ನವದೆಹಲಿ: ಭಾರತದ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಿರುವ ಚೀನಾದ ವಿರುದ್ಧ ವಿಶ್ವದಾದ್ಯಂತ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಕೆನಡಾದ ಟೊರೊಂಟೊದಲ್ಲಿ ಚೀನಾದ ಕಾನ್ಸುಲೇಟ್ ಜನರಲ್ ಹೊರಗೆ ರೀಜಿನಲ್ ಟಿಬೆಟಿಯನ್ ಯೂತ್ ಕಾಂಗ್ರೆಸ್ ಜನರು ಚೀನಾ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಟಿಬೆಟಿಯನ್ ಜನರು ಈ ವೇಳೆ ಫಲಕಗಳನ್ನು ಹಿಡಿದು ಭಾರತೀಯ ಸೇನೆಗೆ ಧನ್ಯವಾದ ಅರ್ಪಣೆ ಮಾಡಿದ್ದಾರೆ. ಟಿಬೆಟ್ ಮತ್ತು ಭಾರತವನ್ನು ಶ್ಲಾಘಿಸಿದ್ದಾರೆ. “ಟಿಬೆಟ್ ಟಿಬೆಟಿಯನ್ನರಿಗೆ ಮಾತ್ರ ಸೇರಿದೆ” ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಪ್ರತಿಭಟನಾಕಾರರು “ಟಿಬೆಟ್ನಲ್ಲಿ ನರಮೇಧವನ್ನು ನಿಲ್ಲಿಸಿ”, “ಚೀನಾ ಔಟ್ ಆಫ್ ಟಿಬೆಟ್ ನೌ” ಮತ್ತು “ಫ್ರೀ ಟಿಬೆಟ್” ಎಂಬ ಸಂದೇಶಗಳನ್ನು ಹೊಂದಿರುವ ಫಲಕಗಳನ್ನು ಹಿಡಿದಿದ್ದಾರೆ.
ಟಿಬೆಟ್ ಮತ್ತು ಭಾರತಕ್ಕೆ ತಮ್ಮ ಬೆಂಬಲವನ್ನು ತೋರಿಸಲು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲೂ ಪ್ರತಿಭಟನೆಗಳು ನಡೆದವು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೀಜಿನಲ್ ಟಿಬೆಟಿಯನ್ ಯೂತ್ ಕಾಂಗ್ರೆಸ್ ನಡೆಸಿದ ಈ ಪ್ರತಿಭಟನೆಗಳು ಚೀನಾದ ದೂತಾವಾಸದ ಮುಂದೆ ಕೂಡ ನಡೆದವು.
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಮಿಲಿಟರಿ ಒಳನುಸುಳಲು ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ಅವರು ಭಾರತಕ್ಕೆ ಒಗ್ಗಟ್ಟನ್ನು ತೋರಿಸಿ ಪ್ರತಿಭಟಿಸಿದರು.
“ನಾವು ಭಾರತೀಯ ಭೂಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ಒಳನುಗ್ಗುವಿಕೆಯನ್ನು ಬಲವಾಗಿ ಖಂಡಿಸುತ್ತೇವೆ. ಟಿಬೆಟ್ನ ಸ್ವಾತಂತ್ರ್ಯ ಭಾರತದ ಭದ್ರತೆ. ಜೈ ಭಾರತ್ ಜೈ ಟಿಬೆಟ್” ಎಂದು ಘೋಷಣೆ ಕೂಗಿದ್ದಾರೆ.
#WATCH Canada: Regional Tibetan Youth Congress protest against China outside the Chinese Consulate-General in Toronto, raise “Tibet stands with India” & “Thank you Indian Army” slogans. pic.twitter.com/gMVnqIFSNz
— ANI (@ANI) June 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.