ನವದೆಹಲಿ: ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕೋವಿಡ್ -19 ಲಸಿಕೆಯ 2 ನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗವನ್ನು ಇಂದಿನಿಂದ ಪ್ರಾರಂಭಿಸಲಿದೆ. ಈ ತಿಂಗಳ ಆರಂಭದಲ್ಲಿ ಅದು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಎರಡನೇ ಮತ್ತು ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ಪಡೆದುಕೊಂಡಿದೆ.
ಸೆರಮ್ ಇನ್ಸ್ಟಿಟ್ಯೂಟ್ ಸಂಭಾವ್ಯ ಕೋವಿಡ್ -19 ಲಸಿಕೆ ತಯಾರಿಸಲು ಬ್ರಿಟಿಷ್-ಸ್ವೀಡಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಜೊತೆ ಪಾಲುದಾರಿಕೆ ಹೊಂದಿದ್ದು, ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.
ಲಸಿಕೆ ಕೋವಿಶೀಲ್ಡ್ನ ಹಂತ 2 ಮತ್ತು 3 ಪ್ರಯೋಗಗಳನ್ನು ಭಾರತದ 17 ತಾಣಗಳಲ್ಲಿ 1,600 ಆರೋಗ್ಯವಂತ ವಯಸ್ಕರಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಪರೀಕ್ಷಾ ತಾಣಗಳಲ್ಲಿ ಏಮ್ಸ್ ದೆಹಲಿ, ಪುಣೆಯ ಬಿಜೆ ವೈದ್ಯಕೀಯ ಕಾಲೇಜು, ಪಾಟ್ನಾದ ರಾಜೇಂದ್ರ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಎಂಆರ್ಐಎಂಎಸ್), ಚಂಡೀಗ
ಕೋವಿಶೀಲ್ಡ್ನ ಹಂತ 2 ಮತ್ತು 3 ಪ್ರಯೋಗಗಳನ್ನು ಭಾರತದ 17 ತಾಣಗಳಲ್ಲಿ 1,600 ಆರೋಗ್ಯವಂತ ವಯಸ್ಕರಲ್ಲಿ ನಡೆಸಲಾಗುವುದು.
ಪರೀಕ್ಷಾ ತಾಣಗಳಲ್ಲಿ ಏಮ್ಸ್ ದೆಹಲಿ, ಪುಣೆಯ ಬಿಜೆ ವೈದ್ಯಕೀಯ ಕಾಲೇಜು, ಪಾಟ್ನಾದ ರಾಜೇಂದ್ರ ಮೆಮೋರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಆರ್ಎಂಆರ್ಐಎಂಎಸ್), ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಏಮ್ಸ್-ಜೋಧ್ಪುರ್, ಗೋರಖ್ಪುರದ ನೆಹರು ಆಸ್ಪತ್ರೆ, ಆಂಧ್ರ ವೈದ್ಯಕೀಯ ಕಾಲೇಜು ವಿಶಾಖಪಟ್ಟಣಂ ಮತ್ತು ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸೇರಿದೆ.
“ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ನಿಂದ ನಮಗೆ ಎಲ್ಲಾ ಅನುಮೋದನೆಗಳು ದೊರೆತಿವೆ. ನಾವು ಆಗಸ್ಟ್ 25 ರಿಂದ ಭಾರತಿ ವಿದ್ಯಾಪೀಠ ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಾನವ ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದೇವೆ” ಎಂದು ಸಂಸ್ಥೆ ಹೇಳಿದೆ.
ಆಕ್ಸ್ಫರ್ಡ್ ಕೋವಿಡ್ -19 ಲಸಿಕೆ ಯುಕ ಯ ಐದು ಪ್ರಯೋಗ ತಾಣಗಳಲ್ಲಿ ನಡೆಸಿದ ಪ್ರಯೋಗಗಳ ಮೊದಲ ಎರಡು ಹಂತಗಳ ಆರಂಭಿಕ ಫಲಿತಾಂಶಗಳಲ್ಲಿ ಭರವಸೆಯನ್ನು ಮೂಡಿಸಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.