ನವದೆಹಲಿ: ಹಾಕಿ ಲೆಜೆಂಡ್ ಮೇಜರ್ ಧ್ಯಾನ್ ಚಂದ್ ಅವರ ಜನ್ಮ ದಿನ ಆ.29 ಅನ್ನು ದೇಶದಲ್ಲಿ ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ಟ್ವಿಟ್ ಮಾಡಿರುವ ಮೋದಿ, “ಇಂದು, ರಾಷ್ಟ್ರೀಯ ಕ್ರೀಡಾ ದಿನ. ಈ ಸಂದರ್ಭದಲ್ಲಿ ನಾವು ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವ ಸಲ್ಲಿಸುತ್ತೇವೆ, ಹಾಕಿ ಸ್ಟಿಕ್ನೊಂದಿಗೆ ಅವರ ಮ್ಯಾಜಿಕ್ ಅನ್ನು ಎಂದಿಗೂ ಮರೆಯಲಾಗುವುದಿಲ್ಲ. ನಮ್ಮ ಪ್ರತಿಭಾವಂತ ಕ್ರೀಡಾಪಟುಗಳ ಯಶಸ್ಸಿಗೆ ಕುಟುಂಬಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ನೀಡಿದ ಅತ್ಯುತ್ತಮ ಬೆಂಬಲವನ್ನು ಶ್ಲಾಘಿಸುವ ದಿನವೂ ಇದಾಗಿದೆ” ಎಂದಿದ್ದಾರೆ.
“ವಿವಿಧ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಮತ್ತು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ ಎಲ್ಲಾ ಅನುಕರಣೀಯ ಕ್ರೀಡಾಪಟುಗಳ ಅದ್ಭುತ ಸಾಧನೆಗಳನ್ನು ಆಚರಿಸುವ ದಿನ ರಾಷ್ಟ್ರೀಯ ಕ್ರೀಡಾ ದಿನ” ಎಂದಿದ್ದಾರೆ.
“ಭಾರತದಲ್ಲಿ ಕ್ರೀಡೆಗಳನ್ನು ಜನಪ್ರಿಯಗೊಳಿಸಲು ಮತ್ತು ಕ್ರೀಡಾ ಪ್ರತಿಭೆಗಳನ್ನು ಬೆಂಬಲಿಸಲು ಭಾರತ ಸರ್ಕಾರ ಹಲವಾರು ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ಸಮಯದಲ್ಲಿ, ಪ್ರತಿಯೊಬ್ಬರೂ ಕ್ರೀಡೆ ಮತ್ತು ಫಿಟ್ನೆಸ್ ವ್ಯಾಯಾಮವನ್ನು ತಮ್ಮ ದೈನಂದಿನ ದಿನಚರಿಯ ಭಾಗವಾಗಿಸಲು ನಾನು ವಿನಂತಿಸುತ್ತೇನೆ. ಹಾಗೆ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ, ಎಲ್ಲರೂ ಸಂತೋಷವಾಗಿರುತ್ತಾರೆ ಮತ್ತು ಆರೋಗ್ಯವಾಗಿರುತ್ತಾರೆ” ಎಂದಿದ್ದಾರೆ.
ಧ್ಯಾನ್ ಚಂದ್ ಅವರು 1905ರ ಆ.29ರಂದು ಅಲಹಾಬಾದ್ನ ರಜಪೂತ ಸಮುದಾಯದಲ್ಲಿ ಜನಿಸಿದ್ದರು. ಒಲಿಂಪಿಕ್ಸ್ನಲ್ಲಿ ಹಾಕಿಯಲ್ಲಿ ಭಾರತಕ್ಕೆ ಬಂಗಾರ ತಂದು ಕೊಟ್ಟ ಕೀರ್ತಿ ಇವರದ್ದು.
2012ರಲ್ಲಿ ಭಾರತ ಸರ್ಕಾರ ಅವರ ಜನ್ಮದಿನವನ್ನು ‘ರಾಷ್ಟ್ರೀಯ ಕ್ರೀಡಾ ದಿನ’ವನ್ನಾಗಿ ಆಚರಿಸಲು ನಿರ್ಧರಿಸಿತು.
#NationalSportsDay is a day to celebrate the remarkable achievements of all those exemplary sportspersons who have represented India in various sports and made our nation proud. Their tenacity and determination are outstanding.
— Narendra Modi (@narendramodi) August 29, 2020
Today, on #NationalSportsDay, we pay tributes to Major Dhyan Chand, whose magic with the hockey stick can never be forgotten.
This is also a day to laud the outstanding support given by the families, coaches and support staff towards the success of our talented athletes.
— Narendra Modi (@narendramodi) August 29, 2020
Government of India is making numerous efforts to popularise sports and support sporting talent in India. At the same time, I urge everyone to make sports and fitness exercises a part of their daily routine. There are many benefits of doing so. May everyone be happy and healthy!
— Narendra Modi (@narendramodi) August 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.