ನವದೆಹಲಿ: ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ‘ಭೂಮಿ ಪೂಜೆ’ ನಡೆಯಲಿದ್ದು, ಈ ಸಂದರ್ಭದಲ್ಲಿ 1.25 ಲಕ್ಷಕ್ಕೂ ಹೆಚ್ಚು ‘ರಘುಪತಿ ಲಡ್ಡುʼಗಳನ್ನು ವಿತರಿಸುವುದಾಗಿ ಬಿಹಾರದ ರಾಜಧಾನಿ ಪಾಟ್ನಾದಲ್ಲಿರುವ ಮಹಾವೀರ್ ಮಂದಿರ ಟ್ರಸ್ಟ್ ಘೋಷಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಮಹಾದೇವ್ ಮಂದಿರ ಟ್ರಸ್ಟ್ ಈ ಒಟ್ಟು ಲಡ್ಡುಗಳ ಪೈಕಿ ಅಯೋಧ್ಯೆಯಲ್ಲಿರುವ ಭವ್ಯ ರಾಮ ದೇವಾಲಯದ ನಿರ್ಮಾಣ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಲು ರಚಿಸಲಾಗಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ಸುಮಾರು 51,000 ಲಡ್ಡುಗಳನ್ನು ಹಸ್ತಾಂತರಿಸಲಿದೆ.
ಉಳಿದ ಲಡ್ಡುಗಳನ್ನು ಬಿಹಾರದ ಸೀತಮಾರ್ಹಿಯಲ್ಲಿರುವ ಮಾತಾ ಜನಕಿಯ ಜನ್ಮಸ್ಥಳದಲ್ಲಿರುವ ದೇವಾಲಯಗಳಿಗೆ ಮತ್ತು ಭಗವಾನ್ ರಾಮನ ‘ಪಾದ ಚಿಹ್ನೆ’ (ಹೆಜ್ಜೆಗುರುತುಗಳು) ಇದೆ ಎಂದು ನಂಬಲಾಗಿರುವ 25 ತೀರ್ಥಯಾತ್ರೆಯ ಸ್ಥಳಗಳಿಗೆ ಕಳುಹಿಸಲಾಗುವುದು ಎಂದು ಮಹಾದೇವ್ ಮಂದಿರದ ಟ್ರಸ್ಟ್ ಆಚಾರ್ಯ ಕಿಶೋರ್ ಕುನಾಲ್ ಅವರು ಹೇಳಿದ್ದಾರೆ.
ಅಲ್ಲದೆ, ಶುದ್ಧ ಹಸುವಿನ ತುಪ್ಪದಿಂದ ತಯಾರಿಸಿದ ರಘುಪತಿ ಲಡ್ಡುಗಳನ್ನು ಆಗಸ್ಟ್ 5 ರಂದು ಬಿಹಾರದ ವಿವಿಧ ಭಾಗಗಳಲ್ಲಿ ಭಗವಾನ್ ರಾಮ ಮತ್ತು ಹನುಮಮಂತನ ಭಕ್ತರಿಗೆ ವಿತರಿಸಲು ನಿರ್ಧರಿಸಲಾಗಿದೆ.
ಆಚಾರ್ಯ ಕಿಶೋರ್ ಅವರ ಪ್ರಕಾರ, ಮಹಾವೀರ್ ಮಂದಿರ ಟ್ರಸ್ಟ್ ಈಗಾಗಲೇ ಅಯೋಧ್ಯೆ ರಾಮ ದೇವಾಲಯದ ಟ್ರಸ್ಟ್ಗೆ 2 ಕೋಟಿ ರೂ. ದೇಣಿಗೆಯನ್ನು ನೀಡಿದೆ, ಅಯೋಧ್ಯೆಯಲ್ಲಿ ಭವ್ಯ ರಾಮ ದೇವಾಲಯ ನಿರ್ಮಾಣಕ್ಕಾಗಿ ಒಟ್ಟು 10 ಕೋಟಿ ರೂಪಾಯಿಗಳನ್ನು ಅದು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.