ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ನ ಟ್ವಿಟರ್ ಖಾತೆಯನ್ನು ಗುರುವಾರ ಬೆಳಿಗ್ಗೆ ಹ್ಯಾಕ್ ಮಾಡಲಾಗಿದೆ. ವೆಬ್ಸೈಟ್ ಅನ್ನು ಹ್ಯಾಕ್ ಮಾಡಿದ ನಂತರ ಹ್ಯಾಕರ್ಗಳು ಕೆಲವು ಟ್ವೀಟ್ಗಳನ್ನು ಸಹ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಸಂಸ್ಥೆಯು ಪಿಎಂ ಮೋದಿಯವರ ವೈಯಕ್ತಿಕ ವೆಬ್ಸೈಟ್ ಹ್ಯಾಕಿಂಗ್ ಅನ್ನು ದೃಢಪಡಿಸಿದೆ ಮತ್ತು ಹ್ಯಾಕ್ ಮಾಡಿದ ಖಾತೆಯನ್ನು ಭದ್ರಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. “ನಾವು ಪರಿಸ್ಥಿತಿಯನ್ನು ಸಕ್ರಿಯವಾಗಿ ತನಿಖೆ ಮಾಡುತ್ತಿದ್ದೇವೆ. ಈ ಸಮಯದಲ್ಲಿ, ಹೆಚ್ಚುವರಿ ಖಾತೆಗಳ ಮೇಲೆ ಪರಿಣಾಮ ಬೀರಿದ ಬಗ್ಗೆ ನಮಗೆ ತಿಳಿದಿದುಬಂದಿಲ್ಲ” ಎಂದು ಟ್ವಿಟರ್ ವಕ್ತಾರರು ತಿಳಿಸಿದ್ದಾರೆ.
ಈಗ ಅಳಿಸಲಾಗಿರುವ ಟ್ವೀಟ್ಗಳು, ಪ್ರಧಾನಿ ಮೋದಿ ಅವರ ಅನುಯಾಯಿಗಳನ್ನು ಕ್ರಿಪ್ಟೋಕರೆನ್ಸಿ ಮೂಲಕ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಳಿಕೊಂಡಿತ್ತು.
ಪಿಎಂ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್ಸೈಟ್ಗೆ ಲಿಂಕ್ ಮಾಡಲಾಗಿರುವ ಟ್ವಿಟರ್ ಖಾತೆ (arenarendramodi_in) 2.5 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ ಎಂಬುದನ್ನು ಗಮನಿಸಬೇಕು.
ಪಿಎಂ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆಯು ಸುರಕ್ಷಿತವಾಗಿದೆ. ಪಿಎಂ ಮೋದಿಯವರ ವೈಯಕ್ತಿಕ ಟ್ವಿಟ್ಟರ್ ಖಾತೆಯಲ್ಲಿ 61 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.