ನವದೆಹಲಿ: ಕಲ್ಲಿದ್ದಲು ಮೂಲಸೌಕರ್ಯ, ಯೋಜನೆ ಅಭಿವೃದ್ಧಿ, ಪರಿಶೋಧನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 500 ಯೋಜನೆಗಳ ಅಭಿವೃದ್ಧಿಗೆ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) 1.22 ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ. ಕಲ್ಲಿದ್ದಲಿನ ವಿಷಯದಲ್ಲಿ ಭಾರತವನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಮತ್ತು 2023-2024ರ ವೇಳೆಗೆ 1 ಬಿಲಿಯನ್ ಟನ್ ಉತ್ಪಾದನಾ ಗುರಿಯನ್ನು ಸಾಧಿಸುವುದು ಈ ಹೂಡಿಕೆಯ ಗುರಿಯಾಗಿದೆ.
ಕೋಲ್ ಇಂಡಿಯಾ ಆಯೋಜನೆಗೊಳಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ, “ಕಂಪನಿಯ ವ್ಯವಹಾರಗಳಲ್ಲಿ ಸಂಬಂಧಪಟ್ಟ ಎಲ್ಲ ಪಾಲುದಾರರ ಪಾಲ್ಗೊಳ್ಳುವಿಕೆ ಯೋಜನೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ ಮತ್ತು ಬಹಿರಂಗಪಡಿಸುತ್ತದೆ. ಕೋಲ್ ಇಂಡಿಯಾ ತನ್ನ 49 ಫಸ್ಟ್ ಮೈಲ್ ಕನೆಕ್ಟಿವಿಟಿ ಯೋಜನೆಗಳಿಗಾಗಿ ಎರಡು ಹಂತಗಳಲ್ಲಿ ಮುಂದಿನ 3 ರಿಂದ 4 ವರ್ಷಗಳಲ್ಲಿ ಸುಮಾರು 14 ಸಾವಿರ 200 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ” ಎಂದು ಅವರು ಮಾಹಿತಿ ನೀಡಿದರು.
ಮೊದಲ ಮೈಲ್ ಕನೆಕ್ಟಿವಿಟಿ ಎಂದರೆ ಕಲ್ಲಿದ್ದಲನ್ನು ಪಿಟ್ಹೆಡ್ಗಳಿಂದ ರವಾನೆ ಸ್ಥಳಗಳಿಗೆ ಸಾಗಿಸುವುದು. ರಸ್ತೆಯ ಮೂಲಕ ಅಸ್ತಿತ್ವದಲ್ಲಿರುವ ಸಾರಿಗೆ ವಿಧಾನವನ್ನು ಬದಲಾಯಿಸಲು ಕಲ್ಲಿದ್ದಲಿನ ಕಂಪ್ಯೂಟರ್ ನೆರವಿನ ಲೋಡಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಮೈನ್ ಡೆವಲಪರ್ ಮತ್ತು ಆಪರೇಟರ್ (ಎಂಡಿಒ) ಮಾದರಿಯಲ್ಲಿ ಕಾರ್ಯನಿರ್ವಹಿಸಲಿರುವ 15 ಗ್ರೀನ್ಫೀಲ್ಡ್ ಯೋಜನೆಗಳನ್ನು ಕೋಲ್ ಇಂಡಿಯಾ ಗುರುತಿಸಿದೆ. ಒಟ್ಟಾರೆ ಸುಮಾರು 34 ಸಾವಿರ 600 ಕೋಟಿ ರೂಪಾಯಿಗಳನ್ನು ಈ ಮಾರ್ಗದ ಮೂಲಕ ಹೂಡಿಕೆ ಮಾಡಲಾಗುತ್ತದೆ. ಸಭೆಯಲ್ಲಿ, ಕೋಲ್ ಇಂಡಿಯಾ ತನ್ನ ಪಾಲುದಾರರ ಹೆಚ್ಚಿನ ಭಾಗವಹಿಸುವಿಕೆಗಾಗಿ ಹಲವಾರು ಕ್ರಮಗಳನ್ನು ಘೋಷಿಸಿತು. ಗಣಿಗಾರಿಕೆ ಟೆಂಡರ್ಗಳಿಗೆ ಅನುಭವದ ಮಾನದಂಡವನ್ನು ಶೇಕಡಾ 65 ರಿಂದ 50 ಕ್ಕೆ ಇಳಿಸಲಾಗಿದೆ, ಆದರೆ ಟರ್ನ್ಕೀ ಗುತ್ತಿಗೆಗಳಲ್ಲಿ ಕೆಲಸದ ಅನುಭವದ ಮಾನದಂಡಗಳನ್ನು ಶೇಕಡಾ 50 ರಷ್ಟು ಸಡಿಲಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.