News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಭಾರತ ಜಗತ್ತಿನ ಔಷಧಾಲಯ’: SCO ಪ್ರಧಾನ ಕಾರ್ಯದರ್ಶಿ ನೊರೋವ್ ಶ್ಲಾಘನೆ

ನವದೆಹಲಿ: ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜಗತ್ತಿಗೆ ಔಷಧ ಪೂರೈಕೆ ಮಾಡಿ ಸಹಾಯ ನೀಡಿರುವ ಭಾರತವನ್ನು ಶಾಂಘೈ ಕಾರ್ಪೊರೇಶನ್ ಆರ್ಗನೈಸೇಷನ್ (ಎಸ್‌ಸಿಒ)ನ ಪ್ರಧಾನ ಕಾರ್ಯದರ್ಶಿ ವ್ಲಾಡಿಮಿರ್ ನೊರೋವ್ ಶ್ಲಾಘಿಸಿದ್ದಾರೆ. ‘ಭಾರತ ಜಗತ್ತಿನ ಔಷಧಾಲಯ’ ವಾಗಿದ್ದಕ್ಕೆ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಭಾರತದ ಔಷಧೀಯ ಪದ್ಧತಿ ಮತ್ತು ಅಪಾರ ಅನುಭವ, ಜ್ಞಾನದ ಬಗ್ಗೆಯೂ ನೊರೋವ್ ಅವರು ಮಾತನಾಡಿದ್ದಾರೆ. ಪ್ರಾದೇಶಿಕ ಮತ್ತು ಜಾಗತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಭಾರತ ತೆಗೆದುಕೊಂಡ ಉಪಕ್ರಮಗಳನ್ನೂ ನೊರೋವ್ ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ. ಕೊರೋನಾ ಎಂಬ ಆರೋಗ್ಯ, ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಭಾರತವನ್ನು ಕಾಪಾಡುವುದರ ಜೊತೆಗೆ ವಿಶ್ವದ 133 ರಾಷ್ಟ್ರಗಳಿಗೂ ಭಾರತ ನೆರವನ್ನು ನೀಡಿದೆ. ಔಷಧದ ಅಗತ್ಯತೆಯನ್ನು ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿರುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಭಾರತದಲ್ಲಿಯೂ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ರಾಷ್ಟ್ರವನ್ನು ಕಾಪಾಡಿಕೊಳ್ಳುವ ಜೊತೆಗೆ ಇತರ ರಾಷ್ಟ್ರಗಳ ಆರೋಗ್ಯ ಕಾಳಜಿಯನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಇದು ಭಾರತದ ಔದಾರ್ಯತೆಗೆ ಸಾಕ್ಷಿ ಎಂದೂ ನೊರೋವ್ ಹೇಳಿದ್ದಾರೆ. ಇದು ಭಾರತದ ಶಕ್ತಿ ಮತ್ತು ಜವಾಬ್ದಾರಿಯುತ ನಡೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಕೊರೋನಾವೈರಸ್‌ಗೆ ಸಂಬಂಧಿಸಿದಂತೆ ಸಂಶೋಧನೆ, ಲಸಿಕೆ, ಔಷಧಿಗಳನ್ನು ಸಂಶೋಧಿಸುವಲ್ಲಿ ಭಾರತೀಯ ವಿಜ್ಞಾನಿಗಳು, ವೈದ್ಯಕೀಯ ವೃತ್ತಿಪರರು ಪಾಲ್ಗೊಳ್ಳುವ ಮೂಲಕ ಮತ್ತಷ್ಟು ಜಾಗತಿಕ ಸಹಾಯ ಭಾರತೀಯರಿಂದ ಆಗಲಿದೆ ಎಂಬ ಭರವಸೆಯನ್ನೂ ನೊರೋವ್ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಭಾರತದ ಮಾನವೀಯ ಕಾರ್ಯಕ್ಕೆ ಇಡೀ ಜಗತ್ತೇ ಮೆಚ್ಚುಗೆ ಸೂಚಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top