ಹೈದರಾಬಾದ್: 144 ವರ್ಷಗಳಿಗೊಮ್ಮೆ ನಡೆಯುವ ಗೋದಾವರಿ ಮಹಾ ಪುಷ್ಕರಂನ ಹಿನ್ನಲೆಯಲ್ಲಿ ರಾಜಮುಂಡ್ರಿ ಕೇಂದ್ರ ಬಂಧಿಖಾನೆಯಲ್ಲಿದ್ದ ಕೈದಿಗಳಿಗೆ ಗೋದಾವರಿಯ ಪವಿತ್ರ ತೀರ್ಥವನ್ನು ಪ್ರೋಕ್ಷಣೆ ಮಾಡಿ ಅವರನ್ನು ಶುದ್ಧೀಕರಣ ಮಾಡಲಾಯಿತು.
ಈ ಜೈಲಿನಲ್ಲಿರುವ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಕೈದಿಗಳು ಮಹಾ ಪುಷ್ಕರಂನಲ್ಲಿ ಭಾಗವಹಿಸಲು ಅನುಮತಿಯನ್ನು ಕೇಳಿದ್ದರು. ಆದರೆ ಭದ್ರತೆಯ ಕಾರಣಕ್ಕಾಗಿ ಇವರಿಗೆ ಅನುಮತಿ ನಿರಾಕರಿಸಲಾಗಿತ್ತು.
ಹೀಗಾಗೀ ಅಹೋಬಿಲ ಮಠದ ಸ್ವಾಮೀಜಿಗಳು ಗೋದಾವರಿ ನದಿ ನೀರನ್ನು ತಂದು ಶುಕ್ರವಾರ ಕೈದಿಗಳಿಗೆ ಪ್ರೋಕ್ಷಣೆ ಮಾಡಿದರು. ಈ ಮೂಲಕ ಅವರನ್ನು ಶುದ್ಧೀಕರಣಗೊಳಿಸಿದರು ಮತ್ತು ಪುಷ್ಕರಂನಲ್ಲಿ ಭಾಗವಹಿಸಬೇಕೆಂಬ ಇಚ್ಛೆ ಹೊಂದಿದ್ದ ಅವರನ್ನು ತಕ್ಕಮಟ್ಟಿಗೆ ಸಂತೃಪ್ತಗೊಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.