ಇತ್ತೀಚೆಗೆ ಚೀನಾ ಒಂದು ತೀವ್ರವಾದ ಚರ್ಚೆಯ ವಿಷಯವಾಗಿ ಬೆಳೆಯುತ್ತಿದೆ. ಅಂತರ್-ರಾಷ್ಟ್ರೀಯ ಆಡಳಿತ ವೇದಿಕೆಗಳಾಗಲಿ, T.V. ಸ್ಟೂಡಿಯೋಗಳಲ್ಲಿ ನಡೆಯುವ ಚರ್ಚೆಗಳು ಮತ್ತು ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಚೀನಾ ಕುರಿತು ತಿಳಿದುಕೊಳ್ಳುವ ಕುತೂಹಲದ ವಾತಾವರಣ ನಿರ್ಮಾಣವಾಗಿದೆ. ಚೀನಾ ಒಂದು ರಾಜಕೀಯ ಪಕ್ಷ ಮತ್ತು ಇದರ ಕಬ್ಬಿಣದಂತಹ ಮುಷ್ಟಿಯ ಚಾಲನೆಯಲ್ಲಿರುವ ಬಿಗಿಯಾದ ನಿಯಂತ್ರಿತ ದೇಶವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈ ರಾಷ್ಟ್ರವು ಕಡಿಮೆ ವೆಚ್ಚದ ಉತ್ಪಾದನೆಗೆ ಪ್ರಸಿದ್ಧಿ ಪಡೆದಿದೆ. ಅನೇಕ MNC ಗಳು ಚೀನಾವನ್ನು ತಮ್ಮ ಉತ್ಪಾದನಾ ಉದ್ದೇಶಗಳಿಗಾಗಿ ಬಳಸುತ್ತವೆ, ಈ ಅಂಶವು ಅದಕ್ಕೆ ‘ವಿಶ್ವದ ಕಾರ್ಖಾನೆ’ ಎಂಬ ಅಡ್ಡಹೆಸರನ್ನು ಗಳಿಸಿದೆ.
ವಿಶ್ವದ ಅತ್ಯಂತ ಬಲವಾದ (Economic superpower) ಆರ್ಥಿಕ ಶಕ್ತಿಯಾಗಿ ಬೆಳೆಯಲು, ಈ ರಾಷ್ಟ್ರವು ನಡೆಸುತ್ತಿರುವ ಪ್ರಯತ್ನಗಳಿಗೆ ಒಂದು ದೊಡ್ಡ ಉದಾಹರಣೆ ಎಂದರೆ 2013 ರಂದು ಘೋಷಣೆಯಾದ OBOR, ನಂತರ BRI ಎಂದು ಮರುನಾಮಕರಣ ಮಾಡಲಾದ ಉಪಕ್ರಮ. ನಾವು ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ “Silk road” ಬಗ್ಗೆ ಇತಿಹಾಸದ ಪುಟಗಳಲ್ಲಿ ದಾಖಲಾಗಿರುವುದು ನೋಡಿದ್ದೇವೆ. ಮಧ್ಯ ಏಷ್ಯನ್ ಪ್ರದೇಶದ ಮೂಲಕ ಯುರೋಪಿಯನ್ ಖಂಡಕ್ಕೆ ಈ ಮಾರ್ಗವು ಸಂಪರ್ಕ ಕಲ್ಪಿಸುತ್ತದೆ ಎಂದು ತಿಳಿದಿದ್ದೇವೆ. ಹಿಂದೆ ಹೇಗೆ ಇದೊಂದು ವ್ಯಾಪಾರಿಕ ಮಾರ್ಗವಾಗಿತ್ತು, ಅದೇ ರೀತಿ ಇದನ್ನು ಮತ್ತೊಮ್ಮೆ ವ್ಯಾಪಾರದ ಮಾರ್ಗ ಎಂಬಂತೆ ಮತ್ತು ಅದಕ್ಕಿಂತ ದೊಡ್ಡದಾಗಿ ಮಾಡಲು ಹೊರಟಿದೆ ಈ ಚೀನಾ! OBOR (One belt One Road initiative. ಈಗ ಅದನ್ನು BRI ಎಂದರೆ Belt & Road Initiative ಎಂದು ಮರುನಾಮಕರಣ ಮಾಡಲಾಗಿದೆ) ಮುಖಾಂತರ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಗುರುತಿಸಿ, ಅಂತಹ ರಾಷ್ಟ್ರಗಳಿಗೆ ಮೂಲಸೌಕರ್ಯ ನಿರ್ಮಾಣಕ್ಕೆ ಸಹಾಯ ಮಾಡುವ ನೆಪ ಒಡ್ಡಿ, ಹಣವನ್ನು ನೀಡಲಾಗುತ್ತದೆ. ಅಭಿವೃದ್ಧಿಯ ಕೊರತೆ ಇರುವ ಊರಿನಲ್ಲಿ ಬೆಳವಣಿಗೆಯ ವಿಚಾರವನ್ನು ಸುಲಭಗೊಳಿಸಲಾಗುವುದು ಎನ್ನುವ ಒಂದು ಆಲೋಚನೆ. ಇದು ಒಂದು ರೀತಿಯ ಬಲೆಯಾಗಿದೆ. ಆರ್ಥಿಕವಾಗಿ ದುರ್ಬಲ ದೇಶಗಳನ್ನು ಸಾಲದಲ್ಲಿ ಆವರಿಸಿರುವ ಬಲೆ. ಮೂಲಭೂತ ಸೌಕರ್ಯ ಒಪ್ಪಂದಕ್ಕೆ ಒಪ್ಪಿಗೆ ನೀಡಿದ ದೇಶವು ಸಾಲವನ್ನು ಮರುಪಾವತಿಸಲು ಸಾಧ್ಯವಾಗದಲ್ಲಿ, ಆಗ ಆ ದೇಶವು ಚೀನಾದ ಕಮ್ಯುನಿಸ್ಟ್ ಪಕ್ಷದ ಹಿತಾಸಕ್ತಿಗಳಿಗಾಗಿ ಕೆಲಸ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಉದಾಹರಣೆಗಳು ಶ್ರೀಲಂಕಾ ಮತ್ತು ಆಫ್ರಿಕನ್ ಖಂಡದ ಎರಡು ದೇಶಗಳು! ಚೀನಾ ಮತ್ತು ಶ್ರೀಲಂಕಾದ ನಡುವಿನ Mou ಪ್ರಕಾರ, ಶ್ರೀಲಂಕಾದ ಪೂರ್ವ ಕರಾವಳಿಯಲ್ಲಿರುವ ಒಂದು ಬಂದರನ್ನು ಚೀನಾವು ಅಭಿವೃದ್ಧಿಪಡಿಸುವುದು. ಇದಕ್ಕೆ ತಕ್ಕ ಬೃಹತ್ ಸಾಲವನ್ನು ಶ್ರೀಲಂಕಾಗೆ ಪಾವತಿಸಲು ಸಾಧ್ಯವಾಗಲಿಲ್ಲವಾದ್ದರಿಂದ, ಚೀನೀ ಕಮ್ಯುನಿಸ್ಟ್ ಸರ್ಕಾರವು 99 ವರ್ಷಗಳ ಅವಧಿಗೆ ಆ ಬಂದರನ್ನು ಗುತ್ತಿಗೆಯ ರೀತಿಯಲ್ಲಿ ತೆಗೆದುಕೊಂಡಿದ್ದಾರೆ.
Djibouti ಎಂಬ ಆಫ್ರಿಕಾದಲ್ಲಿನ ಒಂದು ದೇಶದಲ್ಲಿ ಚೀನಾ ಅದರ ಮೊಟ್ಟ ಮೊದಲ ಸಾಗರೋತ್ತರ ಮಿಲಿಟರಿ ಬೇಸ್ ಅನ್ನು ಸ್ಥಾಪಿಸಿದೆ !
ನಾವು ನಕ್ಷೆಯಲ್ಲಿ ನೋಡುವಾಗ, ಚೀನಾ ಎಲ್ಲಿದೆ ಮತ್ತು ಶ್ರೀಲಂಕಾ ಮತ್ತು ಆಫ್ರಿಕಾ ಎಲ್ಲಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ವಿದೇಶಿ ಪ್ರಾಂತ್ಯಗಳ ಮಣ್ಣನ್ನು ಆಕ್ರಮಿಸಿಕೊಳ್ಳುವ ತಂತ್ರ ಒಂದು ವಿಷಯ ಆದರೆ (ನಾಶವಾದ ಸ್ವತಂತ್ರ ಟಿಬೆಟ್ನ ನೋವಿನ ಕಥೆಯನ್ನು ಬೌದ್ಧ ಧರ್ಮದ ಗುರುಗಳಾದ – ಪೂಜ್ಯ ದಲೈ ಲಾಮಾ ಅವರು ತಮ್ಮ ಜೀವನಚರಿತ್ರೆಯನ್ನು ವಿವರಿಸಿದ್ದಾರೆ, ಬ್ರಿಟನ್ ಹಾಂಗ್-ಕಾಂಗ್ ಅನ್ನು ಬಿಟ್ಟು ಹೋದಾಗ ಆಕ್ರಮಿಸಿದ ಚೀನೀ ಕಮ್ಯೂನಿಸ್ಟ್ ಪಕ್ಷ ಮತ್ತು ತೈವಾನ್ ಅನ್ನು ಪ್ರತ್ಯೇಕವು ಗುರುತಿಸುವುದಕ್ಕೆ ಯಾವುದೇ ಧ್ವನಿಯನ್ನು ಅನುಮತಿ ಸಿಗದಂತೆ ಮಾಡುವುದು. ಕಮ್ಯುನಿಸ್ಟ್ ಚೀನಾದ ವಿಸ್ತರಣೆಯ ಮಹತ್ವಾಕಾಂಕ್ಷೆಗಳಿಂದ ಇವುಗಳು ಉಂಟಾಗಿದೆ)
ಚೀನಾ ಅದರ ಕಡಲ ಗಾಡಿಗಳಲ್ಲಿ ಏನೇನು ಮಾಡಿದೆ ಎಂಬುದು ಮತ್ತೊಂದು ಪ್ರಶ್ನೆ !
ಅನೇಕ ಉಪಗ್ರಹಗಳು ತೆಗೆದ ಚಿತ್ರಗಳು, ದಕ್ಷಿಣ ಚೀನಾ ಸಮುದ್ರದಲ್ಲಿ ಕೃತಕ ದ್ವೀಪಗಳ ನಿರ್ಮಾಣವನ್ನು ತೋರಿಸಿದೆ ! ಈ ಕೃತಕ ದ್ವೀಪಗಳ ಸೃಷ್ಟಿಯ ಉದ್ದೇಶವೇನು ? ಉಪಗ್ರಹದಿಂದ ತೆಗೆದ ಚಿತ್ರಗಳು ಈ ದ್ವೀಪಗಳಲ್ಲಿ Airstrip ಮತ್ತು ಕಚೇರಿ ಕಟ್ಟಡಗಳನ್ನು ಬಹಿರಂಗಪಡಿಸುತ್ತದೆ. ಹಾಗಾದರೆ ಕೃತಕ ನೌಕಾ ನೆಲೆಯನ್ನು ಸಮುದ್ರದಲ್ಲಿ ನಿರ್ಮಿಸಿಕೊಂಡು, ತನ್ನ ನೌಕೆಯನ್ನು ಬಲಶಾಲಿಯಾಗಿ ಮಾಡುವುದು ಇದರ ಹಿಂದಿರುವ ಉದ್ದೇಶವೇ, ಹೌದಾದರೆ ಯಾಕೆ ಹೀಗೆ ?
ಆಫ್ರಿಕ ಖಂಡದ ದೇಶಗಳಿಂದ ಕಾರ್ಮಿಕರನ್ನು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಪಡೆಯಬಹುದು.
ಇತರ ದೇಶಗಳಲ್ಲಿ ಹೂಡಿಕೆಗಳ ಮುಖಾಂತರ, ಚೀನಾವು ಆ ದೇಶಗಳಿಂದ ಸಂಪನ್ಮೂಲಗಳನ್ನು ಪಡೆದುಕೊಳ್ಳಲು ದಾರಿ ಮಾಡಿಕೊಳ್ಳುತ್ತಿದೆ. ಚೀನಾದ ರಫ್ತು-ಆಮದು ಬ್ಯಾಂಕ್ (Export-Import Bank of China) ಆಫ್ರಿಕಾದಲ್ಲಿ ರೈಲುಗಳು / ಅಣೆಕಟ್ಟುಗಳ ನಿರ್ಮಾಣ ಮಾಡಲು ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತದೆ. ಇದು ಚೀನಾದ ವಿಸ್ತರಣೆಗಾಗಿ ಅನುಕೂಲಕರವಾಗಿದೆ.
ಇದೆಲ್ಲವೂ ಕೇವಲ ಅಕ್ಷರಶಃ (ಭೌಗೋಳಿಕ) ಅಮೇರಿಕಾದ ಹತ್ತಿರ ಬರಲು ಪ್ರಯತ್ನಿಸುತ್ತಿರುವ ಮಹತ್ವಾಕಾಂಕ್ಷಿ ಚೀನಾದ ನಿದರ್ಶನಗಳಾಗಿದ್ದರೂ ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆರ್ಥಿಕ ಶಕ್ತಿಯಲ್ಲಿಯೂ ಸಹ ಹತ್ತಿರ ಬರುವ ಅಥವಾ ಹಿಂದಿಕ್ಕುವ ಪ್ರಯತ್ನ ಅಂತಾ ಹೇಳಿದರು ತಪ್ಪೇನಿಲ್ಲ.
ದೀರ್ಘಕಾಲದವರೆಗೆ ಇದು ಅಮೆರಿಕದ ಸ್ಥಾನವಾಗಿದೆ. ಒಂದು ವೇಳೆ ಚೀನಾ ಈ ಸ್ಥಾನವನ್ನು (Economic superpower) ಪಡೆದುಕೊಂಡರೆ, ಅಂತ ಸ್ಥಾನ ಪಡೆದುಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದ ಮೊದಲ ದೇಶ ಎಂದೆನಿಸಿಕೊಳ್ಳುತ್ತದೆ.
ಇದು ಒಂಥರಾ ಯುದ್ಧವೇ, Missile – Improvised armour ಗಳ ಯುದ್ಧ ಅಲ್ಲ, ಇದೊಂದು ಆರ್ಥಿಕ ಯುದ್ಧ (Economic warfare) !
May 28, 2020 ರಂದು ಭಾರತದ ಲಡಾಖ್ ಗಡಿ ಪ್ರದೇಶದ ಸೋನಮ್ ವಾಂಗ್ಚುಕ್ ಅವರು ಯೂಟ್ಯೂಬ್ ಮುಖಾಂತರ ಭಾರತೀಯರಿಗೆ ಒಂದು ಸಂದೇಶವನ್ನು ಕೊಟ್ಟರು. ಅದು ಏನೆಂದರೆ, ಸೇನೆಯು ಬುಲೆಟ್ ನಿಂದ, ನಾಗರೀಕರು ತಮ್ಮ Wallet ನಿಂದ.
ಚೀನಾ ಇಂದು ಲಡಾಖ್ ಗಡಿಯ ಗಲ್ವಾನ್ ವ್ಯಾಲಿಯ LaC (Line of Actual Control) ನಲ್ಲಿ ತನ್ನ ಸೈನ್ಯವನ್ನು ನಿಯೋಜಿಸಿದೆ, ಏಕೆಂದರೆ ಭಾರತವು Coronavirus ಮೂಲವನ್ನು ಪತ್ತೆ ಹಚ್ಚಲು ಸ್ವತಂತ್ರ ಅಂತರರಾಷ್ಟ್ರೀಯ ತನಿಖೆ ನಡೆಸಲು ಒತ್ತಾಯಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಇದರ ಹಿಂದೆ ಅನೇಕ ಬಾರಿ ಗಡಿಯನ್ನು ಉಲ್ಲಂಘಿಸಿರುವುದು ಮತ್ತು ತನ್ನ ಮಹತ್ವಾಕಾಂಕ್ಷೆಯ BRI ಯೋಜನೆಯನ್ನು ಬಲವಂತವಾಗಿ ಭಾರತೀಯ ಭೂಪ್ರದೇಶದ ಮೂಲಕ ಮುಂದುವರಿಸಲು ಪ್ರಯತ್ನಿಸಿದೆ.
ಭಾರತೀಯ ಗಡಿಗಳಲ್ಲಿನ ನಿರಂತರ ಉದ್ವಿಗ್ನ ಪರಿಸ್ಥಿತಿಗೆ ಪರಿಹಾರವು ಚೀನಾವನ್ನು ಆರ್ಥಿಕವಾಗಿ ಬಹಿಷ್ಕರಿಸುವುದು. ಹಾಗೆ ಮಾಡುವುದರ ಮೂಲಕ, ಚೀನಾದ ಆರ್ಥಿಕ ಪ್ರಭಾವ ಕೆಳಗೆ ಬರಬಹುದು. ಪ್ರತಿಯಾಗಿ ಇದು ಮಿಲಿಟರಿ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ನೇರವಾಗಿ ಇವೆರಡಕ್ಕೂ ಪರಸ್ಪರ ಸಂಬಂಧ ಇದೆ. ಚೀನೀ App ಗಳನ್ನು uninstall ಮಾಡಲು ಪ್ರಾರಂಭಿಸಿವುದು ಮತ್ತು ಚೀನೀ ಅಂಶಗಳನ್ನು ನಿಧಾನವಾಗಿ ಬದಲಿಸುವ ಮೂಲಕ, ಪ್ರಧಾನಿಗಳು ಹೇಳಿದಂತೆ ನಮ್ಮ ಭಾರತವನ್ನು ವ್ಯವಸ್ಥಿತವಾಗಿ ಒಂದು ಸ್ವಾವಲಂಬಿ ರಾಷ್ಟ್ರ ಎನ್ನುವ ದಿಕ್ಕಿನಲ್ಲಿ ಬಲಿಷ್ಠವಾಗಿ ಮುನ್ನಡೆಸಿಕೊಂಡು ಹೋಗಬಹುದು.
ಚೀನಾವು ಕೊರೋನವೈರಸ್ನ ಜಿನೊಮ್ ಅನುಕ್ರಮವನ್ನು (Genome sequence) ಸ್ವಲ್ಪ ಮುಂಚಿತವಾಗಿ ಬಿಡುಗಡೆ ಮಾಡುತ್ತಿದ್ದರೆ, ನಾವು ಔಷಧಿಗಳನ್ನು ಸಂಶೋಧಿಸುವಲ್ಲಿ ಸ್ವಲ್ಪ ಹೆಚ್ಚು ಮುಂದುವರಿಯುತ್ತಿದ್ದೆವೋ ಏನೊ ? ಚೀನಾ ಇಂತಹ ರೋಗದ ಉಪಸ್ಥಿತಿಯನ್ನು ಮರೆಮಾಡಬಾರದಿತ್ತು. ಇದು ವಿಶ್ವದ ಪ್ರಗತಿಯನ್ನು ಸ್ಥಗಿತಗೊಳಿಸಿದಲ್ಲದೆ, ಜಾಗತಿಕವಾಗಿ ಲಕ್ಷಾಂತರ ಮುಗ್ಧ ಜೀವಗಳನ್ನು ಪ್ರಭಾವಿಸಿದೆ. ಈ ದರಿದ್ರ ರೋಗದ ಎಲ್ಲಾ ಸಂತ್ರಸ್ತರು ತಾವು ಏಕೆ ಇದನ್ನು ಅನುಭವಿಸುತ್ತಿದ್ದೇವೆ ಎಂಬುದರ ಬಗ್ಗೆ ಧ್ವನಿರಹಿತ ಮತ್ತು ಸುಳಿವು ಇಲ್ಲದೆ ನೋವು ಅನುಭವಿಸುತ್ತಿದ್ದಾರೆ.
ಮಾಹಿತಿಯನ್ನು ಅಡಗಿಸುವುದು ಮತ್ತು ವಿಸ್ತರಿಸಲು ಪ್ರಯತ್ನಿಸುತ್ತಿರುವುದು, ಚೀನೀ ಕಮ್ಯುನಿಸ್ಟ್ ಪಕ್ಷದ ಮೂಲಭೂತ ಚಿಂತನೆಯಾಗಿದೆ.
Press Freedom Index ಶ್ರೇಯಾಂಕದ ಪ್ರಕಾರ, 180 ನೇ ಸ್ಕೋರ್ನ ದೇಶವು ಪತ್ರಿಕೋದ್ಯಮಕ್ಕೆ ಅತ್ಯಂತ ಅಪಾಯಕಾರಿ ದೇಶವಾಗಿದೆ. ಇದರಲ್ಲಿ ಚೀನಾ 177 ರ ಸ್ಥಾನದಲ್ಲಿದೆ. ಅಂದರೆ ಪ್ರೆಸ್ ಸ್ವಾತಂತ್ರ್ಯಕ್ಕಾಗಿ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು !
ಪತ್ರಕರ್ತರು ಚೀನೀ ಕಮ್ಯುನಿಸ್ಟ್ ಪಾರ್ಟಿಯ (CCP) ನೆಚ್ಚಿನ ಕಾಲಕ್ಷೇಪ ಗುರಿಯಾಗಿದ್ದಾರೆ. CCP ಸಾರ್ವಜನಿಕವಾಗಿ ಮಾಹಿತಿಗಳನ್ನು ಬಿಡುಗಡೆ ಮಾಡುವ ಯಾರನ್ನೂ ಇಷ್ಟಪಡುವುದಿಲ್ಲ. ಅದು ಬೇರೆ ದೇಶದ ಪತ್ರಕರ್ತರೇ, ವಿದ್ಯಾರ್ಥಿಗಳಾಗಲಿ ಅಥವಾ ತನ್ನ ನಾಗರೀಕತೆಯೇ ಆಗಲಿ, ತನ್ನ ಅಧಿಕಾರ ವ್ಯಾಮೋಹಕ್ಕಿಂತ ಬೇರಾವುದೂ ಮುಖ್ಯವಲ್ಲ ಇದಕ್ಕೆ !
ಹಾಂಗ್ ಕಾಂಗ್, ತೈವಾನ್ ಮತ್ತು ಟಿಬೆಟ್ ಅನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ಮತ್ತು ಅವರ ಸ್ವಾತಂತ್ರ್ಯವನ್ನು ಘೋಷಿಸಲು ಅನುಮತಿ ನಿರಾಕರಿಸುವ CCP, 21 ನೇ ಶತಮಾನದ ವಿಸ್ತರಣಾತ್ಮಕ ಕಂಬಳಿ ಆಗಿದೆ.
6 June 1989 ರಂದು Tiananmen Square Massacre, ಚೀನೀಯರು ಅನುಭವಿಸಿದ ಒಂದು ಕರಾಳ ರಾತ್ರಿ. ವಿದ್ಯಾರ್ಥಿಗಳು ಪ್ರಜಾಪ್ರಭುತ್ವವೇ ಚೀನಾದ ಭವಿಷ್ಯ ಎಂದು ಒತ್ತಾಯಿಸಲು ಸಂಗ್ರಹಿಸಿದರು. ಆ ರಾತ್ರಿ, ಚೀನಾ ವಿದ್ಯುತ್ ಅನ್ನು ಕಡಿತಗೊಳಿಸಿ ಮಿಲಿಟರಿ ಟ್ಯಾಂಕ್ ಮತ್ತು ಸೈನಿಕರನ್ನು ವಿದ್ಯಾರ್ಥಿಗಳು ಸೇರಿದ ಜಾಗಕ್ಕೆ ಕಳುಹಿಸಿ ಗುಂಡುಗಳನ್ನು ಹಾರಿಸಿದರು. ಇದು 31 ವರ್ಷಗಳ ಹಿಂದೆ ಸಂಭವಿಸಿದರೂ, ಸತ್ತವರ ನಿಖರವಾದ ಎಣಿಕೆ ಈ ದಿನ ತನಕ ತಿಳಿದಿಲ್ಲ. ಇಂದು CCP ಚೀನಾದ ಒಳಗೇ, ಅದರ ಗಡಿಗಳಲ್ಲಿ ಅಥವಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ, ಅದೇ ವರ್ತನೆಯನ್ನು ಮುಂದುವರಿಸಿದೆ. ಮೊನ್ನೆಯಷ್ಟೇ Chen Qiushi ಎಂಬ video blogger (ಹಿಂದೆ ವಕೀಲರು) covid-19 ಬಗ್ಗೆ ಮಾಹಿತಿ ಹೊರಹಾಕುವ ಒಂದು ವೀಡಿಯೋವನ್ನು ತಯಾರಿಸಿದ್ದರು.
ಮಾನವಕುಲಕ್ಕೆ ತಿಳಿಸುವ ಅವರ ಪ್ರಯತ್ನಗಳ ಕಾರಣ (act of whistleblowing), ಈ ವ್ಯಕ್ತಿಯು ಅಂದಿನಿಂದಲೂ ಕಾಣೆಯಾಗಿದ್ದಾರೆ !
ಕಳೆದುಹೋಗುವ ಮೊದಲು ಇವರ ಮಾತೇನು ಎಂದರೆ, “What sort of Journalist are you, if you don’t dare rush to the frontline in a disaster ?”
ಅಂತಹ ಪದಗಳ ಉದ್ಭವ ಮತ್ತು ಅದಕ್ಕೆ ಕಾರಣವಾದ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲವೇ ?
✍️ ಕೊಚ್ಚಿ ಅನಿಂದಿತ್ ಗೌಡ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.