ಭಾರತ 2000 ವರ್ಷಗಳಿಂದ ಪಾಶ್ಚಿಮಾತ್ಯ ನಾಗರಿಕತೆಯ ಯುದ್ಧಭೂಮಿಯಾಗಿತ್ತು. ವಿಸ್ತರಣೆಯ ವಿನೋದಕ್ಕಾಗಿ ಅಲೆಕ್ಸಾಂಡರ್ ಇಲ್ಲಿಗೆ ಬಂದ, ನಂತರ ಮಂಗೋಲರು, ಶುನರು [ಸಾಕಾ], ಕುಶನರು, ಮತ್ತು ಹನ್ಸ್ ಮುಂತಾದವರು ಭಾರತದ ಸಂಪತ್ತನ್ನು ಲೂಟಿ ಮಾಡಲು ಬಂದರು. ಆದರೆ ಅಂತಿಮವಾಗಿ ನಮ್ಮ ಮಹಾನ್ ಭಾರತೀಯ ನಾಗರಿಕತೆಯೊಂದಿಗೆ ಲೀನರಾದರು. ಪ್ರಾಚೀನ ಗ್ರೀಸ್, ಪರ್ಷಿಯಾ, ಮೆಸೊಪಟ್ಯಾಮಿಯಾ, ಮಂಗೋಲಿಯಾದಿಂದ ಬಂದವರನ್ನು ಇಂದು ಗುರುತಿಸಲು ಸಾಧ್ಯವಿಲ್ಲ. ಹ್ಯುಯನ್ ಸಾಂಗ್, ಫಹ್ಯಾನ್, ಅಲ್ ಬರುನಿಯಂತಹವರು ತಮ್ಮ ತಮ್ಮ ದೇಶಗಳನ್ನು ಶ್ರೀಮಂತ ಮತ್ತು ಬುದ್ಧಿವಂತವನ್ನಾಗಿ ಮಾಡಲು ವೈದಿಕ ಜ್ಞಾನದ ಅನ್ವೇಷಣೆಗಾಗಿ ಭಾರತಕ್ಕೆ ಬಂದರು. ಅವರು ಗೌತಮ ಬುದ್ಧನ ಬೋಧನೆಗಳನ್ನು ಚೀನಾ ಮತ್ತು ಜಪಾನ್ ಸೇರಿದಂತೆ ಏಷ್ಯಾದ ಉತ್ತರ ಭಾಗಗಳಿಗೆ ಹರಡಿದರು.
ಪಶ್ಚಿಮ ಏಷ್ಯಾದಲ್ಲಿ ಸೆಮಿಟಿಕ್ ಪಂಥಗಳ ಉಗಮದ ಬಳಿಕ ಅವುಗಳು ತನ್ನ ಆರಾಧನೆಯನ್ನು ಪ್ರಪಂಚದಾದ್ಯಂತ ಹರಡುವ ಮೋಹವನ್ನು ಬೆಳೆಸಿಕೊಂಡವು. ಕ್ರಿಶ್ಚಿಯನ್ ಧರ್ಮದ ಹೊರಹೊಮ್ಮುವಿಕೆ ಮೊದಲ ಶತಮಾನದಲ್ಲಿ ಕಂಡುಬಂತು. ಕ್ರೈಸ್ತರ ಧಾರ್ಮಿಕ ವಿಸ್ತರಣೆಗೆ ಮಹಾನ್ ಗ್ರೀಕ್, ರೋಮನ್ ಮತ್ತು ಈಜಿಪ್ಟಿನ ನಾಗರಿಕತೆಗಳು ಹಾಳಾಗಿದ್ದವು. ಅವರಿಗೆ ಧರ್ಮವನ್ನು ಒಪ್ಪಿಕೊಳ್ಳುವುದು ಅಥವಾ ನಾಶವಾಗುವುದು ಅವರ ಮುಂದಿದ್ದ ಸವಾಲಾಗಿತ್ತು. ಆದರೆ ನಿಜವಾದ ಅಪಾಯವು ಏಳನೇ ಶತಮಾನದಲ್ಲಿ ಇಸ್ಲಾಂನ ಆಗಮನದೊಂದಿಗೆ ಬಂದಿತು. ಮೊಹಮ್ಮದ್ ತಮ್ಮನ್ನು ಇಸ್ಲಾಂ ಎಂಬ ಹೊಸ ಆರಾಧನೆಯ ಪ್ರವಾದಿ ಎಂದು ಘೋಷಿಸಿಕೊಂಡರು. ನಂತರ ಇದು ಯುರೋಪ್, ಏಷ್ಯಾ ಮತ್ತು ಭಾರತದ ಪೂರ್ವಕ್ಕೆ ಇಸ್ಲಾಂ ಹರಡಿತು. ಮೊದಲು ಮುಸ್ಲಿಮರು ಲೂಟಿಕೋರರಾಗಿ ಬಂದರು, ನಂತರ ಅವರು ಆಕ್ರಮಣಕಾರರಾದರು ಮತ್ತು ಅಂತಿಮವಾಗಿ ಭಾರತೀಯ ಉಪಖಂಡದ ಆಡಳಿತಗಾರರಾದರು. ಈ ಅನ್ಯದೇಶದ ಆಡಳಿತಗಾರರು ಭಾರತವನ್ನು ಆಕ್ರಮಿಸಿ ಲೂಟಿ ಮಾಡುವುದನ್ನು ನಿರಂತರ ಕಾಯಕವಾಗಿಸಿದರು. ಹಿಂದೂಗಳನ್ನು ಮತಾಂತರಗೊಳಿಸಲು ಅವರು ತಮ್ಮ ಖಡ್ಗಗಳನ್ನು ಬಳಸಿದರು. ಅವರು ಬಲವಂತವಾಗಿ ಮತಾಂತರ ಮಾಡಿದರು, ಮಂದಿರಗಳನ್ನು ನಾಶಪಡಿಸಿದರು ಮತ್ತು ಮಂದಿರಗಳ ಮೇಲೆ ಮಸೀದಿಗಳನ್ನು ನಿರ್ಮಿಸಿದರು. ಕಾಬೂಲ್ನಿಂದ ಕನ್ಯಾಕುಮಾರಿಯವರೆಗೆ ಹರಡಿದ್ದ ಅಖಂಡ ಭಾರತದ ಸಮಯದಲ್ಲಿ ಹಿಂದೂಗಳ ಜೊತೆಗೆ ಬೌದ್ಧರು ಮತ್ತು ಸಿಖ್ಖರು ಸೇರಿದಂತೆ ಎಲ್ಲಾ ಸನಾತನಿಗಳ ನಂಬಿಕೆಯ ಮುಖ್ಯ ಕೇಂದ್ರಗಳಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ಕೂಡ ಒಂದು. ಮತಾಂತರ ಮಾಡುವುದು ದೆಹಲಿಯ ಇಸ್ಲಾಮಿಕ್ ಆಡಳಿತಗಾರರಿಗೆ ಒಂದು ದೊಡ್ಡ ಸಾಧನೆಯಾಗಿತ್ತು. ನಂಬಿಕೆಯ ಕೇಂದ್ರವನ್ನು ನಾಶಮಾಡಿ ಅದರ ಮೇಲೆ ಮಸೀದಿಯನ್ನು ನಿರ್ಮಿಸುವ ಮೂಲಕ ಹಿಂದೂಗಳನ್ನು ನೈತಿಕವಾಗಿ ಸೋಲಿಸಲಾಯಿತು. ಆಧುನಿಕ ಇತಿಹಾಸಕಾರರು ಇಸ್ಲಾಮಿಕ್ ಆಕ್ರಮಣವನ್ನು ಚಕ್ರವರ್ತಿ ಅಶೋಕನ ಕಳಿಂಗ ಯುದ್ಧದೊಂದಿಗೆ ಹೋಲಿಸುವ ಮೂಲಕ ಈ ಅಂಶವನ್ನು ತಪ್ಪಾಗಿ ಉಲ್ಲೇಖಿಸುತ್ತಿದ್ದಾರೆ. ಅಶೋಕ ಮಾಡಿದ್ದು ಕೇವಲ ಭೌಗೋಳಿಕ ವಿಸ್ತರಣೆಗೆ ಮಾತ್ರ.
ಆಗಸ್ಟ್ 5, 2020 ರಂದು, ಅತ್ಯಂತ ಪೂಜ್ಯ ಐತಿಹಾಸಿಕ ವ್ಯಕ್ತಿ ಮತ್ತು ಭಗವಾನ್ ವಿಷ್ಣುವಿನ ಏಳನೇ ಅವತಾರ ಶ್ರೀರಾಮ ಜನ್ಮಭೂಮಿಯನ್ನು ಪುನಃ ಪಡೆದುಕೊಳ್ಳಲು ನಡೆಸಿದ ಐದು ನೂರು ವರ್ಷಗಳ ಹೋರಾಟವು ಕೊನೆಗೊಳ್ಳಲಿದೆ. ದೇವಾಲಯದ ಪುನರ್ನಿರ್ಮಾಣದೊಂದಿಗೆ, ವಿಶ್ವಾದ್ಯಂತ 100 ಕೋಟಿ ಹಿಂದೂಗಳ ನಂಬಿಕೆ, ತಾಳ್ಮೆ, ಸಹನೆ, ಸಂವಿಧಾನದ ಮೇಲಿನ ನಂಬಿಕೆ ಮತ್ತು ಪರಿಶ್ರಮವು ಸನಾತನ ಧರ್ಮದ ಮೌಲ್ಯಗಳನ್ನು ಪುನಃ ಸ್ಥಾಪಿಸುತ್ತದೆ.
ನಮ್ಮ ಅಲ್ಪಸಂಖ್ಯಾತರು ತಮ್ಮ ಪೂರ್ವಜರೆಲ್ಲರೂ ಹಿಂದೂಗಳೆಂದು ಅರಿತುಕೊಳ್ಳುವ ಸಮಯ ಇದು. ಇಂದು ಈಜಿಪ್ಟಿನವರು, ಇರಾಕಿಗಳು, ಇರಾನಿಯನ್ನರು ಮತ್ತು ಇಂಡೋನೇಷಿಯನ್ನರು ತಮ್ಮ ಇಸ್ಲಾಮಿಕ್ ಪೂರ್ವ ಪರಂಪರೆ ಬಗ್ಗೆ ಹೆಮ್ಮೆ ಪಡಲಾರಂಭಿಸಿದ್ದಾರೆ. ಪಾಕಿಸ್ಥಾನಿಗಳು ಸಹ ಈಗ ತಮ್ಮ ರಾಜ ಪೊರಸ್ ಅಲೆಕ್ಸಾಂಡರ್ನನ್ನು ಸೋಲಿಸಿದ ಎಂದು ನಂಬುತ್ತಾರೆ! ಹೆಚ್ಚಿನ ಸಂಖ್ಯೆಯ ಪಾಕಿಸ್ಥಾನಿಗಳು ಈಗ ಘಜ್ನಿ, ಘೋರಿ ಮತ್ತು ಬಾಬರ್ನನ್ನು ಪಾಕಿಸ್ಥಾನಕ್ಕೆ ಸೇರದ ಆಕ್ರಮಣಕಾರರು ಎಂದು ಪರಿಗಣಿಸಿದ್ದಾರೆ. ಭಾರತೀಯ ಮುಸ್ಲಿಮರು ಆತ್ಮಾವಲೋಕನ ಮಾಡಿಕೊಂಡು ಮುಖ್ಯವಾಹಿನಿಗೆ ಸೇರಲು ಪ್ರಯತ್ನಿಸುವ ಸಮಯ ಇದು.
ಖ್ಯಾತ ಅಮೇರಿಕನ್ ಇಂಡಿಕ್ ವಿದ್ವಾಂಸ ಶ್ರೀ ನಿಲೇಶ್ ಓಕ್ ಅವರ ಪ್ರಕಾರ, ಭಗವಾನ್ ರಾಮ ಅವರ ತಂದೆ ರಾಜ ದಶರಥ ಅವರ ಜನನವು ಕ್ರಿ.ಪೂ 12300 ವರ್ಷಗಳು, ಅಂದರೆ ಇಂದಿನಿಂದ 14320 ವರ್ಷಗಳ ಹಿಂದೆ. ಭಗವಾನ್ ರಾಮನ ಜನ್ಮದಿನಾಂಕವು ಕ್ರಿ.ಪೂ 12240 ರ ನವೆಂಬರ್ 29 ಆಗಿದೆ. ಓಕ್ನ ಲೆಕ್ಕಾಚಾರವು ಭಗವಾನ್ ರಾಮನ ಜನನದ ಉಲ್ಲೇಖದೊಂದಿಗೆ ವಾಲ್ಮೀಕಿ ರಾಮಾಯಣದಲ್ಲಿ ನೀಡಲಾದ ಖಗೋಳ ಉಲ್ಲೇಖಗಳನ್ನು ಆಧರಿಸಿದೆ, ಇದು ಆಧುನಿಕ ಖಗೋಳವಿಜ್ಞಾನ ಮತ್ತು ವಿಜ್ಞಾನದ ಪ್ರಕಾರ ಸಾಬೀತಾಗಿದೆ. ಅನೇಕ ಐತಿಹಾಸಿಕ ರಚನೆಗಳು ರಾಮನ ಅಸ್ತಿತ್ವದ ಒಂದು ಐತಿಹಾಸಿಕ ಕುರುಹುಗಳಾಗಿವೆ, ಇದನ್ನು ಎಡ ಇತಿಹಾಸಕಾರರು ಪೌರಾಣಿಕ ಪಾತ್ರವಾಗಿ ಚಿತ್ರಿಸಿದ್ದಾರೆ. ಶ್ರೀಲಂಕಾದಲ್ಲಿ, ರಾಮಾಯಣ ಕಾಲಕ್ಕೆ ಸೇರಿದ ಅಶೋಕ ವಾಟಿಕದಂತಹ ಅಥವಾ ಮೇಘನಾಡ್ ಯಜ್ಞವನ್ನು ಮಾಡಿದಂತಹ ಸ್ಥಳಗಳು ಎಂದು ಕರೆಯಲ್ಪಡುವ ಅನೇಕ ಸ್ಥಳಗಳಿವೆ.
ದಕ್ಷಿಣ ಗುಜರಾತ್ನಲ್ಲಿ, ಒಂದು ಅನವಿಲ್ ಬ್ರಾಹ್ಮಣ ಸಮುದಾಯವು ಭಗವಾನ್ ರಾಮರೊಂದಿಗೆ ಶಬರಿಯ ಕುಠಿರದಲ್ಲಿ ಯಜ್ಞವನ್ನು ಮಾಡಿದೆ ಎಂದು ನಂಬಲಾಗಿದೆ. ಈ ಸ್ಥಳವನ್ನು ಅನವಲ್ ಎಂದು ಕರೆಯಲಾಗುತ್ತದೆ. ಯಜ್ಞದಲ್ಲಿ ಭಾಗವಹಿಸಿದವರನ್ನು ಆ ದಿನದಿಂದ ಅನವಿಲ್ ಬ್ರಾಹ್ಮಣರು ಎಂದು ಕರೆಯಲಾಗುತ್ತದೆ. ಆದರೆ ಅಯೋಧ್ಯೆಯಲ್ಲಿ ರಾಮ ಮಂದಿರದ ಪುನರ್ನಿರ್ಮಾಣವನ್ನು ವಿರೋಧಿಸಲು, ಎಡಪಂಥೀಯ ಇತಿಹಾಸಕಾರರು ರಾಮನನ್ನು ಪೌರಾಣಿಕ ವ್ಯಕ್ತಿಯಾಗಿ ಮತ್ತು ರಾಮಾಯಣವನ್ನು ಕಾದಂಬರಿಗಳಾಗಿ ಸ್ಥಾಪಿಸಲು ಪ್ರಯತ್ನಿಸಿದ್ದಾರೆ.
ಆಧುನಿಕ ಇತಿಹಾಸಕಾರರ ಪ್ರಕಾರ, ಮಿರ್ ಬಾಕಿ (ಮೊದಲ ಮೊಘಲ್ ಆಕ್ರಮಣಕಾರ ಬಾಬರ್ನ ಆಪ್ತ) ರಾಮ ಮಂದಿರವನ್ನು ನೆಲಸಮಗೊಳಿಸಿ ಅದರ ಮೇಲೆ ಮಸೀದಿಯನ್ನು ನಿರ್ಮಿಸಿದ. ಆದರೆ ಅಕ್ಬರ್, ಜಹಾಂಗೀರ್ ಮತ್ತು ಶಹಜಹಾನ್ ಅವಧಿಯ ನಂತರವೂ ಭಗವಾನ್ ರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯವಿತ್ತು ಎಂದು ಪರ್ಷಿಯನ್, ಚೈನೀಸ್ ಮತ್ತು ಬ್ರಿಟಿಷ್ ಪ್ರಯಾಣಿಕರ ಆತ್ಮಚರಿತ್ರೆಗಳ ಮೂಲಕ ತಿಳಿದು ಬರುತ್ತದೆ. ಸಿಕಂದರ್ ಲೋಧಿಯಿಂದ ದೆಹಲಿಯನ್ನು ವಶಪಡಿಸಿಕೊಂಡಾಗ ಬಾಬರ್ ನೆಲೆ ನಿಂತುಕೊಳ್ಳಲು ಹೋರಾಡುತ್ತಿದ್ದ. ತನ್ನ ಆಡಳಿತದ ಆರಂಭಿಕ ಹಂತದಲ್ಲೇ ಇಸ್ಲಾಂ ಧರ್ಮವನ್ನು ಹೇರಿದರೆ ಅವನ ವಿರುದ್ಧ ಹಿಂದೂಗಳು ತಿರುಗಿ ಬೀಳುವ ಆತಂಕ ಆತನಿಗೆ ಇತ್ತು. ಔರಂಗಜೇಬನು ಇಸ್ಲಾಂ ಧರ್ಮದ ಕ್ರೂರ ಬೋಧಕ ಮತ್ತು ಅಪರಾಧಿಯಾಗಿದ್ದರಿಂದ ಈ ಘೋರ ಅಪರಾಧವನ್ನು ಮಾಡಲು ಆತನೇ ಕುಮ್ಮಕ್ಕು ನೀಡಿದ್ದ ಮತ್ತು ಕಾಶಿ ಮತ್ತು ಮಥುರಾ ಮತ್ತು ಇತರ ನಲವತ್ತು ಸಾವಿರ ದೇವಾಲಯಗಳೊಂದಿಗೂ ಆತ ಇದೇ ದುಷ್ಕೃತ್ಯವನ್ನು ಎಸಗಿದ್ದಾನೆ.
ಗುಲಾಮಗಿರಿಯ ಸಮಯದಲ್ಲಿ ಜನ್ಮಸ್ಥಳವನ್ನು ಮುಕ್ತಗೊಳಿಸಲು ಹಿಂದೂಗಳು ಹಲವಾರು ಪ್ರಯತ್ನಗಳನ್ನು ಮಾಡಿದರು. ಲಭ್ಯವಿರುವ ದಾಖಲೆಗಳ ಪ್ರಕಾರ, ಮಸೀದಿಯೊಳಗೆ ತ್ರಿಶೂಲವನ್ನು ಸ್ಥಾಪಿಸಿದ ಮತ್ತು ರಾಮ ನಾಮ ಚಿತ್ರಿಸಿದ ಮತ್ತು ಯಜ್ಞವನ್ನು ಮಾಡಿದ ನಿಹಾಂಗ್ ಸಿಖ್ಖರ ಗುಂಪಿನ ವಿರುದ್ಧ ಎಂಡಿ ಸಲೀಮ್ ಎಫ್ಐಆರ್ ದಾಖಲಿಸಿದ್ದ. 1885 ರಲ್ಲಿ ಮಹಂತ್ ರಘುಬರ್ ದಾಸ್ ಅವರು ದೇವಾಲಯದ ಪುನರ್ನಿರ್ಮಾಣಕ್ಕಾಗಿ ಫೈಜಾಬಾದ್ (ಈಗ ಅಯೋಧ್ಯೆ) ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು ಆದರೆ ನ್ಯಾಯಾಲಯ ಅದನ್ನು ವಜಾಗೊಳಿಸಿತು. 1934 ರಲ್ಲಿ ಗೋರಕ್ಷ್ಪೀಠ್ ಗೋರಖ್ಪುರದ ಮಹಂತ್ ದಿಗ್ವಿಜಯ್ ನಾಥ್ ಜಿ ಅವರ ನೇತೃತ್ವದಲ್ಲಿ, ಸಾಧುಗಳು ಮಸೀದಿಯ ಒಂದು ಭಾಗವನ್ನು ಪಡೆದುಕೊಂಡು ಪೂಜೆಯನ್ನು ಮಾಡಲು ಪ್ರಾರಂಭಿಸಿದರು ಆದರೆ ಬ್ರಿಟಿಷರು ಹಾನಿಗೊಳಗಾದ ಭಾಗವನ್ನು ಪುನರ್ನಿರ್ಮಿಸಿದರು. ಹಿಂದೂಗಳು ಜನ್ಮಸ್ಥಳದಲ್ಲಿ ಪೂಜೆ ನಡೆಸಲು ಪ್ರಾರಂಭಿಸಿದ ನಂತರ 1949 ರಲ್ಲಿ ಸರ್ಕಾರ ಈ ಆವರಣವನ್ನು ವಶಪಡಿಸಿಕೊಂಡಿದೆ. ನಂತರ ಈ ವಿಷಯವನ್ನು ನ್ಯಾಯಾಲಯದಲ್ಲಿ ನಿರ್ಮೋಹಿ ಅಖಾಢ ಪ್ರಶ್ನಿಸಿತು.
ಶಾಬಾನೊ ಪ್ರಕರಣವು ಮಹತ್ವದ ತಿರುವು, ಅಲ್ಲಿ ಎಲ್ಲಾ ಭಾರತೀಯ ನಾಗರಿಕರಿಗೆ ಅನ್ವಯವಾಗುವ ಭಾರತೀಯ ಕಾನೂನುಗಳ ಪ್ರಕಾರ ಸುಪ್ರೀಂ ಕೋರ್ಟ್ ಆಕೆಗೆ ಜೀವನಾಂಶವನ್ನು ನೀಡಿತು. ದೇಶದ ಸಂಪ್ರದಾಯವಾದಿ ಮುಸ್ಲಿಂ ನಾಯಕತ್ವ ಮತ್ತು ದಿವಂಗತ ರಾಜೀವ್ ಗಾಂಧಿ ನೇತೃತ್ವದ ಅಂದಿನ ಸರ್ಕಾರವು ಇದನ್ನು ವಿರೋಧಿಸಿತು, ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಸಹಾನುಭೂತಿಯ ಅಲೆಯ ಮೇಲೆ 1984 ರ ಚುನಾವಣೆಯಲ್ಲಿ ಗೆದ್ದಿದ್ದರಿಂದ ಸಂಸತ್ತಿನಲ್ಲಿ ಬಹುಮತವನ್ನು ಪಡೆದಿದ್ದ ರಾಜೀವ್ ಗಾಂಧಿ ಸಂವಿಧಾನವನ್ನು ತಿದ್ದುಪಡಿ ಮಾಡಿದರು, ಗಂಡನಿಂದ ಅಕ್ರಮವಾಗಿ ವಿಚ್ಚೇದನ ಪಡೆದ ಅಸಹಾಯಕ ಮುಸ್ಲಿಂ ಮಹಿಳೆಯ ಪರವಾಗಿ ನೀಡಲಾದ ಸುಪ್ರೀಂಕೋರ್ಟ್ ತೀರ್ಪನ್ನು ರದ್ದುಗೊಳಿಸಿದರು.
ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ನಾಚಿಕೆಬಿಟ್ಟು ಓಲೈಸಿದ ಈ ಪ್ರಕರಣವು ಅಲ್ಪಸಂಖ್ಯಾತರನ್ನು ಓಲೈಸುವ ವಿರುದ್ಧದ ಹಿಂದೂ ಭಾವನೆಗಳನ್ನು ಬಲಪಡಿಸಿತು. ಬಿಜೆಪಿ, ಬೆಳೆಯುತ್ತಿರುವ ಈ ಹಿಂದೂ ಪರಕೀಯ ಭಾವನೆಯ ಸಂಪೂರ್ಣ ಲಾಭವನ್ನು ಪಡೆದುಕೊಂಡು ಅಂತಿಮವಾಗಿ ರಾಮ ಜನ್ಮಭೂಮಿ ಚಳುವಳಿಯನ್ನು ಪ್ರಬಲಗೊಳಿಸಿತು. ಡಿಸೆಂಬರ್ 6, 1992 ರಂದು, ವಿವಾದಿತ ರಚನೆಯನ್ನು ಕರ ಸೇವಕರಿಂದ ಕೆಡವಲಾಯಿತು. ನೊಬೆಲ್ ಪ್ರಶಸ್ತಿ ಪುರಸ್ಕೃತ ವೆಸ್ಟ್ ಇಂಡೀಸ್ನಲ್ಲಿ ಜನಿಸಿದ ಹಿಂದೂ ಲೇಖಕ ದಿವಂಗತ ವಿ.ಎಸ್. ನೈಪಾಲ್ ಈ ಘಟನೆಯನ್ನು ಈ ರೀತಿ ವಿವರಿಸಿದ್ದಾರೆ: “ಮೊದಲ ಮೊಘಲ್ ಚಕ್ರವರ್ತಿ [ಮಸೀದಿ] ಅನ್ನು ಕೆಳಕ್ಕೆ ಬೀಳಿಸುವುದು ಅದ್ಭುತ ಕಲ್ಪನೆ. ಮುಂದಿನ ವರ್ಷಗಳಲ್ಲಿ ಇದು ಒಂದು ದೊಡ್ಡ ಕ್ಷಣವಾಗಿ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. … ಇದು ತನ್ನ ಆತ್ಮವನ್ನು ಮರಳಿ ಪಡೆಯಲು ಶ್ರಮಿಸುತ್ತಿರುವ ಭಾರತದ ಐತಿಹಾಸಿಕ ಸನ್ನಿವೇಶವಾಗಿದೆ”
ಸ್ವತಂತ್ರ ಭಾರತದಲ್ಲಿ 70 ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂಕೋರ್ಟ್ 2019 ರ ಅಕ್ಟೋಬರ್ 27 ರಂದು ರಾಮ ಜನ್ಮಭೂಮಿ ಮಂದಿರ ಪರವಾಗಿ ತೀರ್ಪು ನೀಡಿತು. ಇದು ಹಿಂದೂ ಸಮಾಜದ ಸಹಿಷ್ಣುತೆ ಮತ್ತು ದೇಶದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಯಲ್ಲಿನ ನಂಬಿಕೆಯನ್ನು ತೋರಿಸುತ್ತದೆ.
ಅಯೋಧ್ಯೆಯಲ್ಲಿ ಭವ್ಯ ದೇವಾಲಯದ ನಿರ್ಮಾಣವು ಭಾರತೀಯ ರಾಜಕೀಯದ ಪರಿವರ್ತಕ ಘಟನೆಯಾಗಬೇಕು. ಇಂದಿನಿಂದ, ಭಾರತೀಯರು ಧರ್ಮವನ್ನು ವ್ಯಕ್ತಿಯ ವೈಯಕ್ತಿಕ ವ್ಯವಹಾರವೆಂದು ಪರಿಗಣಿಸಲು ಕಲಿಯಬೇಕು ಮತ್ತು ರಾಜಕೀಯ ಗೆಲುವುಗಳನ್ನು ಗಳಿಸಲು ಅಥವಾ ಚುನಾವಣಾ ವಿಜಯಗಳನ್ನು ಗಳಿಸಲು ಧರ್ಮವನ್ನು ಎಂದಿಗೂ ತರಬಾರದು.
ರಾಮ ಮಂದಿರದ ವಿಷಯದಲ್ಲಿ ಪರಸ್ಪರರ ದ್ವೇಷ ದಿನದಿಂದ ದಿನಕ್ಕೆ ಜೋರಾಗಿ ಬೆಳೆಯುತ್ತಿತ್ತು. ಒಂದು ಸಾಮಾನ್ಯ ಹಿಂದೂವಿನ ಭಾವನೆ ಏನೆಂದರೆ, ನಾವು ಅವರಿಗೆ ಪಾಕಿಸ್ತಾನವನ್ನು ನೀಡಿದ ಮೇಲೂ ಮುಸ್ಲಿಮರು ಮಸೀದಿ ಬಯಸಿದರೆ ಭಾರತದಲ್ಲಿ ಅವರು ಯಾಕೆ ನೆಲಸಿದ್ದಾರೆ? ಮತ್ತು ಮುಸ್ಲಿಮರು ಯಾವಾಗಲೂ ಅಸುರಕ್ಷಿತರಾಗಿರುತ್ತಾರೆ ಏಕೆಂದರೆ ಅವರಿಗೆ ಪಾಕಿಸ್ತಾನ ಸಿಕ್ಕಿದೆ, ಆದರೂ ತಾವು ಇಲ್ಲಿಯೇ ಉಳಿದುಕೊಂಡಿದ್ದೇವೆ ಎಂದು ಹಿಂದೂಗಳು ಭಾವಿಸುತ್ತಾರೆ ಎಂಬ ಕಾರಣದಿಂದ. ಎರಡೂ ಭಾವನೆಗಳು ಮೂಲತಃ ಇರಲಿಲ್ಲ, ಆದರೆ ಓಲೈಕೆಯ ರಾಜಕಾರಣವು ಅದನ್ನು ತಂದಿತು.
70 ವರ್ಷಗಳಿಂದ ಅಯೋಧ್ಯೆ ಮಂದಿರ ವಿಷಯವು ಬಿಜೆಪಿ ವಿರುದ್ಧದ ಎಲ್ಲಾ ಪಕ್ಷಗಳಿಗೆ ವಿವಾದದ ಅಸ್ತ್ರವಾಗಿತ್ತು. ಮಂದಿರ, ಆರ್ಟಿಕಲ್ 370, ಮತ್ತು ಸಾಮಾನ್ಯ ಸಿವಿಲ್ ಕೋಡ್ ಹೆಸರಿನಲ್ಲಿ ಹಿಂದೂಗಳನ್ನು ಧ್ರುವೀಕರಿಸಿದ ಆರೋಪವನ್ನು ಇವರು ಬಿಜೆಪಿ ಮೇಲೆ ಹೊರಿಸುತ್ತಿದ್ದರು. ಅದರೆ ಕಾಂಗ್ರೆಸ್ ತಮ್ಮ ಆಡಳಿತದ 60 ವರ್ಷಗಳಲ್ಲಿ ಈ ಸಮಸ್ಯೆಗಳನ್ನು ಪರಿಹರಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಅವರು ಬಿಜೆಪಿಯನ್ನು ಕೋಮುವಾದಿ ಪಕ್ಷ ಎಂದು ಕರೆಯುತ್ತಿದ್ದರು. ಈಗ ಸತತ ಎರಡನೇ ಅವಧಿಗೆ ಬಿಜೆಪಿ ಅಧಿಕಾರದಲ್ಲಿದ್ದು, ವಿವಾದಾತ್ಮಕ 370 ನೇ ವಿಧಿಯನ್ನು ರದ್ದುಪಡಿಸಲಾಗಿದೆ. ರಾಮ ಮಂದಿರವನ್ನು ಪುನರ್ನಿರ್ಮಿಸಲಾಗುತ್ತಿದೆ. ಸಿಎಎ ಜಾರಿಗೆ ಬಂದಿದೆ. ಅದರ ಪ್ರಣಾಳಿಕೆಯ ಪ್ರಕಾರ ಬಾಕಿ ಉಳಿದಿರುವುದು ಏಕರೂಪ ಸಿವಿಲ್ ಕೋಡ್ ಮಾತ್ರ.
ಅಯೋಧ್ಯೆಯಲ್ಲಿ ಭವ್ಯವಾದ ದೇವಾಲಯದ ನಿರ್ಮಾಣವು ಭಾರತೀಯ ರಾಜಕೀಯದ ಪರಿವರ್ತಕ ಘಟನೆಯಾಗಬೇಕು.
ಯುರೋಪ್ ಮತ್ತು ಉತ್ತರ ಅಮೆರಿಕದ ಆಧುನಿಕ ಕ್ರಿಶ್ಚಿಯನ್ ದೇಶಗಳಿಂದ ನಾವು ಕಲಿಯಬೇಕಾಗಿದೆ. ಅವೆಲ್ಲವೂ ಕ್ರಿಶ್ಚಿಯನ್ ದೇಶಗಳು, ಅವರ ರಾಷ್ಟ್ರೀಯ ಧ್ವಜಗಳು ಪವಿತ್ರ ಶಿಲುಬೆಯ ಸಂಕೇತಗಳನ್ನು ಹೊಂದಿವೆ, ಅವರು ಬೈಬಲ್ ಹಿಡಿದು ಪ್ರತಿಜ್ಞೆ ಮಾಡುತ್ತಾರೆ ಮತ್ತು ಆದರೂ ಅವರು ಉದಾರವಾದಿಗಳು! ತಮ್ಮನ್ನು ಕ್ರಿಶ್ಚಿಯನ್ನರು ಎಂದು ಕರೆಯಲು ಅವರು ಹೆದರುವುದಿಲ್ಲ ಅಥವಾ ನಾಚಿಕೆಪಡುವುದಿಲ್ಲ. ಹಾಗಾದರೆ ನಾವು ನಮ್ಮನ್ನು ಹಿಂದೂಗಳೆಂದು ಕರೆಯಲು ಯಾಕೆ ಹಿಂಜರೆಯುತ್ತೇವೆ ಮತ್ತು ಆಧುನಿಕತೆ ಮತ್ತು ಉದಾರವಾದಿ ಮೌಲ್ಯಗಳಿಂದಲೇ ಯಾಕೆ ಪ್ರತಿಜ್ಞೆ ಮಾಡುತ್ತೇವೆ?
ಈ ದೇಶದ ಮುಸ್ಲಿಮರು ಸುಪ್ರೀಂಕೋರ್ಟ್ ತೀರ್ಪನ್ನು ಬಹುತೇಕ ಸ್ವಾಗತಿಸಿದ್ದಾರೆ. ಈಗ ಸಮಾಜದ ಎಲ್ಲಾ ವರ್ಗದವರು ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಪುನರ್ನಿರ್ಮಾಣದೊಂದಿಗೆ “ರಾಮ-ರಾಜ್ಯ” ದ ಹೊಸ ಯುಗವನ್ನು ನಿರೀಕ್ಷಿಸುತ್ತಿದ್ದಾರೆ. ರಾಮ ಇಲ್ಲದೆ, ‘ರಾಮ-ರಾಜ್ಯ’ ಇರಲು ಸಾಧ್ಯವಿಲ್ಲ.
ಮೂಲ ಲೇಖನ: ಗೋಪಾಲ್ ಗೋಸ್ವಾಮಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.