ನವದೆಹಲಿ: “ಆತ್ಮನಿರ್ಭರ ಭಾರತ ಅಭಿಯಾನ”ದ ಅಂಗವಾಗಿ ಪಿಎಂ ಫಾರ್ಮಲೈಝೇಶನ್ ಆಫ್ ಮೈಕ್ರೋ ಫುಡ್ ಪ್ರಾಸೆಸಿಂಗ್ ಎಂಟರ್ಪ್ರೈಸಸ್ (ಪಿಎಂ ಎಫ್ಎಂಇ) ಯೋಜನೆಯನ್ನು ಸರ್ಕಾರ ಸೋಮವಾರ ಪ್ರಾರಂಭಿಸಿದೆ.
ಈ ಯೋಜನೆಯನ್ನು ಪ್ರಾರಂಭಿಸಿದ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವ ಹರ್ಸಿಮ್ರತ್ ಕೌರ್ ಬಾದಲ್ ಅವರು, ಈ ಯೋಜನೆಯು ಒಟ್ಟು 35,000 ಕೋಟಿ ರೂ.ಗಳ ಹೂಡಿಕೆಯನ್ನು ಸೃಷ್ಟಿಸಲಿದೆ ಮತ್ತು 9 ಲಕ್ಷ ನುರಿತ ಮತ್ತು ಅರೆ-ನುರಿತ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಮಾಹಿತಿ, ತರಬೇತಿ, ಉತ್ತಮ ಮಾನ್ಯತೆ ಮತ್ತು ಔಪಚಾರಿಕೀಕರಣದ ಮೂಲಕ 8 ಲಕ್ಷ ಘಟಕಗಳಿಗೆ ಲಾಭವಾಗಲಿದೆ ಎಂದು ಹೇಳಿದರು.
“ಅಸ್ತಿತ್ವದಲ್ಲಿರುವ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಉನ್ನತೀಕರಣಕ್ಕಾಗಿ ಆರ್ಥಿಕ, ತಾಂತ್ರಿಕ ಮತ್ತು ವ್ಯವಹಾರ ಬೆಂಬಲವನ್ನು ನೀಡುವ ಉದ್ದೇಶದಿಂದ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಭಾರತದಾದ್ಯಂತ ಕೇಂದ್ರ ಪ್ರಾಯೋಜಿತ ʼಪಿಎಂ ಫಾರ್ಮಲೈಝೇಶನ್ ಆಫ್ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೈಸಸ್ ಯೋಜನೆʼಯನ್ನು ಪ್ರಾರಂಭಿಸಿದೆ. 2020-21 ರಿಂದ 2024-25ರವರೆಗಿನ ಐದು ವರ್ಷಗಳ ಅವಧಿಯಲ್ಲಿ 10,000 ಕೋಟಿ ರೂ.ಗಳ ವಿನಿಯೋಗದೊಂದಿಗೆ ಇದನ್ನು ಜಾರಿಗೆ ತರಲಾಗುವುದು” ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಯೋಜನೆಯಡಿಯಲ್ಲಿನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ 60:40 ಅನುಪಾತದಲ್ಲಿ, ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳೊಂದಿಗೆ 90:10 ಅನುಪಾತದಲ್ಲಿ, ಕೇಂದ್ರಾಡಳಿ ಪ್ರದೇಶಗಳೊಂದಿಗೆ 60:40 ಅನುಪಾತದೊಂದಿಗೆ ಭರಿಸಲಾಗುತ್ತದೆ.
“ಸುಮಾರು 25 ಲಕ್ಷ ಘಟಕಗಳನ್ನು ಒಳಗೊಂಡಿರುವ ಅಸಂಘಟಿತ ಆಹಾರ ಸಂಸ್ಕರಣಾ ಕ್ಷೇತ್ರವು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ 74% ಉದ್ಯೋಗಕ್ಕೆ ಕೊಡುಗೆ ನೀಡುತ್ತದೆ. ಈ ಘಟಕಗಳಲ್ಲಿ ಸುಮಾರು 66% ಗ್ರಾಮೀಣ ಪ್ರದೇಶಗಳಲ್ಲಿವೆ ಮತ್ತು ಅವುಗಳಲ್ಲಿ 80% ಕುಟುಂಬ ಆಧಾರಿತ ಉದ್ಯಮಗಳು ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯ ಒದಗಿಸುತ್ತದೆ ಮತ್ತು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡುತ್ತವೆ. ಈ ಘಟಕಗಳು ಹೆಚ್ಚಾಗಿ ಸೂಕ್ಷ್ಮ ಉದ್ಯಮಗಳ ವರ್ಗಕ್ಕೆ ಸೇರುತ್ತವೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.