ನವದೆಹಲಿ: ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಭಾರತದ ಮೊದಲ ಆ್ಯಂಟಿಜೆನ್ ಆಧಾರಿತ ಪರೀಕ್ಷಾ ಕಿಟ್ಗೆ ಅನುಮೋದನೆಯನ್ನು ನೀಡಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಕೋವಿಡ್-19 ಪರೀಕ್ಷೆಗೆ ಇದನ್ನು ಬಳಕೆ ಮಾಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತವು ಪ್ರಸ್ತುತ ದೇಶದಲ್ಲಿ ಪ್ರತಿದಿನ 1.5 ಲಕ್ಷ ಆರ್ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸುತ್ತಿದೆ ಆದರೆ ಹೊಸದಾಗಿ ಅನುಮೋದಿತ ಆ್ಯಂಟಿಜೆನ್ ಆಧಾರಿತ ಪರೀಕ್ಷಾ ಕಿಟ್ ತಂತ್ರವನ್ನು ಬಳಸಿಕೊಂಡು ಪರೀಕ್ಷಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು.
ಅನುಮೋದಿತ ಆ್ಯಂಟಿಜೆನ್ ಪರೀಕ್ಷಾ ಕಿಟ್ಗಳು SARS-CoV-2 ಗೆ ನಿರ್ದಿಷ್ಟ ಆ್ಯಂಟಿಜೆನ್ಗಳನ್ನು ಗುಣಾತ್ಮಕವಾಗಿ ಪತ್ತೆಹಚ್ಚಲು ಕ್ಷಿಪ್ರ ಕ್ರೊಮ್ಯಾಟೋಗ್ರಾಫಿಕ್ ಇಮ್ಯುನೊಸೇ ಆಗಿದೆ. ಇದನ್ನು ದಕ್ಷಿಣ ಕೊರಿಯಾ ಮೂಲದ ಎಸ್ಡಿ ಬಯೋಸೆನ್ಸರ್ ಅಭಿವೃದ್ಧಿಪಡಿಸಿದೆ.
ಪ್ರತಿಯೊಂದು ಕಿಟ್ಗೂ 500 ರೂ.ಗಿಂತ ಕಡಿಮೆ ಬೆಲೆಯಿದೆ ಮತ್ತು ಇದನ್ನು ಕ್ಷೇತ್ರ ಪರಿಸ್ಥಿತಿಗಳಲ್ಲಿ ಬಳಸಲು ಅನುಮತಿಸಲಾಗುತ್ತದೆ. ಲ್ಯಾಬ್ಗಳಲ್ಲಿ ಒಮ್ಮೆ 3-4 ಗಂಟೆಗಳ ಸಮಯ ತೆಗೆದುಕೊಳ್ಳುವ ಆರ್ಟಿಪಿಸಿಆರ್ ಪರೀಕ್ಷೆಗೆ ಬದಲಾಗಿ ಇದು 30 ನಿಮಿಷಗಳಲ್ಲಿ ಫಲಿತಾಂಶಗಳನ್ನು ತೋರಿಸುತ್ತದೆ.
ಪ್ರಸ್ತುತ ಇರುವ ಆರ್ಟಿಪಿಸಿಆರ್ ಪರೀಕ್ಷೆ ಅತ್ಯಂತ ದುಬಾರಿಯಾಗಿದ್ದು, ಪ್ರತೀ ಪರೀಕ್ಷಾ ಕಿಟ್’ಗೆ ರೂ.2,500 ವೆಚ್ಚವಾಗುತ್ತಿದೆ. ಇದಕ್ಕಾಗಿ ತರಬೇತಿ ಪಡೆದ ತಂತ್ರಜ್ಞರಿರುವ ಸೀಮಿತ ಪ್ರಯೋಗಾಲಯಗಳಿಗೆ ಪರೀಕ್ಷೆಗಳಿಗೆ ಕಳುಹಿಸಬೇಕಿತ್ತು. ಆದರೆ, ಈ ಆ್ಯಂಟಿಜೆನ್ ಪರೀಕ್ಷಾ ಕಿಟ್ ಆ ಸಮಸ್ಯೆಗಳನ್ನು ದೂರವಾಗಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.