ಇಸಾಮಾಬಾದ್: ಪಾಕಿಸ್ಥಾನದ ಸೇನೆಯು ಭಾರತದ ಗಡಿ ಭಾಗದಲ್ಲಿ ಹೊಡೆದುರುಳಿಸಿದ್ದ ಡ್ರೋನ್ನಲ್ಲಿದ್ದ ಚಿತ್ರಗಳು ಹಾಗೂ ವೀಡಿಯೋಗಳನ್ನು ಬಿಡುಗಡೆಗೊಳಿಸಿದ್ದು, ಆ ಮೂಲಕ ಈ ಡ್ರೋನ್ ಭಾರತ ಸೇನೆಯದ್ದು ಎಂದು ದೂರಿದೆ.
ಡ್ರೋನ್ ಮೂಲಕ ತೆಗೆಯಲಾದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಪಾಕ್ ಸೇನೆ, ಇದು ಭಾರತದ ಗಡಿ ದಾಟಿ ಪಾಕ್ ನೆಲೆಗೆ ಪ್ರವೇಶಿಸಿದೆ ಎಂದು ಆರೋಪಿಸಿದೆ.
ಆದರೆ ಪಾಕ್ ಆರೋಪವನ್ನು ತಳ್ಳಿ ಹಾಕಿರುವ ಭಾರತ, ಈ ಡ್ರೋನ್ನ್ನು ವೈಮಾನಿಕ ಕಣ್ಗಾವಲಿಗಾಗಿ ಬಳಸಲಾಗಿದ್ದು, ಇದು ಚೀನಾ ನಿರ್ಮಿತ ಕ್ವಾಡ್ಕಾಪ್ಟರ್ ಎಂದು ಹೇಳಿದೆ. ಚೀನಾದ ಅಧಿಕೃತ ಮಾಧ್ಯಮ ವರದಿ ಪ್ರಕಾರ ಈ ಡ್ರೋನ್ ಬೀಜಿಂಗ್ನದ್ದು ಎಂದು ಗುರುತಿಸಲಾಗಿದ್ದು, ಡಿಜೆಐ ಫಾಂಟಮ್ 3 ಎಂಬ ಈ ಡ್ರೋನ್ನ್ನು ಯಾವುದೇ ಸರ್ಕಾರಕ್ಕೆ ಮಾರಾಟ ಮಾಡಿಲ್ಲ ಎಂದು ಹೇಳುವ ಮೂಲಕ ಪಾಕ್ ಆರೋಪ ಇನ್ನಷ್ಟು ಕ್ಷೀಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.