ನವದೆಹಲಿ: ಕೊರೋನಾ ಚಿಕಿತ್ಸೆಯಲ್ಲಿ ಬಳಸಲು ಔಷಧ ತಯಾರಿಕಾ ಕಂಪೆನಿ ಜೈಡಸ್ ಕ್ಯಾಡಿಲಾವು ‘ರೆಮ್ಡೆಸಿವಿರ್’ ನ ಜೆನೆರಿಕ್ ಆವೃತ್ತಿಯನ್ನು 2,800 ರೂ. ಗಳಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 100 ಮಿಲಿ ಗ್ರಾಂಗಳ ಇಂಜೆಕ್ಷನ್ ಇದಾಗಿದ್ದು, ರೆಮ್ಡಾಕ್ನ ಅತ್ಯಂತ ಕಡಿಮೆ ಬೆಲೆಯ ರೆಮ್ಡೆಸಿವಿರ್ ಬ್ರಾಂಡ್ ಇದಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರ್ವಿಲ್ ಪಟೇಲ್, ಕೊರೋನಾ ಚಿಕಿತ್ಸೆಯಲ್ಲಿ ಬಳಕೆ ಮಾಡಬಹುದಾದ, ರೋಗಿಗಳಿಗೆ ಕೈಗೆಟಕುವಂತೆ ಕಡಿಮೆ ದರದಲ್ಲಿ ಲಭ್ಯವಾಗುವ ಉತ್ತಮ ಔಷಧ ಇದಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಭಾರತದ ಎಲ್ಲಾ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಈ ಔಷಧ ದೊರೆಯುವಂತೆ ಮಾಡಲು ಪೂರಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೊರೋನಾ ಸಾಂಕ್ರಾಮಿಕ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈ ಔಷಧದ ಹೆಚ್ಚಿನ ಉತ್ಪಾದನೆಗಾಗಿ ಕಂಪೆನಿ ಪ್ರಯತ್ನ ನಡೆಸುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ಈ ಔಷಧದ ಹೆಚ್ಚಿನ ಉತ್ಪಾದನೆಗಾಗಿ ಸಂಸ್ಥೆಯು ಗಿಲಿಯಾಡ್ ಸೈನ್ಸಸ್ ಇಂಕ್ ಜೊತೆಗೂ ಒಪ್ಪಂದ ಮಾಡಿಕೊಂಡಿತ್ತು. ಈ ಔಷಧವು USFDA ಇಂದ ತುರ್ತು ಬಳಕೆಯ ಅನುಮತಿಯನ್ನು ಪಡೆದುಕೊಂಡಿರುವುದಾಗಿಯೂ ಸಂಸ್ಥೆ ಮಾಹಿತಿ ನೀಡಿದೆ. ಈ ಔಷಧದ ಎಪಿಐ ಅನ್ನು ಗುಜರಾತ್ನ ಎಪಿಐ ಉತ್ಪಾದನಾ ಸಂಸ್ಥೆ ಉತ್ಪಾದಿಸಿತ್ತು ಎಂದು ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.