ಬೆಳ್ತಂಗಡಿ : ಆದಿವಾಸಿ ಸಮುದಾಯದ ಸುಂದರ ಮಲೆಕುಡಿಯ ಅವರ ಮೇಲೆ ದಾಳಿ ನಡೆಸಿ ಅವರ ಎರಡೂ ಕೈಗಳನ್ನು ತುಂಡರಿಸಿದ ಕಟುಕ ಭೂಮಾಲಿಕ ಗೋಪಾಲ ಗೌಡರ ದಬ್ಬಾಳಿಕೆಯನ್ನು ಸಿಪಿಎಂ ತೀವ್ರವಾಗಿ ಖಂಡಿಸಿದ್ದು ಆರೋಪಿಯನ್ನು ಕೂಡಲೇ ಬಂಧಿಸುವಂತೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಅವರು ಆಗ್ರಹಿಸಿದ್ದಾರೆ.
ಅವರು ಬೆಳ್ತಂಗಡಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಮಲೆಕುಡಿಯ ಸಮುದಾಯವನ್ನು ಭೂ ಮಾಲಕರು ನಿರಂತರವಾಗಿ ಶೋಷಣೆ ಮಾಡುತ್ತಾ ಬಂದಿದ್ದರೂ ಸರಕಾರಗಳು ಇವರ ರಕ್ಷಣೆಗೆ ಕ್ರಮಕೈಗೊಳ್ಳದಿರುವುದು ಖಂಡನೀಯ. ಅತ್ಯಂತ ಅಮಾನವೀಯವಾದ ರೀತಿಯಲ್ಲಿ ಕಾಡುಕಡಿಯುವ ಯಂತ್ರದಿಂದ ಕೈಗಳನ್ನು ಗೌಡ ಕತ್ತರಿಸಿದ್ದಾರೆ.
ಇದು ಕೇವಲ ಒಂದೇ ಪ್ರಕರಣವಾಗಿರದೆ ಇಂತಹ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು ಇದರ ವಿರುದ್ಧ ಜು.31 ರಂದು ಸಿಪಿಎಂ ಪಕ್ಷ ಹಾಗೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಸಿಪಿಎಂ ಮುಖಂಡರುಗಳಾದ ಬಿ.ಎಂ.ಭಟ್, ವಸಂತ ನಡ, ಈಶ್ವರಿ, ವಿಠಲ ಮಲೆಕುಡಿಯ, ದೇವಕಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.