ಕೋಲ್ಕತ್ತಾ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅಗಲಿದರೂ ಅವರ ಅಧಿಕೃತ ಟ್ವಿಟರ್ ಅಕೌಂಟ್ ತನ್ನ ಕಾರ್ಯವನ್ನು ಮುಂದುವರೆಸಲಿದೆ. ಅದು ಕೂಡ ಹೊಸ ರೂಪದಲ್ಲಿ.
ಕಲಾಂ ಅವರ ನಿಕಟವರ್ತಿಗಳು ಟ್ವಿಟರ್ ನಿರ್ವಹಣೆ ಮಾಡಲಿದ್ದಾರೆ, ಅದರ ಹೆಸರನ್ನು ಈಗಾಗಲೇ ‘ಇನ್ ಮೆಮೊರಿ ಆಫ್ ಡಾ.ಕಲಾಂ’ ಎಂದು ಪರಿವರ್ತಿಸಲಾಗಿದೆ.
ಕಲಾಂ ಆಪ್ತ ಸೃಜನ್ ಪಾಲ್ ಸಿಂಗ್ ಅವರು ಟ್ವಿಟರ್ ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಕಲಾಂ ಅವರ ಪ್ರೇರಣಾದಾಯಕ ಭಾಷಣಗಳನ್ನು, ಮಾತುಗಳನ್ನು, ವಾಕ್ಯಗಳನ್ನು ನಿರಂತರವಾಗಿ ಟ್ವಿಟ್ ಮಾಡಲಿದ್ದಾರೆ. ಕಲಾಂ ಮತ್ತು ಸಿಂಗ್ ಜಂಟಿಯಾಗಿ ಬರೆದಿರುವ ‘ಅಡ್ವಾಂಟೇಜ್ ಇಂಡಿಯಾ’ ಪುಸ್ತಕ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.
2011ರಲ್ಲಿ ಟ್ವಿಟರ್ಗೆ ಪಾದಾರ್ಪಣೆ ಮಾಡಿದ ಕಲಾಂ ಅವರಿಗೆ 1.4 ಮಿಲಿಯನ್ ಫಾಲೋವರ್ಗಳಿದ್ದಾರೆ, ದೇಶದ ಪ್ರಚಲಿತ ವಿಷಯಗಳ, ಸಮಸ್ಯೆಗಳ ಬಗ್ಗೆ ಅವರು ನಿರಂತರ ಟ್ವಿಟ್ಗಳನ್ನು ಮಾಡುತ್ತಿದ್ದರು. ಅವರು ಅಗಲಿದ ಬಳಿಕವೂ ಅವರ ಟ್ವಿಟರ್ನ್ನು ಜೀವಂತವಾಗಿರಿಸಲು ಅವರ ಆಪ್ತರು ಚಿಂತಿಸಿದ್ದು ಶ್ಲಾಘನೀಯ ಕಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.