ನವದೆಹಲಿ: ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಸ್ವದೇಶಿ ಆಗುವತ್ತ ಹೆಜ್ಜೆ ಇಟ್ಟಿದೆ. ಶುಕ್ರವಾರ ಅದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದೊಂದಿಗೆ (ಕೆವಿಐಸಿ) ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಖಾದಿ ಆಯೋಗದಿಂದ ಪೂರೈಕೆಗಳನ್ನು ಪಡೆಯುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ (ಸಿಎಪಿಎಫ್) ಮೊದಲ ಪಡೆಯಾಗಿ ಹೊರಹೊಮ್ಮಿದೆ.
“ಐಟಿಬಿಪಿ ಇಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಯೊಂದಿಗೆ ಮೊದಲ ಒಪ್ಪಂದಕ್ಕೆ ಸಹಿ ಹಾಕಿದೆ. ಆಯೋಗದಿಂದ ಉತ್ಪನ್ನಗಳ ಪೂರೈಕೆ ಪಡೆಯಲಿರುವ ಮೊದಲ ಸಿಎಪಿಎಫ್ ಪಡೆಯಾಗಲಿದೆ. ಐಟಿಬಿಪಿ ಯೋಧರಿಗಾಗಿ ಕೆವಿಐಸಿಯಿಂದ ಅನೇಕ ಆಹಾರ, ಬಟ್ಟೆ ಮತ್ತು ಇತರ ವಸ್ತುಗಳನ್ನು ಮುಂದಿನ ದಿನಗಳಲ್ಲಿ ಖರೀದಿ ಮಾಡಲಾಗುವುದು” ಎಂದು ಐಟಿಬಿಪಿ ಟ್ವೀಟ್ ನಲ್ಲಿ ಹೇಳಿದೆ.
ಒಪ್ಪಂದದ ಪ್ರಕಾರ, ಒಟ್ಟು 1,200 ಕ್ವಿಂಟಾಲ್ ಸಾಸಿವೆ ಎಣ್ಣೆಯನ್ನು ಕೆವಿಐಸಿಯು ಐಟಿಬಿಪಿಗೆ ಒಟ್ಟು 1.73 ಕೋಟಿ ರೂಪಾಯಿಗೆ ಒದಗಿಸಲಿದೆ.
ಕೆವಿಐಸಿಯ ಮೂಲ ಕಚೇರಿಯಲ್ಲಿ ಆಯೋಗದ ಅಧ್ಯಕ್ಷ ವಿನಯ್ ಕುಮಾರ್ ಸಕ್ಸೇನಾ ಮತ್ತು ಐಟಿಬಿಪಿಯ ಪ್ರೊವಿಶನಿಂಗ್ ಡೈರೆಕ್ಟರೇಟ್ ಹಿರಿಯ ಅಧಿಕಾರಿಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಕೆವಿಐಸಿ ಮೂಲಕ ಕಂಬಳಿಗಳು, ಟವೆಲ್, ಸಾಸಿವೆ ಎಣ್ಣೆ, ಯೋಗ ಕಿಟ್, ಆಸ್ಪತ್ರೆ ಬೆಡ್ಶೀಟ್ಗಳು, ಉಪ್ಪಿನಕಾಯಿಗಳನ್ನು ಪಡೆಗಳಿಗೆ ಖರೀದಿಸಬಹುದು ಎಂದು ಐಟಿಬಿಪಿ ಸೂಚಿಸಿದೆ.
ITBP signs the first agreement with Khadi & Village Industries Commission (KVIC) today. First CAPF to have supplies from the Commission. Many food, clothing and other issued items for ITBP jawans will be procured from KVIC in the days to come.#swadeshifirst #Himveers pic.twitter.com/A1USSkArQZ
— ITBP (@ITBP_official) July 31, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.