ನವದೆಹಲಿ: ಮಹಾರಾಷ್ಟ್ರದ ಪುಣೆ ಮೂಲದ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಸಿದ್ಧಪಡಿಸಿರುವ ಪ್ಯಾಥೋಕ್ಯಾಚ್ ಕೋವಿಡ್-19 ಆಂಟಿಜೆನ್ ರ್ಯಾಪಿಡ್ ಪರೀಕ್ಷಾ ಕಿಟ್ ಅನ್ನು ಕೊರೋನಾ ಟೆಸ್ಟ್ ಗೆ ಬಳಸಲು ಐಸಿಎಂಆರ್ ಅನುಮೋದನೆ ನೀಡಿದೆ.
ಸಾರ್ವನಿಕವಾಗಿ ಬಳಕೆಗೆ ಅನುಮತಿ ಪಡೆದ ಮೊದಲ ದೇಶೀಯ ಕೊರೋನಾ ಪರೀಕ್ಷಾ ಕಿಟ್ ಎಂಬ ಖ್ಯಾತಿಗೂ ಈ ಕಿಟ್ ಭಾಜನವಾಗಿದೆ. ಈ ಪರೀಕ್ಷಾ ಕಿಟ್.ಗೆ 450 ರೂ. ಗಳನ್ನು ನಿಗದಿ ಮಾಡಲಾಗಿದೆ. ವಿದೇಶಿ ಕಿಟ್ ಗಳ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಈ ಕಿಟ್ ಮಹತ್ವ ಪಡೆದಿದೆ ಎಂದು ಹೇಳಬಹುದು.
ಈ ಕಿಟ್ ಕುರಿತಂತೆ ಮಾಹಿತಿ ನೀಡಿರುವ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ನ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್ ರಾವಲ್, ಕೋವಿಡ್-19 ನಿಯಂತ್ರಣಕ್ಕೆ ಪೂರಕವಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಸಂಸ್ಥೆ ಮಾಡುತ್ತಲೇ ಬರುತ್ತಿದೆ. ಸ್ವದೇಶೀ ಕಿಟ್ ಗಳ ಬಳಕೆ ಹೆಚ್ಚಿಸುವ ಸಲುವಾಗಿ ಮತ್ತು ವಿದೇಶೀ ಕಿಟ್ ಗಳ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ RT-PCR ತಪಾಸಣಾ ಕಿಟ್ ಗಳನ್ನು ಸಂಸ್ಥೆ ಬಿಡುಗಡೆ ಮಾಡಿರುವುದಾಗಿಯೂ ಅವರು ತಿಳಿಸಿದ್ದಾರೆ. ಸದ್ಯ ಈ ಕಿಟ್ ಗೆ ಐಸಿಎಂಆರ್ ಸಹ ಅನುಮತಿ ನೀಡಿದೆ ಎಂದೂ ಅವರು ಹೇಳಿದ್ದಾರೆ.
ಆಸ್ಪತ್ರೆಗಳು ಮತ್ತು ಕಂಟೈನ್ಮೆಂಟ್ ಏರಿಯಾಗಳಲ್ಲಿ ಈ ರ್ಯಾಪಿಡ್ ಪರೀಕ್ಷ ಕಿಟ್ ಗಳನ್ನು ಬಳಕೆ ಮಾಡಬಹುದು ಎಂದು ಐಸಿಎಂಆರ್ ಈ ಹಿಂದೆಯೇ ಅನುಮತಿ ನೀಡಿತ್ತು. ಸುಸಜ್ಜಿತ ಪ್ರಯೋಗಾಲಯದ ವ್ಯವಸ್ಥೆ ಇಲ್ಲದಿದ್ದರೂ ಈ ಪರೀಕ್ಷಾ ಕಿಟ್ ಗಳನ್ನು ಬಳಸಿ ಪರೀಕ್ಷೆಯನ್ನು ನಡೆಸಬಹುದಾಗಿದ್ದು, ಕೇವಲ 30 ನಿಮಿಷ ಗಳಲ್ಲಿಯೇ ಈ ಕಿಟ್ಗಳ ಮೂಲಕ ಪರೀಕ್ಷೆಗಳನ್ನು ನಡೆಸುವುದು ಸಾಧ್ಯ ಎಂದೂ ಸಂಸ್ಥೆ ಮಾಹಿತಿ ನೀಡಿದೆ. ಇದರಿಂದಾಗಿ ಸೋಂಕಿತರ ಶೀಘ್ರ ಪತ್ತೆ ಮತ್ತು ಐಸೋಲೇಷನ್ ಪ್ರಕ್ರಿಯೆಯೂ ಸುಲಭವಾಗಲಿದೆ ಎಂದೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.