ಮುಂಬಯಿ: ನಟಿ ಕಂಗಣಾ ರಣಾವತ್ ಕಛೇರಿಯನ್ನು ಧ್ವಂಸ ಮಾಡಲು ಹೊರಟ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಿಡಿಕಾರಿದ್ದಾರೆ. ಕೊರೋನಾವೈರಸ್ ವಿರುದ್ಧ ಹೋರಾಡುವುದನ್ನು ಬಿಟ್ಟು ಸರ್ಕಾರ ಕಂಗಣಾ ವಿರುದ್ಧ ಹೋರಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟೀಕಿಸಿದ ಫಡ್ನವಿಸ್, “ದಾವೂದ್ ಮನೆಯನ್ನು ಧ್ವಂಸ ಮಾಡಲು ನೀವು ಹೋಗುವುದಿಲ್ಲ, ಆದರೆ ನಟಿಯ ಮನೆಯನ್ನು ಧ್ವಂಸ ಮಾಡಲು ಮುಂದಾಗಿದ್ದೀರಿ” ಎಂದಿದ್ದಾರೆ.
“ಮಹಾರಾಷ್ಟ್ರ ಸರ್ಕಾರ ಯುದ್ಧ ಕೊರೋನಾವೈರಸ್ ವಿರುದ್ಧ ಅಲ್ಲ, ಕಂಗಣಾ ವಿರುದ್ದ ಎಂದು ಅಂದುಕೊಂಡಿದೆ. ಇಂದು, ಹೆಚ್ಚಿನ ಸಂಖ್ಯೆಯ ಕೊರೋನಾವೈರಸ್ ಪ್ರಕರಣಗಳು ಮಹಾರಾಷ್ಟ್ರದಲ್ಲಿವೆ. ಪ್ರತಿದಿನ, 23,000-25,000 ಪ್ರಕರಣಗಳು ದಾಖಲಾಗುತ್ತಿದೆ. ಶೇಕಡಾ 40 ಕೋವಿಡ್ ಸಂಬಂಧಿತ ಸಾವುಗಳು ಮಹಾರಾಷ್ಟ್ರದಿಂದ ದಾಖಲಾಗುತ್ತಿವೆ. ಈವರೆಗೆ 9.9 ಲಕ್ಷ ಪ್ರಕರಣಗಳು ದಾಖಲಾಗಿವೆ” ಎಂದಿದ್ದಾರೆ.
ಫಡ್ನವಿಸ್ ಮಾತ್ರವಲ್ಲದೆ ಹಲವಾರು ಜನರಿಂದ ಶಿವಸೇನೆ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ.
ಗುರುವಾರ, ಬಾಂಬೆ ಹೈಕೋರ್ಟ್ ರಣಾವತ್ ಅವರ ಕಚೇರಿಯನ್ನು ನೆಲಸಮ ಮಾಡುವುದಕ್ಕೆ ತಡೆಯಾಜ್ಞೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.