ಜೋಧಪುರ ಮೂಲದ ಆಯುರ್ವೇದಿಕ್ ಕಂಪೆನಿಯೊಂದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಗಳನ್ನು ತಯಾರಿಸುವ ಮೂಲಕ ಕೊರೋನಾ ಸೋಂಕಿನ ಸಂದರ್ಭದಲ್ಲಿ ಇಮ್ಯುನಿಟಿ ಬೂಸ್ಟರ್ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ನೈಸರ್ಗಿಕವಾಗಿ ಸಿಗುವ ಗಿಡಮೂಲಿಕೆಗಳನ್ನು ಬಳಕೆ ಮಾಡಿ ಈ ಸಂಸ್ಥೆಯ ವೈದ್ಯಕೀಯ ಸಿಬ್ಬಂದಿಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಔಷಧ ತಯಾರಿಕೆಯ ಬಳಿಕ ಅದನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿ ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದು, ಈ ಔಷಧವನ್ನು ಕೊರೋನಾ ವಿರುದ್ಧ ಹೋರಾಟ ನಡೆಸುವವರಿಗೆ ಮತ್ತು ಸೇನಾ ಯೋಧರಿಗೆ ಉಚಿತವಾಗಿ ನೀಡುವ ಕೆಲಸವನ್ನು ಮಾಡುತ್ತಿದೆ.
ಕೊರೋನಾ ಸಂಕಷ್ಟ ಆರಂಭವಾದ ದಿನಗಳಿಂದ ಹಿಡಿದು ಈವರೆಗೆ ಸುಮಾರು 67,000 ಇಮ್ಯುನಿಟಿ ಬೂಸ್ಟಿಂಗ್ ಕಿಟ್ಗಳನ್ನು ಸಂಸ್ಥೆ ಉಚಿತವಾಗಿ ಹಂಚಿದೆ. ಕೊರೋನಾ ಆರಂಭವಾದ ದಿನಗಳಿಂದ ಹಿಡಿದು ಈ ವರೆಗೆ ಆಯುರ್ವೇದ ಗಿಡಮೂಲಿಕೆಗಳನ್ನು ಬಳಕೆ ಮಾಡಿ ಮೂರು ರೀತಿ ಔಷಧಗಳನ್ನು ಈ ಸಂಸ್ಥೆ ತಯಾರಿಸಿದೆ. ಬ್ರಿತಾಯು, ಇಮ್ಯುನ್ಕ್ರೀಸ್, ತ್ರಿಫಲಾ ಎಂಬ ಹೆಸರುಗಳನ್ನು ಈ ಔಷಧಕ್ಕೆ ಇಡಲಾಗಿದ್ದು, ಇವುಗಳನ್ನು ಆರೋಗ್ಯ ರಕ್ಷಣಾ ಸಿಬ್ಬಂದಿಗಳಿಗೆ ಮತ್ತು ದೇಶ ರಕ್ಷಣೆಗಾಗಿ ಹೋರಾಡುವ ಯೋಧರಿಗೆ ಉಚಿತವಾಗಿ ನೀಡುವ ಮೂಲಕ ಅವರ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತಿದೆ.
ಈ ಇಮ್ಯುನಿಟಿ ಬೂಸ್ಟಿಂಗ್ ಔಷಧಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ, ಯೋಧರಿಗೆ, ಹೋಂ ಗಾರ್ಡ್, ಆರೋಗ್ಯ ರಕ್ಷಣಾ ವಲಯದಲ್ಲಿ ಕೊರೋನಾ ವಿರುದ್ಧ ನೇರಾನೇರ ಸೆಣಸಾಡುತ್ತಿರುವ ಆರೋಗ್ಯ ರಕ್ಷಕರಿಗೆ ತಲುಪಿಸುವ ಕೆಲಸವನ್ನು ಸಂಸ್ಥೆ ಯಾವುದೇ ಸ್ವಾರ್ಥ ವಿಲ್ಲದೇ ಮಾಡುತ್ತಿದೆ. ರಾಜಸ್ಥಾನದ ಪಾಲಿ ಮತ್ತು ಜಾಲೋರ್ ಜಿಲ್ಲೆಗಳಲ್ಲಿರುವ ಯೋಧರಿಗೆ ಸಂಸ್ಥೆ ಎಪ್ರಿಲ್ ತಿಂಗಳಿಂದ ತೊಡಗಿದಂತೆ ಈ ಔಷಧವನ್ನು ನೀಡುತ್ತಾ ಬರುತ್ತಿದೆ. ಜೊತೆಗೆ ಈ ಔಷಧೀಯ ಕಿಟ್ ಗಳನ್ನು ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೂ ಉಚಿತವಾಗಿ ನೀಡಲಾಗಿದೆ ಎಂದೂ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐಐಟಿ ಜೋಧಪುರ, ಏಮ್ಸ್, ಬಿಎಸ್ಎಫ್, ಇನ್ಕಂ ಟ್ಯಾಕ್ಸ್ ಇಲಾಖೆ ಸೇರಿದಂತೆ ಹಲವಾರು ಬ್ಯಾಂಕ್ ಗಳಿಗೂ ನೀಡುವ ಮೂಲಕ ಕೊರೋನಾ ವಿರುದ್ಧ ಹೋರಾಟದಲ್ಲಿ ತಮ್ಮದೂ ಪಾಲಿದೆ ಎಂಬುದನ್ನು ಅರಿತುಕೊಂಡು ಕೆಲಸ ಮಾಡಿದ್ದಾರೆ.
ಒಂದು ಔಷಧೀಯ ಕಿಟ್ ನಲ್ಲಿ ಮೂರು ಬಗೆಯ ತೊಂಬತ್ತು ಮಾತ್ರೆಗಳಿರುವುದಾಗಿ ಸಂಸ್ಥೆ ತಿಳಿಸಿದೆ. ಈವರೆಗೆ ಸುಮಾರು 60,30,000 ಮಾತ್ರೆಗಳನ್ನು ತಯಾರಿಸಿ ಉಚಿತವಾಗಿ ಹಂಚಲಾಗಿದೆ ಎಂದೂ ಸಂಸ್ಥೆ ಅಧಿಕೃತ ಮಾಹಿತಿ ನೀಡಿದೆ. ಈ ವರೆಗೆ ಸುಮಾರು 50 ಲಕ್ಷಕ್ಕೂ ಅಧಿಕ ರೂ. ಗಳ ಮೌಲ್ಯದ ಮಾತ್ರೆಗಳನ್ನು ತಯಾರಿಸಲಾಗಿ ವಿತರಣೆ ಮಾಡಿರುವುದಾಗಿಯೂ ಸಂಸ್ಥೆ ತಿಳಿಸಿದೆ. ಇಲ್ಲಿ ಒಂದು ದಿನದಲ್ಲಿ 1,50,000 ಮಾತ್ರೆಗಳನ್ನು ತಯಾರು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಹೆಚ್ಚು ಉತ್ಪಾದಿಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಸ್ಥೆಯ ನಿರ್ದೇಶಕ ನಾರಾಯಣ ದಾಸ್ ಪ್ರಜಾಪತಿ, ಈ ಔಷಧಗಳು ಜನರ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿ ಕೆಲಸ ಮಾಡುತ್ತದೆ. ಇದರಿಂದಾಗಿ ಯಾವುದೇ ತೆರನಾದ ಅಡ್ಡ ಪರಿಣಾಮವೂ ಇಲ್ಲ ಎಂಬುದನ್ನು ಪರೀಕ್ಷಿಸಿ ಕಂಡುಕೊಳ್ಳಲಾಗಿದೆ. ಇದು ಜನರಿಗೆ ಯಾವುದೇ ರೀತಿಯ ಇನ್ಫೆಕ್ಷನ್ ಆಗುವಂತಸ ರೋಗಾಣುಗಳು ಅಂಟಿಕೊಳ್ಳದಂತೆ ಸಹಾಯ ಮಾಡುತ್ತದೆ. ಕೊರೋನಾದಂತಹ ಸಂದರ್ಭದಲ್ಲಿ ಇದು ಹೆಚ್ಚು ಪೂರಕವಾಗಿ ಕೆಲಸ ಮಾಡುವ ಭರವಸೆಯೂ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಭಾರತೀಯ ಔಷಧ ಪದ್ಧತಿಗಳ ಮೂಲಕ ಹಾನಿಕಾರಕ ವೈರಸ್ ಗಳಿಂದ ನಮ್ಮನ್ನು ಸಂರಕ್ಷಣೆ ಮಾಡಿಕೊಳ್ಳುವುದೂ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಸಂಸ್ಥೆ ಇಂತಹ ಒಂದು ಪ್ರಯತ್ನಕ್ಕೆ ಕೈ ಹಾಕಿರುವುದಾಗಿಯೂ ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ, ಅದಕ್ಕೂ ಮೊದಲೇ ನಮ್ಮ ಆರೋಗ್ಯ ರಕ್ಷಣೆ, ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ನಾವೇ ಮಾರ್ಗೋಪಾಯಗಳನ್ನು ಅನುಸರಿಸಿದಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜೋಧಪುರದ ಈ ಸಂಸ್ಥೆ ತಮ್ಮ ಸಿಬ್ಬಂದಿಗಳ ಜೊತೆಗೆ ಆರೋಗ್ಯ ರಕ್ಷಕರು ಮತ್ತು ಯೋಧರ ಆರೋಗ್ಯ ರಕ್ಷಣೆಗೂ ಸಹಾಯ ಮಾಡುವ ನಿಟ್ಟಿನಲ್ಲಿ ಕೈ ಗೊಂಡ ಕ್ರಮ ಎಲ್ಲರಿಗೂ ಮಾದರಿ ಎಂದೇ ಹೇಳಬಹುದು.
ರೋಗ ಬಂದ ಮೇಲೆ ಪರಿತಪಿಸುವುದಕ್ಕಿಂತ, ಅದಕ್ಕೂ ಮೊದಲೇ ನಮ್ಮ ಆರೋಗ್ಯ ರಕ್ಷಣೆ, ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ನಾವೇ ಮಾರ್ಗೋಪಾಯಗಳನ್ನು ಅನುಸರಿಸಿದಲ್ಲಿ ಸಂಭಾವ್ಯ ಅನಾಹುತವನ್ನು ತಪ್ಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಜೋಧಪುರದ ಈ ಸಂಸ್ಥೆ ತಮ್ಮ ಸಿಬ್ಬಂದಿಗಳ ಜೊತೆಗೆ ಆರೋಗ್ಯ ರಕ್ಷಕರು ಮತ್ತು ಯೋಧರ ಆರೋಗ್ಯ ರಕ್ಷಣೆಗೂ ಸಹಾಯ ಮಾಡುವ ನಿಟ್ಟಿನಲ್ಲಿ ಕೈ ಗೊಂಡ ಕ್ರಮ ಎಲ್ಲರಿಗೂ ಮಾದರಿ ಎಂದೇ ಹೇಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.