ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲಡಾಖ್ನ ನಿಮ್ಮೂಗೆ ಬಂದಿಳಿದ ಕೂಡಲೇ ಸಿಂಧೂ ನದಿಯ ದಡದಲ್ಲಿ ಸಿಂಧು ದರ್ಶನ ಪೂಜೆ ನಡೆಸಿದರು.
ಪೂಜೆಯ ವೀಡಿಯೊ ಇದೀಗ ಎಲ್ಲಡೆ ಹರಿದಾಡಿ ವೈರಲ್ ಆಗುತ್ತಿದೆ, ಪ್ರಧಾನಿ ನರೇಂದ್ರ ಮೋದಿಯವರು ಪವಿತ್ರ ನದಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಇಬ್ಬರು ಪುರೋಹಿತರು ಅವರಿಗೆ ಸಾಥ್ ನೀಡಿದರು.
ಮೋದಿ ಪೂಜೆ ಸಲ್ಲಿಸುವ ವಿಡಿಯೋದಲ್ಲಿ ದೂರದಲ್ಲಿ ಭವ್ಯವಾದ ಪರ್ವತಗಳ ವಿಹಂಗಮ ನೋಟವಿದೆ, ಶಂಖ ಪ್ರತಿಧ್ವನಿಸುವ ನಾದವನ್ನೂ ಆಲಿಸಬಹುದಾಗಿದೆ.
ಪ್ರಧಾನಿ ಮೋದಿ ಅವರು ನಿಮ್ಮೂದಲ್ಲಿ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಮಾತನಾಡಿ, “ಸಿಂಧು ನದಿಯ ಆಶೀರ್ವಾದದಿಂದಾಗಿ ಈ ಭೂಮಿ ಪವಿತ್ರವಾಯಿತು” ಎಂದು ಹೇಳಿ ಸಿಂಧೂ ನದಿಯ ಬಗ್ಗೆ ವರ್ಣನೆ ಮಾಡಿದರು.
ಈಗ ಇಂಡಸ್ ಎಂದೂ ಕರೆಯಲ್ಪಡುವ ಸಿಂಧು ನದಿ ಭಾರತದ ಪವಿತ್ರ ನದಿಗಳಲ್ಲಿ ಒಂದಾಗಿದೆ, ಇದು ಋಗ್ವೇದದಲ್ಲಿ ಪ್ರಮುಖ ಉಲ್ಲೇಖವನ್ನು ಹೊಂದಿದೆ. ಪ್ರತಿ ವರ್ಷ ಸಾವಿರಾರು ಭಕ್ತರು ಸಿಂಧು ದರ್ಶನ ಯಾತ್ರೆ ಮಾಡಲು ಲಡಾಕ್ಗೆ ಬಂದು ಸೇರುತ್ತಾರೆ.
The sound of the conch reverberating through the mountains of Ladakh. The waters of the Sindhu dyed in colours of flowers and offerings- Initiated by none other than the Indian PM
The message: India is here to stay
The most important battle is the psychological one.#ModiInLeh pic.twitter.com/2YEQFoPigH
— Shacind Ananthan (@shacindananthan) July 4, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.