ನವದೆಹಲಿ: ಏರ್ ಇಂಡಿಯಾ 53 ದೇಶಗಳಿಂದ 2.5 ಲಕ್ಷಕ್ಕೂ ಹೆಚ್ಚು ಭಾರತೀಯರನ್ನು ವಂದೇ ಭಾರತ್ ಮಿಷನ್ ಅಡಿಯಲ್ಲಿ ಮರಳಿ ಭಾರತಕ್ಕೆ ಕರೆ ತಂದಿದೆ.
ವಂದೇ ಭಾರತ್ ಮಿಷನ್ನ 5 ನೇ ಹಂತವನ್ನು ಆಗಸ್ಟ್ 1 ರಿಂದ ಪ್ರಾರಂಭಿಸಲಾಗುವುದು ಎಂದು ಏರ್ ಇಂಡಿಯಾ ಇಂದು ಟ್ವೀಟ್ ನಲ್ಲಿ ತಿಳಿಸಿದೆ. ಏರ್ ಇಂಡಿಯಾ ಹಲವಾರು ಅಂತರರಾಷ್ಟ್ರೀಯ ತಾಣಗಳಿಗೆ ಇನ್ನೂ ಹೆಚ್ಚಿನ ವಿಮಾನಗಳನ್ನು ಹಾರಿಸಲು ನಿರ್ಧರಿಸಿದೆ, ಇದಕ್ಕಾಗಿ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಅದು ಹೇಳಿದೆ.
ಕೊರೋನಾವೈರಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದುಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತರಲು ವಂದೇ ಭಾರತ್ ಮಿಷನ್ ಅನ್ನು ಆರಂಭಿಸಿತ್ತು. ಏರ್ ಇಂಡಿಯಾ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಭಾರತೀಯರನ್ನು ಕರೆತರುವ ಕಾರ್ಯದಲ್ಲಿ ಮಗ್ನವಾದವು.
ಜುಲೈ 22 ರ ಹೊತ್ತಿಗೆ, ವಂದೇ ಭಾರತ್ ಮಿಷನ್ ಅಡಿಯಲ್ಲಿ ಒಟ್ಟು 7,88,217 ಭಾರತೀಯ ಪ್ರಜೆಗಳು ಮರಳಿದ್ದಾರೆ. 1,03,976 ಭಾರತೀಯರು ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶದಿಂದ ಭೂ ಗಡಿ ಮೂಲಕ ಮರಳಿದ್ದಾರೆ.
#FlyAI: Under the #VBM, Air India has brought back more than 2.5 lakh Indians from as many as 53 countries. We are launching Phase 5 of #VBM from 1st Aug 2020 & have added many more flights to several International destinations. Details will be announced shortly.
— Air India (@airindiain) July 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.