ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಇಂದು 22 ಲಕ್ಷಗಳನ್ನು ದಾಟಿದ್ದು, 62,064 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. 1,007 ಹೆಚ್ಚಿನ ಸಾವುಗಳೊಂದಿಗೆ ಸಾವಿನ ಸಂಖ್ಯೆ 44,386 ಕ್ಕೆ ಏರಿದೆ.ಈ ನಡುವೆ ಚೇತರಿಕೆ ಪ್ರಮಾಣ ಸುಧಾರಣೆಯಾಗುತ್ತಿರುವುದು ನಿರಾಳತೆಯನ್ನು ತಂದುಕೊಟ್ಟಿದೆ.
54.859 ಜನರು ಕಳೆದ 24 ಗಂಟೆಗಳಲ್ಲಿ ಚೇತರಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 15,35. 743 ಕ್ಕೆ ಏರಿಕೆಯಾಗಿದೆ.
ಇದು ಚೇತರಿಕೆ ದರವನ್ನು ಶೇಕಡಾ 69.33 ಕ್ಕೆ ತೆಗೆದುಕೊಂಡಿದೆ. ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 2 ಕ್ಕೆ ಇಳಿದಿದೆ. 44,386 ಸಾವುಗಳು ಸೇರಿದಂತೆ ಒಟ್ಟು ಪೀಡಿತ ಜನರ ಸಂಖ್ಯೆ ಸೇರಿದಂತೆ 22,15,074 ಕ್ಕೆ ತಲುಪಿದೆ. ದೇಶದಲ್ಲಿ ಕೊರೋನಾವೈರಸ್ ಕಾಯಿಲೆಯ 6,34, 945 ಸಕ್ರಿಯ ಪ್ರಕರಣಗಳಿವೆ.
ಇಂದು ಬೆಳಿಗ್ಗೆ 11 ಗಂಟೆಗೆ ಕೊರೋನಾವೈರಸ್ ಸಂಬಂಧಿತ ಪರಿಸ್ಥಿತಿ ಕುರಿತು ಚರ್ಚಿಸಲು ಪಿಎಂ ಮೋದಿ 10 ರಾಜ್ಯಗಳ ಸಿಎಂಗಳೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಲಿದ್ದಾರೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಪಂಜಾಬ್, ಬಿಹಾರ, ಗುಜರಾತ್, ತೆಲಂಗಾಣ, ಉತ್ತರ ಪ್ರದೇಶದ ಸಿಎಂಗಳು ಇದರಲ್ಲಿ ಭಾಗಿಯಾಗಲಿದ್ದಾರೆ..
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.