ನವದೆಹಲಿ: ಮುಂದಿನ 5-7 ವರ್ಷಗಳಲ್ಲಿ ನಮ್ಮ ಸಂಸ್ಥೆಯು 75,000 ಕೋಟಿ ರೂಪಾಯಿ ಅಥವಾ ಅಂದಾಜು $10 ಬಿಲಿಯನ್ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಸರ್ಚ್ ಎಂಜಿನ್ ದೈತ್ಯ ಗೂಗಲ್ ಸೋಮವಾರ ಪ್ರಕಟಿಸಿದೆ.
“ಇಂದು, ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಶನ್ ಫಂಡ್ ಅನ್ನು ಘೋಷಿಸಲು ನಾನು ಉತ್ಸುಕನಾಗಿದ್ದೇನೆ. ಈ ಪ್ರಯತ್ನದ ಮೂಲಕ, ಮುಂದಿನ 5-7 ವರ್ಷಗಳಲ್ಲಿ ನಾವು 75,000 ಕೋಟಿ ರೂಪಾಯಿ ಅಥವಾ ಸುಮಾರು $10 ಬಿಲಿಯನ್ ಹಣವನ್ನು ಭಾರತಕ್ಕೆ ಹೂಡಿಕೆ ಮಾಡುತ್ತೇವೆ. ಈಕ್ವಿಟಿ ಹೂಡಿಕೆಗಳು, ಪಾಲುದಾರಿಕೆಗಳು ಮತ್ತು ಕಾರ್ಯಾಚರಣೆಯ, ಮೂಲಸೌಕರ್ಯ ಮತ್ತು ಪರಿಸರ ವ್ಯವಸ್ಥೆಯ ಹೂಡಿಕೆಗಳ ಮಿಶ್ರಣದಿಂದ ನಾವು ಇದನ್ನು ಮಾಡಲಿದ್ದೇವೆ. ಇದು ಭಾರತದ ಭವಿಷ್ಯ ಮತ್ತು ಅದರ ಡಿಜಿಟಲ್ ಆರ್ಥಿಕತೆಯ ಬಗೆಗಿನ ನಮ್ಮ ವಿಶ್ವಾಸದ ಪ್ರತಿಬಿಂಬವಾಗಿದೆ”ಎಂದು ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಗೂಗಲ್ ಫಾರ್ ಇಂಡಿಯಾ ವರ್ಚುವಲ್ ಈವೆಂಟ್ನಲ್ಲಿ ಘೋಷಿಸಿದ್ದಾರೆ.
ಹೂಡಿಕೆಗಳು ಭಾರತದ ಡಿಜಿಟಲೀಕರಣದಲ್ಲಿ ಮುಖ್ಯವಾದ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತವೆ. ಅದು ಅದು ಹಿಂದಿ, ತಮಿಳು, ಪಂಜಾಬಿ ಅಥವಾ ಇನ್ನಾವುದೇ ಆಗಿರಲಿ, ಪ್ರತಿಯೊಬ್ಬ ಭಾರತೀಯನಿಗೂ ತಮ್ಮದೇ ಭಾಷೆಯಲ್ಲಿ ಕೈಗೆಟುಕುವ ಪ್ರವೇಶ ಮತ್ತು ಮಾಹಿತಿಯನ್ನು ಸಕ್ರಿಯಗೊಳಿಸುತ್ತದೆ.
ಭಾರತದ ಅನನ್ಯ ಅಗತ್ಯಗಳಿಗೆ ಆಳವಾಗಿ ಪ್ರಸ್ತುತವಾಗುವ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ನಿರ್ಮಿಸುವುದು. ಆರೋಗ್ಯ, ಶಿಕ್ಷಣ, ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ವ್ಯವಹಾರಗಳು ತಮ್ಮ ಡಿಜಿಟಲ್ ರೂಪಾಂತರವನ್ನು ಕಾಣುತ್ತಿರುವಾಗ ಅಥವಾ ಸಾಮಾಜಿಕ ಒಳಿತಿಗಾಗಿ ತಂತ್ರಜ್ಞಾನ ಮತ್ತು ಎಐ ಅನ್ನು ಸದುಪಯೋಗಪಡಿಸಿಕೊಳ್ಳುವುದು.
ಆನ್ಲೈನ್ ವೇದಿಕೆಯಲ್ಲಿ ಭಾರತ ಭಾರಿ ಪ್ರಗತಿ ಸಾಧಿಸಿದೆ ಎಂದು ಪಿಚೈ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ದೃಷ್ಟಿಕೋನವನ್ನು ಶ್ಲಾಘಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.