ನವದೆಹಲಿ: ರಾಷ್ಟ್ರೀಯ ಪ್ರಾಣಿ, ಪಕ್ಷಿಗಳಿರುವಂತೆಯೇ ರಾಷ್ಟ್ರೀಯ ಚಿಟ್ಟೆ ಎಂಬ ಸ್ಥಾನಮಾನವನ್ನು ನೀಡಲು ಚಿಟ್ಟೆಗಳ ಪ್ರಭೇದ ಆಯ್ಕೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಇಲಾಖೆ ಚಾಲನೆ ನೀಡಿದೆ.
ಇದಕ್ಕಾಗಿ ಚಿಟ್ಟೆಗಳ ಮಾಸವೆಂದೇ ಕರೆಯಲ್ಪಡುವ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಚಾಲನೆ ನೀಡಲಾಗಿದ್ದು, 50 ಮಂದಿ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಹವ್ಯಾಸಿ ಅಧ್ಯಯನಕಾರರು, ಸಂಶೋಧಕರು, ಬರಹಗಾರರು, ತಜ್ಞರಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಈ ಸಮಿತಿಯಿಂದ ಶಿಫಾರಸ್ಸುಗೊಂಡ ಚಿಟ್ಟೆಯ ಪ್ರಭೇದಕ್ಕೆ ‘ರಾಷ್ಟ್ರೀಯ ಚಿಟ್ಟೆ’ ಎಂಬ ಮಾನ್ಯತೆ ನೀಡುವುದಾಗಿಯೂ ಇಲಾಖೆ ತಿಳಿಸಿದೆ.
ಈ ಸಂಬಂಧ ಅಂತಿಮ ಪಟ್ಟಿಯಲ್ಲಿ ಏಳು ಚಿಟ್ಟೆಗಳ ಪ್ರಭೇದವನ್ನು ಆಯ್ಕೆ ಮಾಡಿ ಯಾವುದಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಬೇಕೆಂಬ ಬಗ್ಗೆ ಅಂತರ್ಜಾಲದ ಮೂಲಕ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಇಲಾಖೆ ಮುಂದಾಗಿದೆ. ಸೆ.10 ರಿಂದ ತೊಡಗಿದಂತೆ ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕವೂ ಮತದಾನಕ್ಕೆ ಅವಕಾಶ ನೀಡಿದೆ. ಯಾವ ಚಿಟ್ಟೆಯ ಪ್ರಭೇದ ಹೆಚ್ಚು ಮತಗಳನ್ನು ಪಡೆಯುವುದೋ ಅದನ್ನು ಕೇಂದ್ರ ಪರಿಸರ ಇಲಾಖೆಯ ಗಮನಕ್ಕೆ ತರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನಂತರ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷಾರಂಭದಲ್ಲಿ ಪರಿಸರ ಇಲಾಖೆಯೇ ‘ರಾಷ್ಟ್ರೀಯ ಚಿಟ್ಟೆ’ ಯ ಪ್ರಭೇದವನ್ನು ಘೋಷಣೆ ಮಾಡಲಿದೆ. ಕಾಮನ್ ಜೆಝೆಬೆಲ್, ಫೈವ್-ಬಾರ್ ಸ್ವೋರ್ಡ್ ಟೇಲ್, ಕೃಷ್ಣಾ ಪೀಕಾಕ್, ಎಲ್ಲೋ ಗಾರ್ಗನ್, ಕಾಮನ್/ಇಂಡಿಯನ್ ನವಾಬ್, ನದರ್ನ್ ಜಂಗಲ್ ಕ್ವೀನ್, ಆರೆಂಜ್ ಓಕ್ಲೀಫ್ ಪ್ರಭೇದಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.