ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಎರಡನೇ ಮೂನ್ ಸ್ಪೇಸ್ಕ್ರಾಫ್ಟ್ ಚಂದ್ರಯಾನ್ -2 ಅನ್ನು ಚಂದ್ರನ ಕಕ್ಷೆಗೆ ಸೇರಿಸಿ ಒಂದು ವರ್ಷವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ತಿಳಿಸಿದೆ.
“ಭಾರತದ ಎರಡನೇ ಚಂದ್ರ ಮಿಷನ್ ಚಂದ್ರಯಾನ್ -2 ಗುರುವಾರ ಚಂದ್ರನ ಸುತ್ತ ಒಂದು ವರ್ಷ ಕಕ್ಷೆಯಲ್ಲಿ ಪೂರ್ಣಗೊಳಿಸಿದೆ ಮತ್ತು ಎಲ್ಲಾ ಉಪಕರಣಗಳು ಪ್ರಸ್ತುತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಇನ್ನೂ ಏಳು ವರ್ಷಗಳವರೆಗೆ ಕಾರ್ಯನಿರ್ವಹಿಸಲು ಸಾಕಷ್ಟು ಆನ್ಬೋರ್ಡ್ ಇಂಧನವನ್ನು ಹೊಂದಿದೆ” ಎಂದು ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ.
ಚಂದ್ರಯಾನ್ -2 ಬಾಹ್ಯಾಕಾಶ ನೌಕೆ / ಆರ್ಬಿಟರ್ ಅನ್ನು 22 ಜುಲೈ 2019 ರಂದು ಉಡಾವಣೆ ಮಾಡಲಾಗಿತ್ತು, 20 ಆಗಸ್ಟ್ 2019 ರಂದು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.
ಲ್ಯಾಂಡರ್ ವಿಕ್ರಮ್ನ ಮೃದು-ಲ್ಯಾಂಡಿಂಗ್ ಪ್ರಯತ್ನವು ಯಶಸ್ವಿಯಾಗದಿದ್ದರೂ ಕೂಡ, ಎಂಟು ವೈಜ್ಞಾನಿಕ ಸಾಧನಗಳನ್ನು ಹೊಂದಿದ್ದ ಆರ್ಬಿಟರ್ ಅನ್ನು ಯಶಸ್ವಿಯಾಗಿ ಚಂದ್ರನ ಕಕ್ಷೆಯಲ್ಲಿ ಇರಿಸಲಾಗಿತ್ತು. ಭಾರತದ ಈ ಸಾಧನೆಗೆ ವಿಶ್ವವೇ ಕೊಂಡಾಡಿತ್ತು.
ಮಿಷನ್ ಸಂಪೂರ್ಣ ಯಶಸ್ವಿಯಾಗದಿದ್ದರೂ ಕೂಡ ಇಸ್ರೋ ಮಾಡಿದ ಸಾಧನೆ ಇಡೀ ಭಾರತೀಯರನ್ನು ರೋಮಾಂಚನಕ್ಕೆ ಒಳಪಡಿಸಿತ್ತು. ಚಂದ್ರಯಾನ-2 ಉಡಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಇಸ್ರೋ ಕೇಂದ್ರದಲ್ಲಿ ಇದ್ದು ವಿಜ್ಞಾನಿಗಳಿಗೆ ಸ್ಪೂರ್ತಿ ತುಂಬಿದ್ದರು.
Today #Chandrayaan2 completes one year on Moon orbit. #Chandrayaan2 was successfully inserted in to Lunar orbit on August 20, 2019.
For details visit: https://t.co/u9CUiuNJvA
— ISRO (@isro) August 20, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.