ನವದೆಹಲಿ: ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದ ಕೋವಿಡ್-19 ಒತ್ತಡಗಳಿಗೆ ಪರಿಹಾರದ ಚೌಕಟ್ಟನ್ನು ಅನುಷ್ಠಾನಗೊಳಿಸುವ ಕುರಿತು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್ ಅವರು ಸೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಮತ್ತು ಎನ್ಬಿಎಫ್ಸಿಗಳ ಉನ್ನತ ನಿರ್ವಾಹಕರೊಂದಿಗೆ ಗುರುವಾರ ಪರಿಶೀಲನಾ ಸಭೆ ನಡೆಸಿದರು.
2020 ರ ಸೆಪ್ಟೆಂಬರ್ 15 ರೊಳಗೆ ಸಾಲ ನೀಡುವವರು ರೆಸಲ್ಯೂಶನ್ ಯೋಜನೆಗಳನ್ನು ರೂಪಿಸಬೇಕು ಮತ್ತು ನಂತರ ಜಾಗೃತಿ ಮೂಡಿಸುವ ನಿರಂತರ ಮಾಧ್ಯಮ ಅಭಿಯಾನವನ್ನು ಕೈಗೊಳ್ಳಬೇಕು ಎಂದು ಹಣಕಾಸು ಸಚಿವರು ಒತ್ತಿ ಹೇಳಿದರು.
ರೆಸಲ್ಯೂಶನ್ ಫ್ರೇಮ್ವರ್ಕ್ನಲ್ಲಿ ನಿಯಮಿತವಾಗಿ ನವೀಕರಿಸಲಾದ FAQ ಗಳನ್ನು ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ತಮ್ಮ ವೆಬ್ಸೈಟ್ಗಳಲ್ಲಿ ಅಪ್ಲೋಡ್ ಮಾಡಲಾಗಿದೆಯೆ ಮತ್ತು ಅದನ್ನು ಕಚೇರಿಗಳು ಮತ್ತು ಶಾಖೆಗಳಿಗೆ ಹಂಚಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಲದಾತರಿಗೆ ಅವರು ಸಲಹೆ ನೀಡಿದರು.
ಸಭೆಯಲ್ಲಿ ಸೀತಾರಾಮನ್, ಸಾಲ ಮರುಪಾವತಿಯ ಮೇಲಿನ ವಿನಾಯಿತಿಯನ್ನು ತೆಗೆದುಹಾಕಿದಾಗ, ಸಾಲಗಾರರಿಗೆ ಬೆಂಬಲ ನೀಡಬೇಕು ಮತ್ತು ಕೋವಿಡ್-19 ಸಂಬಂಧಿತ ಯಾತನೆ ಸಾಲಗಾರರ ಸಾಲದ ಕ್ರೆಡಿಟ್ಸ್ಕೋರ್ ಮೌಲ್ಯಮಾಪನದ ಮೇಲೆ ಪರಿಣಾಮ ಬೀರಬಾರದು ಎಂದಿದ್ದಾರೆ.
ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್, ಭಾಗಶಃ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ (ಪಿಸಿಜಿಎಸ್) 2.0 ಮತ್ತು ಸಬ್-ಆರ್ಡಿನೇಟ್ ಸಾಲ ಯೋಜನೆಯ ಪ್ರಗತಿಯನ್ನು ಈ ವೇಳೆ ಹಣಕಾಸು ಸಚಿವರು ಪರಿಶೀಲಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.