ್ರಿಸಿ ಧನ್ಯವಾದ ಅರ್ಪಣೆ ಮಾಡಲಾಗಿದೆ.
ಭಾರತ ಮಾತ್ರವಲ್ಲದೆ, ಕೆನಡಾ, ದಕ್ಷಿಣ ಆಫ್ರಿಕಾ, ಕಿನ್ಯಾ, ಗಾನ, ಸೆನೆಗಲ್, ಮೊರಾಕೊ ಅಲ್ಜೀರಿಯ, ಸೌದಿ ಅರೇಬಿಯಾ, ಇರಾಕ್ ಮುಂತಾದ ದೇಶಗಳಲ್ಲೂ ಗೂಗಲ್ ತನ್ನ ಡೂಡಲ್ ಮೂಲಕ ಯೋಧರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದೆ.
“ಕೋವಿಡ್ ಪ್ರಪಂಚದಾದ್ಯಂತದ ಸಮುದಾಯಗಳ ಮೇಲೆ ನಿರಂತರವಾಗಿ ಪ್ರಭಾವ ಬೀರುತ್ತಿದ್ದು, ಜನರು ಹಿಂದಿಗಿಂತಲೂ ಈಗ ಹೆಚ್ಚು ಒಗ್ಗೂಡಿದ್ದಾರೆ. ಸಾಮಾಜಿಕ ಅಂತರವನ್ನು ಗುರುತಿಸಲು ನಾವು ಡೂಡಲ್ ಸರಣಿಯನ್ನು ಪ್ರಾರಂಭಿಸಿದ್ದೇವೆ ಮತ್ತು ಮುಂಚೂಣಿಯ ಕೋರೋನಾ ಯೋಧರಿಗೆ ಗೌರವಿಸುತ್ತೇವೆ. ಎಲ್ಲಾ ಕೊರೋನಾ ಸಹಾಯಕರಿಗೆ ಧನ್ಯವಾದಗಳು” ಎಂದು ಗೂಗಲ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.