ನವದೆಹಲಿ:1993ರ ಮುಂಬಯಿ ಸ್ಫೋಟದ ಆರೋಪಿ ಯಾಕುಬ್ ಮೆಮೋನ್ನನ್ನು ಗುರುವಾರ ಬೆಳಿಗ್ಗೆ ಗಲ್ಲಿಗೇರಿಸಲಾಗಿದೆ. ಕಳೆದ ನಾಲ್ಕು ವರ್ಷದಲ್ಲಿ ಗಲ್ಲಿಗೇರಿಸಲ್ಪಟ್ಟ ಮೂರನೇ ವ್ಯಕ್ತಿ ಈತ.
ಮೆಮೋನ್ಗಿಂತಲೂ ಮೊದಲು 2013ರ ಫೆಬ್ರವರಿ 9ರಂದು ಸಂಸತ್ತು ದಾಳಿಯ ರುವಾರಿ ಮೊಹಮ್ಮದ್ ಅಫ್ಜಲ್ನನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಈತನಿಗೆ 2004ರಲ್ಲೇ ಸುಪ್ರೀಂ ಗಲ್ಲು ಶಿಕ್ಷೆಯನ್ನು ಘೋಷಿಸಿತ್ತು. ಬಳಿಕ ಹಲವಾರು ಪರ ವಿರೋಧಗಳು ನಡೆದು, ಸರ್ಕಾರ ವಿಳಂಬ ಧೊರಣೆ ಅನುಸರಿಸಿ ಕೊನೆಗೂ ಆತನನ್ನು ನೇಣುಗಂಬಕ್ಕೆ ಏರಿಸಲಾಯಿತು.
26/11ರ ಮುಂಬಯಿ ದಾಳಿ ನಡೆಸಿದ ಉಗ್ರರಲ್ಲಿ ಜೀವಂತವಾಗಿ ಸೆರೆಸಿಕ್ಕ ಪಾಕಿಸ್ಥಾನಿ ಉಗ್ರ ಅಜ್ಮಲ್ ಕಸಬ್ನನ್ನು ನವೆಂಬರ್ 21, 2012ರಲ್ಲಿ ಪುಣೆಯ ಯೆರೆವಾಡ ಜೈಲಿನಲ್ಲಿ ನೇಣಿಗೇರಿಸಲಾಯಿತು. ದಾಳಿ ನಡೆದ ನಾಲ್ಕು ವರ್ಷಗಳಲ್ಲಿ ಈತನಿಗೆ ಮರಣದಮಡನೆ ನೀಡಲಾಯಿತು.
ಇದೀಗ ಯಾಕೂಬ್ ನೇಣುಗಂಬಕ್ಕೇರಿದ್ದಾರೆ. ಅದು ತನ್ನ 54ನೇ ಹುಟ್ಟು ಹಬ್ಬದ ದಿನವೇ. ಈ ಮೂಲಕ ಕಳೆದ ನಾಲ್ಕು ವರ್ಷದಲ್ಲಿ ಗಲ್ಲಿಗೇರಿದ್ದ 3 ನೇ ಅಪರಾಧಿ ಎನಿಸಿಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.